ಇಂಡಿ: ಇಂದಿನ ಯುವ ಜನತೆ ಹೊಸ ವರ್ಷ ಬಂತು ಅಂತ ಮೋಜು ಮಸ್ತಿಯಲ್ಲಿ ಕಾಲ ಕಳೆಯೋದೆ ಹೆಚ್ಚು, ಆದರೆ ಇಂಡಿ ತಾಲ್ಲೂಕಿನ ಅಂಬೇಡ್ಕರ್ ಯುವಕ ಮಂಡಳಿ ಭೀಮಾ ಕೋರೆಗಾಂವ ವೀರಯೋಧರನ್ನ ನೆನೆದು ವಿಜಯೋತ್ಸವದ ಆಚರಣೆ ಮಾಡಿದರು.
ಇಂಡಿ ಪಟ್ಟಣದ ಪ್ರವಾಸಿ ಮಂದಿರದಿಂದ ಮೇರೆವಣಿಗೆ ಪ್ರಾರಂಭಿಸಿ ಟಿಪ್ಪು ಸುಲ್ತಾನ್ ವೃತ್, ಹೃದಯ ಭಾಗದಲ್ಲಿರುವ ಬಸವೇಶ್ವರ ವೃತ್ ದ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ತೆರಳಿ ಅಂಬೇಡ್ಕರ್ ಪ್ರತಿಮೆಗೆ ಪೂಜೆ ಸಲ್ಲಿಸಿದರು. 01-01-1818 ರಂದು ಪೆಶ್ವೇಗಳ ವಿರುದ್ದ ಹೋರಾಡಿದ ಮಹರ ಜನಾಂಗ ವಿಜಯೋತ್ಸವವನ್ನು ಇಂಡಿ ನಗರದ ನೂರಾರು ಯುವಕರು ಹಾಡು, ನೃತ್ಯದ ಮೆರವಣಿಗೆ ಮಾಡುವ ಮೂಲಕ ಅದ್ದೂರಿಯಾಗಿ ಆಚರಣೆ ಮಾಡಿದರು. ಬಿಜೆಪಿ ಜಿಲ್ಲಾ ರೈತ ಮೂರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ, ಶಾಂತಿ ಸಮಾಜ ಸೇವಾ ಸಂಘದ ಅಧ್ಯಕ್ಷ ಅಯೂಬ್ ನಾಟೀಕಾರ, ಕಾಂಗ್ರೆಸ್ ಮುಖಂಡ ಪ್ರಶಾಂತ ಕಾಳೆ, ಶೀವು ಮೂರಮನ, ಶೀವು ಬಗಲಿ, ಹುಚ್ಚಪ್ಪ ತಳವಾರ, ಸತೀಶ ಕುಂಬಾರ, ಜಾವೀದ ಮೋಮಿನ್, ಆನಂದ ಪವಾರ ಉಪಸ್ಥಿತರು.