ಮಸ್ಕಿ :ಗಣರಾಜ್ಯೋತ್ಸವ ದಿನದಂದು ರಾಯಚೂರಿನ ಕೋರ್ಟ್ ಆವರಣದಲ್ಲಿ ಜಿಲ್ಲಾ ಮುಖ್ಯನ್ಯಾಯಧೀಶರಾದ ಮಲ್ಲಿಕಾರ್ಜನ ಗೌಡ ಅವರು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಇಟ್ಟರೆ ಕಾರ್ಯಕ್ರಮಕ್ಕೆ ಬರುವುದಿಲ್ಲವೆಂದು ಅವಮಾನಿಸಿರುವುದು ದೇಶದ್ರೋಹ ಕೃತ್ಯ ಕೂಡಲೇ ಅವರನ್ನು ವೃತ್ತಿಯಿಂದ ವಜಾಗೊಳಿಸಬೇಕೆಂದು ಮಸ್ಕಿಯಲ್ಲಿ ವಿವಿಧ ದಲಿತ ಪರ ಸಂಘಟನೆಗಳು ಆಗ್ರಹಿಸಿದವು.
ಪಟ್ಟಣದ ಅಶೋಕ ವೃತ್ತದಲ್ಲಿ ಶುಕ್ರವಾರ ವಿವಿಧ ದಲಿಪರ ಸಂಘಟನೆಗಳ ಪದಾಧಿಕಾರಿಗಳು ಜಮಾಯಿಸಿ ಮುಖ್ಯನ್ಯಾಯಧೀಶ ಮಲ್ಲಿಕಾರ್ಜುನ ಗೌಡ ಅವರ ವಿರುದ್ದ ಘೋಷಣೆಗಳನ್ನು ಕೂಗಿ, ಅವರ ಕೃತ್ಯವನ್ನು ಖಂಡಿಸಿ ಮಾತನಾಡಿದರು. ಕೂಡಲೇ ಮಲ್ಲಿಕಾರ್ಜುನಗೌಡರನ್ನು ವೃತ್ತಿಯಿಂದ ವಜಾಗೊಳಿಸಿ ಅವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ ಬಂಧಿಸುವಂತೆ ಉಪತಹಶೀಲ್ದಾರ ಪ್ರಭಾಕರ್ ಭಟ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು. ಈ ವೇಳೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದ್ದರು.