ವಿಜಯಪುರ: ಯಾರ ಹುಲಿಯೂ ಆಟವೂ ನಿಂಬೆನಾಡಿನಲ್ಲಿ ನಡೆಯಲ್ಲ ಎಂದು ಕಾಂಗ್ರೆಸ್ ಪಕ್ಷದ ಮುಖಂಡರು ಜಂಟಿ ಸುದ್ದಿಗೋಷ್ಟಿಯಲ್ಲಿ ಗುಡುಗಿದರು.
ಇಂಡಿ ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸುದ್ದಿಗೊಷ್ಠಿ ಉದ್ದೇಶಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಲಿಯಾಸ ಬೋರಾಮಣಿ, ಭೀಮಣ್ಣ ಕೌವಲಗಿ, ಪ್ರಶಾಂತ ಕಾಳೆ, ಅವಿನಾಶ್ ಬಗಲಿ, ಯಮುನಾಜಿ ಸಾಳೆಂಕೆ, ಶ್ರೀಕಾಂತ್ ಕುಡಿಗನೂರ, ಜಟ್ಟಪ್ಪ ರೋಳ್ಳಿ ಮಾತಾನಾಡಿದರು.
ಜನರ ಪ್ರೀತಿ, ವಿಶ್ವಾಸ, ನಂಬಿಕೆಯ ಮುಂದೆ ಯಾವ ರಾಜಕೀಯ ಚದುರಂಗದ ಆಟ ನಡೆಯೋದಿಲ್ಲ. ಆದರೆ ಬಿಜೆಪಿ ಮುಖಂಡರ ಆರೋಪಕ್ಕೆ ಉತ್ತರ ನೀಡಿದವ್ರು, ಶಾಸಕ ಪಾಟೀಲ್ ಸದಸ್ಯರಿಗೆ ಅಭಿವೃದ್ಧಿಯ ಭರವಸೆ ನೀಡಿದರು. ಪುರಸಭೆ ಆಡಳಿತದಿಂದ ಜನತೆ ಅಭಿವೃದ್ಧಿ ಆಗುವಂತಹ ಎಲ್ಲಾ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಹೇಳಿದ್ದರು,ಮಾತಿನಂತೆ ನಡೆದಕೊಂಡಿದ್ದಾರೆ.ಆದರೆ ಮೊನ್ನೆ ನಡೆದ ಪುರಸಭೆ ಚುನಾವಣೆಯಲ್ಲಿ ಇಂಡಿ ಪಟ್ಟಣದ ಪ್ರತಿಷ್ಠಿತ ಮನೆತನದ ಭೀಮನಗೌಡ ಪಾಟೀಲ್ ರಿಗೆ ಅನ್ಯಾಯವಾಗಿದೆ ಎಂದು ಪ್ರತಿಭಟನೆ ಮಾಡಿದ್ದೇವೆ ವಿನಃ ಬೇರೊಂದು ಕಾರಣವಿಲ್ಲ. ಅದು ಹೈಡ್ರಾಮ, ಹೈಜಾಕ್ ಎಂಬ ಮಾತುಗಳು ಸತ್ಯಕ್ಕೆ ದೂರವಾಗಿವೆ ಎಂದು ಸ್ವಷ್ಟ ಪಡಿಸಿದರು. ಇನ್ನು ಮೊನ್ನೆ ನಡೆದ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಯಲ್ಲಿ ನಮ್ಮ ಮನೆಯವರು ನಮಗೆ ಕೈ ಕೊಟ್ಟಾಗ ಈ ಸೋಲಾಗಿದೆ ವಿನಃ ಬಿಜಪಿಯ ಪಕ್ಷದವರಿಂದ ಅಲ್ಲಾ ಎಂದರು. ಆದರೆ ಬಿಜೆಪಿ ಪಕ್ಷದ ಮುಖಂಡರು ಬೇರೆ ಬೇರೆ ಕಾರಣಗಳನ್ನ ನೀಡಿ ತಾಲೂಕಿನ ಅಮಾಯಕ ಜನರಿಗೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ೪೦ ವರ್ಷದಿಂದ ಭಾರ ಕಮಾನನಂತಿರುವ ಸಕ್ಕರೆ ಕಾರ್ಖಾನೆಯಲ್ಲಿ ಗುಂಡಾಗಿರಿಯಿಂದ ಹೇಗೆ ಸಕ್ಕರೆ ಹೊರಗೆ ಬರಲು ಸಾಧ್ಯ ಹೇಳಿ, ಕಾರ್ಖಾನೆ ಬಗ್ಗೆ ತಪ್ಪು ಕಲ್ಪನೆಗಳು ಇದ್ದರೆ ಸಾರ್ವಜನಿಕ ವೇದಿಕೆ ಮಾಡಿ ಗೊತ್ತಾಗುತ್ತೆ. ಇಲ್ಲಿಯವರೆಗೆ ಪಟ್ಟಣದಲ್ಲಿ ೧೧ ದಿನ ಮಾತ್ರ ರಾಜಕೀಯ ವಾತಾವರಣ ಇತ್ತು. ಆದರೆ ೧೨ ದಿನಕ್ಕೂ ರಾಜಕೀಯ ಮಾಡೊದು ಸರಿಯಾದ ಬೆಳವಣಿಗೆ ಅಲ್ಲಾ. ಅಲ್ಲದೇ ಸಂಕ್ರಮಣ ದಿಂದ ಪ್ರಕೃತಿ ಬದಲಾವಣೆಯಾಗಿ ಹೊಸ ವರ್ಷ ಪ್ರಾರಂಭವಾಗುತ್ತೆ ಅಂತಾ ಹೇಳಿದ್ದರು . ಅವರಿಗೆ ಕೇವಲ ಸಂಕ್ರಮಣದ ಬಗ್ಗೆ ಮಾತ್ರ ಗೊತ್ತು ಮರುದಿನ ಕರಿ ಅನ್ನುವ ದಿನ ಕೂಡಾ ಬರುತ್ತೆ ಎಂಬ ವಿಚಾರ ಗೊತ್ತಿಲ್ಲ ಅನ್ಸುತ್ತೆ, ೩೪ ವರ್ಷಗಳಿಂದ ಎಲ್ಲಾ ಸಂಕ್ರಮಣ ಕಂಡುವರಿಗೆ ಇದೇನು ಹೊಸದಲ್ಲ. ಸಂಕ್ರಮಣ ದಿನ ಮತದಾನವಾದರೆ, ಕರಿದಿನ ಮತ ಏಣಿಕೆ ನಡೆಯುತ್ತೆ ಮುಂದಿನ ಸಂಕ್ರಮಣದ ಬಗ್ಗೆ ನಮಗೆ ಗೊತ್ತಿದೆ ಎಂದರು.