ಅಂಬಣ್ಣ ಲಾಳಸೇರಿ ಪ್ರತಿಷ್ಠಾನದಿಂದ ವಿದ್ಯಾರ್ಥಿಗಳಿಗೆ ಅನ್ನ ಸಂತರ್ಪಣೆ
ಇಂಡಿ : ತಾಲೂಕಿನ ಲಚ್ಯಾಣ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಅಂಬಣ್ಣ ಲಾಳಸೇರಿ ಪ್ರತಿಷ್ಠಾನದ ವತಿಯಿಂದ ದಿವಂಗತ ದೈಹಿಕ ಶಿಕ್ಷಕ ಅಂಬಣ್ಣ ಲಾಳಸೇರಿ ಪ್ರಥಮ ಪುಣ್ಯ ಸ್ಮರಣೆ ನಿಮಿತ್ಯ ಇಲ್ಲಿನ ಶಾಲಾ ವಿದ್ಯಾರ್ಥಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.
ದೈಹಿಕ ಶಿಕ್ಷಕ ಎಂ.ಎಸ್. ಪಾಟೀಲ ಮಾತನಾಡಿ ಆದರ್ಶ ದೈಹಿಕ ಶಿಕ್ಷಕ ದಿವಂಗತ ಅಂಬಣ್ಣ ಲಾಳಸೇರಿ ಅವರ ವ್ಯಕ್ತಿತ್ವ ಮಾದರಿಯಾದುದು, ಪವಾಡ ಪುರುಷ ಶ್ರೀ ಸಿದ್ದಲಿಂಗ ಮಹಾರಾಜರ ಮಠದ ಅಂಗಳದ ಬೆಳೆದ ಇದೇ ಶಾಲೆಯಲ್ಲಿ ಸತತ ೧೧ ವರ್ಷ ದೈಹಿಕ ಶಿಕ್ಷಕರಾಗಿ ಸಲ್ಲಿಸಿದ ಅವರು ಹಲವು ವಿದ್ಯಾರ್ಥಿಗಳ ಬಾಳು ಬೆಳಗಿದ್ದಾರೆ ಎಂದರು.
ಇAಡಿ ತಾಲೂಕಾ ದೈಹಿಕ ಶೀಕ್ಷಣಾಧಿಕಾರಿಯಾಗಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದರು. ಲಚ್ಯಾಣದಲ್ಲಿ ರಾಜ್ಯ ಮಟ್ಟದ ಕುಸ್ತಿ ಕಬ್ಬಡ್ಡಿ ಪಂದ್ಯ ಆಯೋಜಿಸಿದ್ದರು ಎಂದರು.
ಲಚ್ಯಾಣ ಗ್ರಾಮದ ವಿದ್ಯಾರ್ಥಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ ಲಾಳಸೇರಿ ಹೆಸರಿನಲ್ಲಿ ಬಹುಮಾನ, ತುಳಜಾಪುರ ಪಾದಯಾತ್ರಿಗಳಿಗೆ ಅವರ ಹೆಸರಲ್ಲಿ ಅನ್ನ ಸಂತರ್ಪಣೆ ನಡೆಸಲಾಗುವದು ಎಂದರು.
ಅಂಬಣ್ಣ ಲಾಳಸೇರಿ ಪ್ರತಿಷ್ಠಾನದಿಂದ ವಿದ್ಯಾರ್ಥಿಗಳಿಗೆ ಅನ್ನ ಸಂತರ್ಪಣೆ


















