ಗೋಕಾಕ: ಗಣರಾಜ್ಯೋತ್ಸವ ದಿನದಂದು ಅಂಬೇಡ್ಕರ ರವರ ಭಾವಚಿತ್ರ ತೆಗೆಸಿ ಪೂಜೆ ಮಾಡಿ ಅವಮಾನ ಮಾಡಿದ ರಾಯಚೂರ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರನ್ನು ಸೇವೆಯಿಂದ ವಜಾಗೊಳಿಸಲು ಗೋಕಾಕ ನಗರದ ಬಸವೇಶ್ವರ ವೃತ್ತದಲ್ಲಿ ಗೋಕಾಕದ ಶೂನ್ಯ ಸಂಪಾದನಮಠದ ಶ್ರೀ ಮುರುಘರಾಜೆಂದ್ರ ಮಹಾಸ್ವಾಮಿಗಳ ಮುಖಂಡತ್ವದಲ್ಲಿ ಹಾಗೂ ಯುವ ದಲಿತ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ಪ್ರಧಾನ ಮಂತ್ರಿಯವರಿಗೆ ಸಾವಿರಾರು ಪತ್ರ ಬರೆದು ಪತ್ರ ಚಳುವಳಿ ಮಾಡಲಾಯಿತು.
ಈ ಸಮಯದಲ್ಲಿ ಮಾತನಾಡಿದ ಈಶ್ವರ ಗುಡಜ ಅವರು ರಾಯಚೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಸಂವಿಧಾನ ಶಿಲ್ಪಿ ಡಾಕ್ಟರ್ ಅಂಬೇಡ್ಕರ್ ಅವರ ಭಾವಚಿತ್ರ ತೆಗೆಸಿದ ನ್ಯಾಯಾಧೀಶರನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಆಡಿಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿ ಅವರನ್ನು ವೃತ್ತಿಯಿಂದ ವಜಾ ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಂಜುಳಾ ರಾಮಗಾನಟ್ಟಿ, ದೀಪಕ ಇಂಗಳಗಿ, ಗೋವಿಂದ ಕಣಮಡ್ಡಿ, ಚಿಕ್ಕಯ್ಯ ಕನಮಡ್ಡಿ, ವಿಶಾಲ ಮೇಸ್ರ್ತಿ, ಹಣಮಂತ ಮೇಸ್ತ್ರಿ, ಕಿರಣ ಉಳ್ಳಾಗಡ್ಡಿ, ದನಂಜಯ ಪೂಜೇರಿ, ಸ.ಜು ಮೇಸ್ರ್ತಿ, ಮಂಜು ಅಮ್ಮನಗಿ ಉಪಸ್ಥಿತರಿದ್ದರು.