• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ನಡೆಸುವುದು ರೈತ ಸಂಘ ಸಂಪೂರ್ಣ ವಿರೋಧ ವ್ಯಕ್ತಪಡಿಸುತ್ತದೆ

    ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ನಡೆಸುವುದು ರೈತ ಸಂಘ ಸಂಪೂರ್ಣ ವಿರೋಧ ವ್ಯಕ್ತಪಡಿಸುತ್ತದೆ

    ಗಣೇಶ ಚತುರ್ಥಿ & ಈದ್ ಮಿಲಾದ್ ಹಬ್ಬ: ಮದ್ಯ ಮಾರಾಟ ನಿಷೇಧಿಸಿ  ಜಿಲ್ಲಾಧಿಕಾರಿ ಡಾ.ಆನಂದ ಕೆ ಆದೇಶ

    ಗಣೇಶ ಚತುರ್ಥಿ & ಈದ್ ಮಿಲಾದ್ ಹಬ್ಬ: ಮದ್ಯ ಮಾರಾಟ ನಿಷೇಧಿಸಿ  ಜಿಲ್ಲಾಧಿಕಾರಿ ಡಾ.ಆನಂದ ಕೆ ಆದೇಶ

    ಬೆಳೆಹಾನಿ ಸಮೀಕ್ಷೆಯಲ್ಲಿ ಅರ್ಹ ರೈತರು ಬಿಟ್ಟುಹೋಗದಂತೆ ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಡಾ. ಆನಂದ ಕೆ ಸೂಚನೆ

    ಬೆಳೆಹಾನಿ ಸಮೀಕ್ಷೆಯಲ್ಲಿ ಅರ್ಹ ರೈತರು ಬಿಟ್ಟುಹೋಗದಂತೆ ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಡಾ. ಆನಂದ ಕೆ ಸೂಚನೆ

    ವಿಜಯಪುರ- ಬಬಲೇಶ್ವರ ಮಧ್ಯೆ ಸಾಮಾನ್ಯ ಸಾರಿಗೆ ಎರಡು ಬಸ್ಸುಗಳ ಸೇವೆ ಪ್ರಾರಂಭ

    ವಿಜಯಪುರ- ಬಬಲೇಶ್ವರ ಮಧ್ಯೆ ಸಾಮಾನ್ಯ ಸಾರಿಗೆ ಎರಡು ಬಸ್ಸುಗಳ ಸೇವೆ ಪ್ರಾರಂಭ

    ವಿಜಯಪುರ| ಬೃಹತ್‌ ಉದ್ಯೋಗ ಮೇಳ

    ವಿಜಯಪುರ| ಬೃಹತ್‌ ಉದ್ಯೋಗ ಮೇಳ

    ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆಗಳು ಸಹಕಾರಿ – ಅಶೋಕ ದಳವಾಯಿ

    ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆಗಳು ಸಹಕಾರಿ – ಅಶೋಕ ದಳವಾಯಿ

    ತಂದೆ ತಾಯಿ ಸ್ಮರಣಾರ್ಥ ನಾಗರಿಕ ಸಮಾಜದಲ್ಲಿ ಪುಣ್ಯ ಕಾರ್ಯಗಳನ್ನು ಮಾಡುತ್ತಾ ಸಾರ್ಥಕ ಕಾರ್ಯ ಮನಿಯಾರ ಚಾರಿಟಬಲ್ ಟ್ರಸ್ಟ್  ಮಾಡುತ್ತಿದೆ: ಸಚಿವ ದರ್ಶನಾಪೂರ

    ತಂದೆ ತಾಯಿ ಸ್ಮರಣಾರ್ಥ ನಾಗರಿಕ ಸಮಾಜದಲ್ಲಿ ಪುಣ್ಯ ಕಾರ್ಯಗಳನ್ನು ಮಾಡುತ್ತಾ ಸಾರ್ಥಕ ಕಾರ್ಯ ಮನಿಯಾರ ಚಾರಿಟಬಲ್ ಟ್ರಸ್ಟ್  ಮಾಡುತ್ತಿದೆ: ಸಚಿವ ದರ್ಶನಾಪೂರ

    ಮುದ್ದೇಬಿಹಾಳ‌| ಮೊಸಳೆ ಬಲಿಯಾದ ಕಾಶಪ್ಪ ಕುಟುಂಬಸ್ಥರ ನೋವಿಗೆ ಶಾಸಕ‌‌ ನಾಡಗೌಡ ಸ್ಪಂದಿನೆ‌ ಹಾಗೂ ₹25000 ನೆರವನ್ನು ನೀಡಿ ಕುಟುಂಬಕ್ಕೆ ಸಾಂತ್ವನ 

    ಮುದ್ದೇಬಿಹಾಳ‌| ಮೊಸಳೆ ಬಲಿಯಾದ ಕಾಶಪ್ಪ ಕುಟುಂಬಸ್ಥರ ನೋವಿಗೆ ಶಾಸಕ‌‌ ನಾಡಗೌಡ ಸ್ಪಂದಿನೆ‌ ಹಾಗೂ ₹25000 ನೆರವನ್ನು ನೀಡಿ ಕುಟುಂಬಕ್ಕೆ ಸಾಂತ್ವನ 

    ಆಲೂರ ಗ್ರಾಮದಲ್ಲಿ ಆನೆಕಾಲು ರೋಗ ಸಮೀಕ್ಷೆ 120 ಜನರ ರಕ್ತ ಲೇಪನ ಸಂಗ್ರಹ

    ಆಲೂರ ಗ್ರಾಮದಲ್ಲಿ ಆನೆಕಾಲು ರೋಗ ಸಮೀಕ್ಷೆ 120 ಜನರ ರಕ್ತ ಲೇಪನ ಸಂಗ್ರಹ

    ಮಳೆನೀರು ಕೊಯ್ಲು, ಘನತ್ಯಾಜ್ಯ ನಿರ್ವಹಣೆ ಹಾಗೂ ಸೌರಶಕ್ತಿ ಬಳಕೆಯಲ್ಲಿ ಹೆಚ್ಚು ಜಾಗೃತರಾಗಬೇಕು

    ಮಳೆನೀರು ಕೊಯ್ಲು, ಘನತ್ಯಾಜ್ಯ ನಿರ್ವಹಣೆ ಹಾಗೂ ಸೌರಶಕ್ತಿ ಬಳಕೆಯಲ್ಲಿ ಹೆಚ್ಚು ಜಾಗೃತರಾಗಬೇಕು

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಗುಮ್ಮಟ ನಗರಿಯಲ್ಲಿ ಅಖಿಲ ಭಾರತ ಶೈಕ್ಷಣಿಕ ಸಮ್ಮೇಳ..ಯಾವಗಿನಿಂದ ಗೊತ್ತಾ..?

      Voiceofjanata.in

      November 6, 2024
      0
      ಗುಮ್ಮಟ ನಗರಿಯಲ್ಲಿ ಅಖಿಲ ಭಾರತ ಶೈಕ್ಷಣಿಕ ಸಮ್ಮೇಳ..ಯಾವಗಿನಿಂದ ಗೊತ್ತಾ..?
      0
      SHARES
      93
      VIEWS
      Share on FacebookShare on TwitterShare on whatsappShare on telegramShare on Mail

      ನ- 8 ರಂದು ಗುಮ್ಮಟ ನಗರಿಯಲ್ಲಿ ಅಖಿಲ ಭಾರತ ಶೈಕ್ಷಣಿಕ ಸಮ್ಮೇಳ

      ವಿಜಯಪುರ : ಅಖಿಲ ಭಾರತ ಶೈಕ್ಷಣಿಕ ಆಂದೋಲನ ಅಡಿಯಲ್ಲಿ 14 ನೇ ರಾಷ್ಟ್ರೀಯ ಸಮಾವೇಶವನ್ನ ನವೆಂಬರ್ 08, 09 ಮತ್ತು 10 ರಂದು ವಿಜಯಪುರ ನಗರದ ಹೆಸರಾಂತ ಸಿಕ್ಯಾಬ್ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿದೆ.9ಸಿಕ್ಯಾಬ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಆವರಣದಲ್ಲಿ ಎಐಇಎಮ್ ಹಾಗೂ ಸಿಕ್ಯಾಬ್ ಸಂಸ್ಥೆಯ ಸಹಯೋಗದೊಂದಿಗೆ ಅಖಿಲ ಭಾರತ ಶೈಕ್ಷಣಿಕ ಸಮ್ಮೇಳನವನ್ನು ಆಯೋಜಿಸಲಾಗಿದೆ. ಮೂರು ದಿನಗಳ ಕಾಲ ನಡೆಯುವ ಅಖಿಲ ಭಾರತ ಶೈಕ್ಷಣಿಕ ಸಮ್ಮೇಳನಕ್ಕೆ ಆತ್ಮೀಯ ಸಹೋದರ ಸಹೋದರಿಯರನ್ನು ಸ್ವಾಗತಿಸಲಾಗುತ್ತದೆ.
      ಸಮಾವೇಶದ ಉದ್ದೇಶ ಸರ್ವರನ್ನೊಳಗೊಂಡ ಉತ್ತಮ ಗುಣಮಟ್ಟದ ಶಿಕ್ಷಣ, ತಾಂತ್ರಿಕ ಮತ್ತು ಅಂತರ್ಗತ ಶಿಕ್ಷಣ ಬಗ್ಗೆ ವಿಚಾರ ಗೋಷ್ಠಿಗಳು ನಡೆಯಲಿವೆ.

      ಮೂರು ದಿನ ನಡೆಯುವ ಸಮ್ಮೇಳನದಲ್ಲಿ ಪಾಂಡಿತ್ಯಪೂರ್ಣ ಉಪನ್ಯಾಸಗಳು, ಭಾಷಣಗಳು, ತಾಂತ್ರಿಕ ವಿಷಯಗಳ ಗೋಷ್ಠಿಗಳು, ಮಾತ್ರವಲ್ಲದೆ ಯುವ ಮನಸ್ಸುಗಳನ್ನು ಉನ್ನತೀಕರಿಸುವ ಮತ್ತು ಪ್ರೇರೇಪಿಸುವಂತಹ ವಿಶೇಷ ತಜ್ಞರು, ಚಿಂತನಕಾರರು ದೇಶದ, ವಿದೇಶದ ವಿವಿಧ ವಿಶ್ವ ವಿದ್ಯಾಲಯದ ಕುಲಪತಿಗಳು, ನಿವೃತ್ತ ಪ್ರಾಧ್ಯಾಪಕರು, ಸಮುದಾಯದ ನಾಯಕರು, ಸಂಸದರು, ಸಮಾಜ ಸೇವಕರು, ಶಿಕ್ಷಣ ತಜ್ಞರು ಉಪನ್ಯಾಸಗಳನ್ನು ಒಳಗೊಂಡಿದೆ.

      ಮೊದಲ ದಿನ 8 ರಂದು ಮಧ್ಯಾಹ್ನ 3 ಗಂಟೆಗೆ ವಿಜಯಪುರ ಸಂಸದರಾದ ರಮೇಶ್ ಜಿಗಜಿಣಗಿ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸವರು. ಉದ್ಘಾಟನಾ ಭಾಷಣವನ್ನು ಅಖಿಲ ಭಾರತ ಶೈಕ್ಷಣಿಕ ಸಂಘಟನೆ ಹಾಗೂ ರಾಜ್ಯ ಸಭೆಯ ಸದಸ್ಯರಾದ ಡಾ. ಫೌಜೀಯಾ ಖಾನ್ ಮಾಡುವರು. ಕಾರ್ಯಕ್ರಮದ ಪ್ರಾಸ್ತಾವಿಕ ಮಾತಗಳನ್ನು ಎಐಇಎಂ ಅದ್ಯಕ್ಷರಾದ ಪ್ರೋ. ಖ್ವಾಜಾ ಶಾಹಿದ್ ಮಾಡಲಿದ್ದು ದಿಕ್ಸೂಚಿ ಭಾಷಣವನ್ನು ಜೋಧಪುರ ಮೌಲಾನಾ ಆಜಾದ್ ವಿಶ್ವವಿದ್ಯಾನಿಲಯದ ಹಿಂದಿನ ಕುಲಪತಿಗಳಾದ ಪದ್ಮಶ್ರೀ ಪ್ರೋ. ಅಕ್ತರ್ ಉಲ್ ವಾಸೆ ನೀಡುವರು. ಗೌರವ ಅತಿಥಿಗಳಾಗಿ ಬಾಗಲಕೋಟ ಶಿರೂರಿನ ಪ್ರಕೃತಿ ಚಿಕಿತ್ಸಾ ಆಶ್ರಯ ಪೂಜ್ಯ ಬಸವಲಿಂಗ ಸ್ವಾಮೀಜಿ, ಮಾಜಿ ಶಾಸಕ ಡಾ. ಮಕ್ಬುಲ್ ಬಾಗವಾನ್, ನಿವೃತ್ತ ಐಪಿಎಸ್ ಅಧಿಕಾರಿ ನಿಸ್ಸಾರ ಅಹಮದ್ ಹಿರಿಯ, ಪತ್ರಕರ್ತ ರಫಿ ಭಂಡಾರಿ ಆಗಮಿಸುವರು.
      ಸಂಜೆ 7 ಗಂಟೆಗೆ ಉತ್ತರ ಪ್ರದೇಶದ ಖೈರಾನಾ ಅಲ್ ಖುರಾನ್ ಅಕಾಡೆಮಿಯ ಮುಫ್ತಿ ಶಮಿ ಹಾಗೂ ಅವರ ತಂಡದವರಿಂದ ’21ನೇ ಶತಮಾನಕ್ಕೆ ಖುರಾನ್ ‘ಎಂಬ ರೂಪಕ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಪಂ. ಮಧ್ವಾಚಾರ್ಯ ಮೊಖಾಶಿ ಭಾಗವಹಿಸಲಿದ್ದು ,ಸಲೀಮ್ ಜಾಗಿರದಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

      ದಿನಾಂಕ 9 ರಂದು ಎರಡನೆಯ ದಿನ ಮುಂಜಾನೆ 9 ಗಂಟೆಗೆ ಸಿಕ್ಯಾಬ್ ತಾಂತ್ರಿಕ ಹಾಗೂ ಇಂಜಿನಿಯರಿಂಗ್ ಮಹಾವಿದ್ಯಾಲಯದ ತಾಂತ್ರಿಕ ಗೋಷ್ಠಿಗಳು ನಡೆಯಲಿದ್ದು ಇದರಲ್ಲಿ ಮಾಜಿ ಶಾಸಕ ಅರುಣ್ ಶಹಾಪೂರ ಮುಖ್ಯ ಅತಿಥಿಯಾಗಿ, ಅಧ್ಯಕ್ಷತೆಯನ್ನ ಡಾ. ಅವಾಬ್ ಫಕಿಹ್, ವಿಶೇಷ ಉಪನ್ಯಾಸಕರಾಗಿ ಅಮೇರಿಕಾದ ಝಾಯಿನ್ ಪೀರಜಾದೆ ಪ್ರಾಧ್ಯಾಪಕರಾದ ಹಾಗೂ ಪ್ರಾಚಾರ್ಯರಾದ ಅಬ್ಬಾಸ್ ಅಲಿ, ಬೆಂಗಳೂರು ಪಾಲ್ಕನ್ ಗ್ರುಪನ ಅಬ್ದುಸ್ ಸುಭಾನ್ ಉಪನ್ಯಾಸಗಳನ್ನು ನೀಡಲಿದ್ದಾರೆ.

      ಮಧ್ಯಾಹ್ನ 2-30 ಕ್ಕೆ ನಡೆಯುವ ‘ದಖ್ಖನಿನ ಮಧ್ಯ ಯುಗ ರಾಜಕೀಯ ಇತಿಹಾಸ ಹಾಗೂ ಶೈಕ್ಷಣಿಕ ವ್ಯವಸ್ಥೆ’ ಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಸಮಾಜದ ಧುರೀಣ ಅಬ್ದುಲ್ ಹಮೀದ್ ಮುಶ್ರಫ್, ಅಧ್ಯಕ್ಷರಾಗಿ ಪ್ರೋ. ವಾಜೀದ್ ಪೀರಾ, ವಿಶೇಷ ಹಾಗೂ ಉಪನ್ಯಾಸಕರಾಗಿ ನಾಡೋಜ ಡಾ. ಎಚ್ ಜಿ ದಡ್ಡಿ, ಇತಿಹಾಸ, ಪ್ರಾಧ್ಯಾಪಕ ಡಾ. ಅಬ್ದುಲ್ ಗನಿ ಇಮಾರತವಾಲೆ ಭಾಗವಹಿಸಲಿದ್ದಾರೆ.

      ಸಂಜೆ 4 ಗಂಟೆಗೆ ಭಾರತೀಯ ಶಿಕ್ಷಣಕ್ಕೆ ಮುಸ್ಲಿಮರ ಕೊಡುಗೆ ಎಂಬ ಗೋಷ್ಠಿಯಲ್ಲಿ ಕಲಬುರ್ಗಿಯ ಕೆಬಿಎನ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಸೈಯದ್ ಮೊಹಮ್ಮದ್ ಅಲಿ ಅಲ್ ಹುಸೇನಿ ಮುಖ್ಯ ಅತಿಥಿಯಾಗಿ ಸಯ್ಯದ್ ಹೈದರ್ ಪಾಷಾ ಗೌರವ ಅತಿಥಿಯಾಗಿ ಸಮಾಜ ಧುರೀಣ ನಜೀಬ್ ಬಕ್ಷಿ ಅಧ್ಯಕ್ಷರಾಗಿ, ಉಪನ್ಯಾಸಕರಾಗಿ ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜಹೀರ್ ಜಾಪ್ರಿ, ಅಲ್ ಅಮೀನ್ ವೈದ್ಯಕೀಯ ಕಾಲೇಜು ಪ್ರಾಚಾರ್ಯ ಡಾ. ಮಹಿಬೂಬ್ ಕಲಬುರ್ಗಿ, ನಿವೃತ್ತ ಪ್ರಾಚಾರ್ಯರಾದ ಡಾ. ರೋಷನ್ ಆರಾ ವಿಶೇಷ ಉಪನ್ಯಾಸ ನೀಡಲಿದ್ದಾರೆ.

      ನಂತರ 5 ಗಂಟೆಯ ಶಾಲಾ ಶಿಕ್ಷಣದ ಸಾರ್ವತ್ರೀಕರಣ ಗೋಷ್ಠಿಯಲ್ಲಿ ಮುಖ್ಯ ಅತಿಥಿಗಳಾಗಿ ಸಂಸದ ರಮೇಶ ಜಿಗಜಿಣಗಿ, ದೆಹಲಿಯ ಖ್ಯಾತ ಕ್ಯಾನ್ಸರ್ ತಜ್ಞ ಡಾ. ಮಜೀದ್ ಅಹ್ಮದ್ ತಾಳಿಕೋಟಿ, ಜಮಾತೆ ಇಸ್ಲಾಂ ಹಿಂದಿ ಕೇಂದ್ರೀಯ ಶಿಕ್ಷಣ ಮಂಡಳಿಯ ತನ್ವೀರ್ ಅಹ್ಮದ್ ಶಿಕ್ಷಣ ಕ್ಷೇತ್ರಕ್ಕೆ ಬಸವಣ್ಣನವರ ವಚನಗಳ ಕೊಡುಗೆ ಕುರಿತು ಬಿ ಎಲ್ ಡಿ ಇ ಸಂಸ್ಥೆಯ ಡಾ. ಮಹಾಂತೇಶ ಬಿರಾದಾರ ಮಾತನಾಡಲಿದ್ದಾರೆ.
      ಸಂಜೆ 7-30ಕ್ಕೆ ಸಾರ್ವಜನಿಕ ಸಭೆಯಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ, ಮುಂಬೈಯ ರಾಷ್ಟ್ರೀಯ ಶೈಕ್ಷಣಿಕ ಸಂಘಟನೆಯ ಮುಬಾರಕ್ ಕಾಪಾಡಿ ಭಾಗವಹಿಸಲಿದ್ದಾರೆ.

      ರವಿವಾರ ಮೂರನೆಯ ದಿನ ಮುಂಜಾನೆ 9:00 ಗಂಟೆಗೆ ‘ವಿಶ್ವ ಪಾರಂಪರಿಕ ನಗರವಾಗಿ ವಿಜಯಪುರ ಹಾಗೂ ನಗರ ನಿರ್ವಹಣೆ ಹಾಗೂ ಅಭಿವೃದ್ಧಿಯಲ್ಲಿ ನಾಗರಿಕರ ಪಾತ್ರ’ ವಿಷಯಗಳ ಕುರಿತ ವಿಶೇಷ ಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ನಿವೃತ್ತ ಹಿರಿಯ ಆಯುಕ್ತ ಹಾಗೂ ಐ ಎ ಎಸ್ ಅಧಿಕಾರಿ ಡಾ. ಎಸ್ ಎಂ ಜಾಮದರ ಭಾಗವಹಿಸಲಿದ್ದು ಅಧ್ಯಕ್ಷತೆಯನ್ನು ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಜಶೇಖರ್ ಡಂಬಳ ವಹಿಸಲಿದ್ದು ಹೊಸ ದೆಹಲಿಯ ವಾಸ್ತು ತಜ್ಞ ಮಧುಸೂದನ್ ಚಂಡಕ್, ಡಾ. ಎಂ. ಬಿ. ಮುಲ್ಲಾ ಐತಿಹಾಸಿಕ ವಿಜಯಪುರ ನಗರದ ಕೇಂದ್ರ ಭಾಗದ ಪುನರುಜ್ಜೀವನ ಕುರಿತು ಉಪನ್ಯಾಸ ನೀಡಲಿದ್ದಾರೆ.
      ರಾಜ್ಯ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ್ ಭಜಂತ್ರಿ, ಪ್ರೊ. ಇರ್ಷಾದ್ ಪುಣೇಕರ, ಪ್ರೊ. ರುಕ್ಸಾನಾ ಆಲಗೂರ್, ಪೀಟರ್ ಅಲೆಕ್ಸಾಂಡರ್, ಅಮೀನ್ ಹುಲ್ಲೂರ್ ಅತಿಥಿ ಉಪನ್ಯಾಸಗಳನ್ನು ನೀಡಲಿದ್ದಾರೆ.
      ಅಂದು 11 ಗಂಟೆಗೆ ಮುಂಬೈನ ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರ ಝೆಡ್. ಎ. ಪುಣೇಕರ್ ಮುಖ್ಯ ಅತಿಥಿಯಾಗಿ ಶಿಕ್ಷಣದ ಪ್ರವರ್ಧನೆಯಲ್ಲಿ ನಾಗರಿಕ ಸಮಾಜದ ಪಾತ್ರ ಎಂಬ ಗೋಷ್ಠಿಯಲ್ಲಿ ಭಾಗವಹಿಸಲಿದ್ದು ಅಧ್ಯಕ್ಷತೆಯನ್ನು ಸಹಕಾರ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಎಸ್. ಎಸ್. ಬಿಳಗಿಪೀರ್ ವಹಿಸಲಿದ್ದಾರೆ.

      ಬೀದರಿನ ಶಾಹಿನ್ ಶಿಕ್ಷಣ ಸಂಸ್ಥೆಗಳ ಚೇರ್ಮನ್ ಡಾ. ಅಬ್ದುಲ್ ಖದಿರ್, ಹೈದರಾಬಾದಿನ ಮೌಲಾನಾ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದ ಡಾ. ಮುಸ್ತಾಕ್ ಅಹಮದ್ ಪಟೇಲ್, ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜಶೇಖರ್ ವಿ. ಎನ್. ಉಪನ್ಯಾಸಗಳನ್ನು ನೀಡಲಿದ್ದಾರೆ.
      ಮಧ್ಯಾಹ್ನ 12 ಗಂಟೆಗೆ ‘ಮದರಸ ಶಿಕ್ಷಣ ಒಂದು ಸಮಾಂತರ ಶಿಕ್ಷಣ ವ್ಯವಸ್ಥೆ’ ಕುರಿತು ನಡೆಯುವ ಉಪನ್ಯಾಸದಲ್ಲಿ ಮುಖ್ಯ ಅತಿಥಿಯಾಗಿ ಇಂಡಿಯಾ ಇಸ್ಲಾಮಿಕ್ ಸಾಂಸ್ಕೃತಿಕ ಕೇಂದ್ರ ದೆಹಲಿಯ ಅಧ್ಯಕ್ಷರಾದ ಸಿರಾಜುದ್ದೀನ್ ಖುರೇಶಿ ಆಗಮಿಸಲಿದ್ದು ಅಧ್ಯಕ್ಷತೆಯನ್ನು ಸಿಂದಗಿ ಬೈತುಲ್ ಉಲೂಮ್ ಉಪಪ್ರಾಚಾರ್ಯ ಮೌಲಾನಾ ಮಹಮ್ಮದ್ ಅಯೂಬ್ ಮೋಹಿದ್ದಿನ್ ನಧವಿ ಅಧ್ಯಕ್ಷತೆ ವಹಿಸಲಿದ್ದಾರೆ.

      ಉಪನ್ಯಾಸಕರಾಗಿ ಪಶ್ಚಿಮ ಬಂಗಾಳದ ಮಹಮ್ಮದ್ ನಸ್ರುದ್ದಿನ್, ಹೊಸ ದೆಹಲಿಯ ಪ್ರೊ. ಯಾಹ್ಯಾ ಅಂಜುಮ್, ನಗರದ ಮೌಲಾನಾ ಶಕೀಲ್ ಮುಲ್ಲಾ ಮಾತನಾಡಲಿದ್ದಾರೆ.
      ನಂತರ 3 ಗಂಟೆಗೆ ಮಹಿಳಾ ಶಿಕ್ಷಣ ಹಾಗೂ ಸಬಲೀಕರಣ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೋ. ಬಿ. ಕೆ. ತುಳಸಿಮಾಲಾ ಮುಖ್ಯ ಅತಿಥಿಯಾಗಿ, ಅದ್ಯಕ್ಷರಾದ ಮುಂಬಯಿನ ಇಕ್ರಾ ಪ್ರತಿಷ್ಠಾನದ ಶ್ರೀ ಮತಿ ಉಜ್ಮಾ ನಾಹಿದ್ ಉಪನ್ಯಾಸಕರಾಗಿ ಶ್ರೀ ಮತಿ ಸಂಯುಕ್ತ ಪಾಟೀಲ,ಡಾ. ಹಲೀಮಾ ಸಾದಿಯಾ, ಡಾ. ಹಾಹಿರಾ ಪರವೀನ್ ಮಾತನಾಡಲಿದ್ದಾರೆ.

      ಸಂಜೆ 5 ಗಂಟೆಗೆ ಜರಗುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಐಎಎಸ್‌ ಅಧಿಕಾರಿ ಎಸ್. ಎಮ್. ಜಾಮದಾರ ಆಗಮಿಸಲಿದ್ದು ಸಮಾರೋಪ ಸಮಾರಂಭ ಭಾಷಣವನ್ನು ಅಖಿಲ ಭಾರತ ಶೈಕ್ಷಣಿಕ ಆಂದೋಲನದ ಡಾ. ಖ್ವಾಜಾ ಎಮ್ ಶಾಹಿದ್ ಮಾಡಲಿದ್ದಾರೆ. ಗೌರವ ಅತಿಥಿಗಳಾಗಿ ನಗರದ ಆರ್ಕಾಟ್ ದರ್ಗಾದ ಪೀಠಾಧಿಪತಿ ಡಾ. ಸೈಯದ್ ತಖವಿ ಪೀರಾ ಹುಸೇನ್ ಬರಲಿದ್ದು, ಅಧ್ಯಕ್ಷತೆಯನ್ನು ಕೇರಳ ಎಂಇಎಸ್ ಅದ್ಯಕ್ಷರಾದ ಫಜಲ್ ಗಫೂರ ವಹಿಸಲಿದ್ದಾರೆ.

      ಸಂಜೆ 7 ಗಂಟೆಗೆ ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಶಾಲಾ ಕಾಲೇಜುಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.ಮೂರು ದಿನಗಳ ಕಾರ್ಯಕ್ರಮದಲ್ಲಿ ಪುಸ್ತಕ ಮೇಳ, ಆಹಾರ ಮೇಳ, ವಿದ್ಯಾರ್ಥಿಗಳ ವಿವಿಧ ಸ್ಪರ್ಧೆಗಳು ನಡೆಯಲಿವೆ ಎಂದು ಸಿಕ್ಯಾಬ್ ತಾಂತ್ರಿಕ ಹಾಗೂ ಇಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯ ಡಾ. ಸೈಯದ್ ಅಬ್ಬಾಸ್ ಅಲಿ, ಸಿಕ್ಯಾಬ್ ಎ ಆರ್ ಎಸ್ ಇನಾಮಾದಾರ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಚ್. ಕೆ. ಯಡಹಳ್ಳಿ, ಡಾ.ಮಲ್ಲಿಕಾರ್ಜುನ ಮೇತ್ರಿ, ಡಾ. ಎ. ಎಸ್.ಖಾದ್ರಿ, ಡಾ. ಮಹಮ್ಮದ್ ಸಮಿಯುದ್ದಿನ್, ಡಾ. ಎಸ್. ಎಚ್. ಕಾಖಂಡಕಿ, ಡಾ. ನಿಯಾಮತುಲ್ಲಾ ಪಟೇಲ್, ಪ್ರೋ. ಸಚಿನ್‌ ಪಾಂಡೆ, ನಿವೃತ್ತ ಪ್ರಾಚಾರ್ಯ ಎನ್ ಎಸ್ ಭೂಸನೂರ, ಪ್ರಾಚಾರ್ಯ ಪ್ರೋ. ಸೈಯದ್ ಸಮಿರ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

      Tags: #All India Educational Conference at Dome City#indi / vijayapur#Public News#State News#Today News#Voice Of Janata#Voiceofjanata.in#ಗುಮ್ಮಟ ನಗರಿಯಲ್ಲಿ ಅಖಿಲ ಭಾರತ ಶೈಕ್ಷಣಿಕ ಸಮ್ಮೇಳ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ವಿಜಯಪುರ- ಬಬಲೇಶ್ವರ ಮಧ್ಯೆ ಸಾಮಾನ್ಯ ಸಾರಿಗೆ ಎರಡು ಬಸ್ಸುಗಳ ಸೇವೆ ಪ್ರಾರಂಭ

      ವಿಜಯಪುರ- ಬಬಲೇಶ್ವರ ಮಧ್ಯೆ ಸಾಮಾನ್ಯ ಸಾರಿಗೆ ಎರಡು ಬಸ್ಸುಗಳ ಸೇವೆ ಪ್ರಾರಂಭ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ವಿಜಯಪುರ- ಬಬಲೇಶ್ವರ ಮಧ್ಯೆ ಸಾಮಾನ್ಯ ಸಾರಿಗೆ ಎರಡು ಬಸ್ಸುಗಳ ಸೇವೆ ಪ್ರಾರಂಭ

      ವಿಜಯಪುರ- ಬಬಲೇಶ್ವರ ಮಧ್ಯೆ ಸಾಮಾನ್ಯ ಸಾರಿಗೆ ಎರಡು ಬಸ್ಸುಗಳ ಸೇವೆ ಪ್ರಾರಂಭ

      August 29, 2025
      ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ನಡೆಸುವುದು ರೈತ ಸಂಘ ಸಂಪೂರ್ಣ ವಿರೋಧ ವ್ಯಕ್ತಪಡಿಸುತ್ತದೆ

      ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ನಡೆಸುವುದು ರೈತ ಸಂಘ ಸಂಪೂರ್ಣ ವಿರೋಧ ವ್ಯಕ್ತಪಡಿಸುತ್ತದೆ

      August 29, 2025
      ಗಣೇಶ ಚತುರ್ಥಿ & ಈದ್ ಮಿಲಾದ್ ಹಬ್ಬ: ಮದ್ಯ ಮಾರಾಟ ನಿಷೇಧಿಸಿ  ಜಿಲ್ಲಾಧಿಕಾರಿ ಡಾ.ಆನಂದ ಕೆ ಆದೇಶ

      ಗಣೇಶ ಚತುರ್ಥಿ & ಈದ್ ಮಿಲಾದ್ ಹಬ್ಬ: ಮದ್ಯ ಮಾರಾಟ ನಿಷೇಧಿಸಿ  ಜಿಲ್ಲಾಧಿಕಾರಿ ಡಾ.ಆನಂದ ಕೆ ಆದೇಶ

      August 29, 2025
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2025 VOJNews - Powered By Kalahamsa Infotech Private Limited.