ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರೆಗೆ ಸಕಲ ಸಿದ್ಧತೆ: ತಮಟೆ ಸಾರುವ ಮೂಲಕ ಚಾಲನೆ
ವರದಿ : ಚೇತನ್ ಚೇತನ್ ಕುಮಾರ್ ಎಲ್, ಚಾಮರಾಜನಗರ
ಹನೂರು : ಪಟ್ಟಣದ ಶಕ್ತಿ ದೇವತೆಯಾದ ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರೆಗೆ ಇಂದು ತಮಟೆ ಸಾರುವ ಮೂಲಕ ಚಾಲನೆಯನ್ನು ನೀಡಲಾಯಿತು .
ಪೂರ್ವಜರ ಕಾಲದಿಂದಲೂ ಸಹ ಗ್ರಾಮಸ್ಥರೆಲ್ಲರು ಸಹಬಾಳ್ವೆಯಿಂದ ಹಬ್ಬಗಳನ್ನು ಮಾಡುತ್ತ ಬಂದಿರುತ್ತಾರೆ.ಈ
ದೇವಾಲಯವು ಸುಮಾರು 500 ವರ್ಷಗಳ ಇತಿಹಾಸವಿದೆ ಹೊಂದಿರುವ ಹನೂರು ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಾಲಯ ದಿನ ಕಳೆದಂತೆ ಪ್ರಖ್ಯಾತ ಹೊಂದುತ್ತಿದ್ದು ನೆರೆಯರಾಜ್ಯ ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ಕೂಡ ಭಕ್ತ ಸಮೂಹ ದೇವಾಯಲಯಕ್ಕೆ ಆಗಮಿಸುತ್ತಾರೆ ಇನ್ನೂ ವರ್ಷಕ್ಕೆ ಒಂದು ಬಾರಿ ನೆಡೆಯುವ ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರೆಗೆ ಅಪಾರ ಸಂಖ್ಯೆಯ ಭಕ್ತರು ಭೇಟಿ ಕೊಟ್ಟು ತಮ್ಮ ಇಷ್ಟಾರ್ಥಗಳು ನೆರವೇರುವಂತೆ ಕೋರಿ ಪ್ರಾರ್ಥನೆ ಸಲ್ಲಿಸುತ್ತಾರೆ ಅಲ್ಲದೆ ವಿಶೇಷ ಪೂಜಾ ಪುನಸ್ಕಾರದಲ್ಲಿ ಭಾಗಿಯಾಗುತ್ತಾ ಬಂದಿದ್ದಾರೆ. ಅಲ್ಲದೆ ಪ್ರತಿ ಮಂಗಳವಾರ ಮಧ್ಯಾಹ್ನ ಆಗಮಿಸುವ ಸಮಸ್ತ ಭಕ್ತರಿಗೆ ಹಲವು ವರ್ಷಗಳಿಂದ ದಾಸೋಹದ ವ್ಯವಸ್ಥೆಯನ್ನು ಸಮಿತಿವತಿಯಿಂದ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರೆಯ ವಿಶೇಷತೆಗಳು:
ದಿನಾಂಕ 11/3/2025 ರಂದು ಸಾರುವುದು
18/3/2025 ರಂದು ಕಂಬ ಪ್ರತಿಷ್ಠಾಪಾನ .
24/3/2025 : ಸೋಮವಾರ ಜಾಗರೆ ಸಮರ್ಪಣೆ .
25 /3/2025 ಮಂಗಳವಾರ ತಂಪು ಜ್ಯೋತಿ ಸಮರ್ಪಣೆ ಮತ್ತು ರಥೋತ್ಸವ .
26/3/2025 .ಬುಧವಾರ ದೊಡ್ಡಬಾಯಿಬೀಗ ಮತ್ತು ಚಿಕ್ಕಬಾಯಿಬೀಗ.
27/3/2025.ರಂದು ಗುರುವಾರ ಪ್ರಾತಹ ಕಾಲ ಅಗ್ನಿಕುಂಡ ಪ್ರದರ್ಶನ .
28/3/2025 ರಂದು ಶುಕ್ರವಾರ ಆರ್ ಎಸ್ ದೊಡ್ಡಿ ಕೆರೆಯಲ್ಲಿ ಬೆಟ್ಟಳ್ಳಿ ಮಾರಮ್ಮನವರ ತೆಪ್ಪೋತ್ಸವ ವನ್ನು ಏರ್ಪಡಿಸಲಾಗಿದೆ ಸಕಾಲಕ್ಕೆ ಭಕ್ತರು ಆಗಮಿಸಿ ತಾಯಿಯ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಿಯ ಪ್ರಧಾನಅರ್ಚಕರಾದ ರಾಮೂಜೀ ರಾವ್ ತಿಳಿಸಿದರು.