ಇಂಡಿ : ಗಡಿ ಭಾಗದ ಜನರ ಹಿತ ಕಾಪಡಲು, ಸೂರಿಲ್ಲದವರಿಗೆ ಸೂರನ್ನು ಒದಗಿಸಲು ಸದನದಲ್ಲಿ ಧ್ವನಿ ಎತ್ತಿದ ಶಾಸಕ ಯಶವಂತರಾಯಗೌಡ ಪಾಟೀಲ್. ಕಳೆದ 3 ವರ್ಷಗಳಿಂದ 2017-18 ರಿಂದ ಇಲ್ಲಿಯವರೆಗಿನ ಇಂಡಿ ವಿಧಾನ ಸಭಾ ಮತ ಕ್ಷತ್ರದ ವ್ಯಾಪ್ತಿಯಲ್ಲಿ ಬಸವ ವಸತಿ, ಅಂಬೇಡ್ಕರ್ ವಸತಿ ಮತ್ತು ವಾಜಪೇಯಿ ಮೊದಲಾದ ವಿವಿಧ ವಸತಿ ಯೋಜನೆಯಲ್ಲಿ ನಿರ್ಮಾಣ ಮಾಡಿದ, ಮಾಡಲಾಗದ ಮತ್ತು ತ್ರಾಂತ್ರಿಕ ತೊಂದರೆಗೊಳಪಟ್ಟ ಮನೆಗಳ ಬಗ್ಗೆ ಸರಕಾರಕ್ಕೆ ಚುಕ್ಕೆ ಗುರುತ್ತಿಲ್ಲದ ಪ್ರಶ್ನೆ ಮೂಲಕ ಗಮನ ಸೆಳೆದರು .
ಈ ಸಂದರ್ಭದಲ್ಲಿ ವಸತಿ ಮತ್ತು ಮೂಲ ಸೌಲಭ್ಯ ಸಚಿವರು ಉತ್ತಿರಿಸಿ, ಕಳೆದ 3 ವರ್ಷಗಳಿಂದ 2017-18 ರಿಂದ ಇಂಡಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಬಸವ ವಸತಿ, ಅಂಬೇಡ್ಕರ್ ಮತ್ತು ವಿವಿಧ ವಸತಿ ಯೋಜನೆಯಡಿ ಒಟ್ಟು
ವ್ಯಾಪ್ತಿಗೆ ಬಸವ ವಸತಿ 5267 ಮನಗಳನ್ನು ಮಂಜೂರು ಮಾಡಲಾಗಿದ್ದು, ಯೋಜನೆಗಳಡಿ ಆಯ್ಕೆಯಾದ ಫಲಾನುಭವಿಗಳು ನಿಗಮದ ವಿವರ ಅನುಮೋದನೆ ಪಡೆದ ನಂತರ 90 ದಿನಗಳೊಳಗೆ ಮನೆಯ ಕಾಮಗಾರಿಯನ್ನು ಪ್ರಾರಂಭಿಸಿಕೊಳ್ಳಬೇಕಿರುತ್ತದೆ.
ಒಂದು ವೇಳೆ ಈ ಅವಧಿಯೊಳಗೆ ಫಲಾನುಭವಿಯು ಮನೆಯನ್ನು ಪ್ರಾರಂಭ ಮಾಡಿಕೊಳ್ಳದಿದ್ದಲ್ಲಿ ಮನೆಯನ್ನು ರದ್ದುಪಡಿಸಲಾಗುತ್ತದೆ. ಆದಾಗ್ಯೂ ಸಹ ಮನೆ ನಿರ್ಮಾಣದಲ್ಲಿ ಫಲಾನುಭವಿಗೆ ಇರುವ ವೈಯುಕ್ತಿಕ ಸಮಸ್ಯೆಗಳು, ಮಳೆಗಾಲ, ಆರ್ಥಿಕ ಸಮಸ್ಯೆಗಳು, ಬಡತನ ಮುಂತಾದ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ಫಲಾನುಭವಿಗೆ ತಿಳುವಳಿಕೆ ಪತ್ರಗಳನ್ನು ಜಾರಿ ಮಾಡುವ ಮೂಲಕ ಅವರ ಮನವೊಲಿಸಿ ಮನೆ ಪ್ರಾರಂಭಕ್ಕೆ ಒತ್ತು ನೀಡಲಾಗಿದೆ. ಅನೇಕ ವಿಡಿಯೋ -ಕಾನ್ನರೆನ್ಸ್ ಮತ್ತು ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಪ್ರಾರಂಭವಾಗದ ಮನೆಗಳನ್ನು ಕೂಡಲೇ ಪ್ರಾರಂಭಿಸಲು ಕ್ರಮ ಫಲಾನುಭವಿಗಳು ಆರ್ಥಿಕ ಹಾಗೂ ಕೆಲವೊಂದು ವಹಿಸುವಂತೆ ಅನುಷ್ಠಾನಾಧಿಕಾರಿಗಳಿಗೆ ತಿಳಿಸಲಾಗಿರುತ್ತದೆ.
ಇದಲ್ಲದೇ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೂಲಕ ಸಾಕಷ್ಟು ತಿಳಿವಳಿಕೆ ಪತ್ರಗಳನ್ನು ನೀಡಿದಾಗ್ಯೂ ಮನೆಗಳನ್ನು ಪ್ರಾರಂಭ ಮಾಡಕೊಳ್ಳದ ಕಾರಣ ಅಂತಹ ಮನೆಗಳನ್ನು ಬ್ಯಾಕ್ ಮಾಡಲಾಗಿರುತ್ತೆದೆ. ದಿನಾಂಕ : 14.02.2020 ರಂದು ಆದೇಶ ಹೊರಡಿಸಿ 2017-18 ನೇ ಸಾಲಿನಿಂದ 2019-20ನೇ ಸಾಲಿನಲ್ಲಿನ ವಿವಿಧ ವಸತಿಯೋಜನೆಗಳಡಿ ನಿಗದಿತ ಸಮಯದಲ್ಲಿ ಪ್ರಾರಂಭಗೊಳ್ಳದೇ, ಬ್ಲಾಕ್ ಆಗಿದ್ದ ಮನೆಗಳನ್ನು ತೆರವುಗೊಳಿಸಿ, ವಾಸ್ತವವಾಗಿ ಪ್ರಾರಂಭವಾಗಿರುವ ಮನೆಗಳ ಛಾಯಾಚಿತ್ರಗಳನ್ನು ಜಿಪಿಎಸ್ ಗೆ ಅಳವಡಿಸಲು ಒಂದೂವರೆ ತಿಂಗಳ ಕಾಲಾವಕಾಶವನ್ನು ನೀಡಲಾಗಿತ್ತು. ಈ ಅವಧಿಯಲ್ಲಿ ಜಿ.ಪಿ.ಎಸ್. ಮಾಡಿರುವ ಮನೆಗಳನ್ನು ಪ್ರಗತಿಗೆ ಪರಿಗಣಿಸಿ ಉಳಿದ ಎಲ್ಲಾ ಮನೆಗಳನ್ನು ಸರ್ಕಾರದ ಆದೇಶ ಸಂ: ವಇ 12 ಹೆಚ್ಎಹೆಚ್ 2020, 19.05.2020 ರನ್ವಯ ರದ್ದುಪಡಿಸಲಾಗಿರುತ್ತದೆ.
ಮಂಜೂರಾದ ಮನೆಗಳ ಪೈಕಿ 442 ಮನೆಗಳು ಸಾಕಷ್ಟು ಕಾಲಾವಕಾಶ ನೀಡಿದಾಗೂ ಸಹಾ ಪ್ರಾರಂಭವಾಗದ
ಹಿನ್ನೆಲೆಯಲ್ಲಿ, ಬ್ಲಾಕ್ ಮಾಡಲಾಗಿರುತ್ತದೆ. ಸರ್ಕಾರವು ವಿವಿಧ ವಸತಿ ಯೋಜನೆಗಳಡಿ ಬ್ಲಾಕ್ ಮಾಡಲಾಗಿದ್ದ ಫಲಾನುಭವಿಗಳು ಅರ್ಹರಿದ್ದಲ್ಲಿ ನಿಯಮಾನುಸಾರ ಪ್ರಸಕ್ತ ವರ್ಷ ಅಂದರೆ 2021-22 ನೇ ಸಾಲಿಗೆ ನೀಡಲಾಗಿರುವ ಗುರಿಯಲ್ಲಿ ನಿಯಮಾನುಸಾರ ಪರಿಗಣಿಸಲು
ಸರ್ಕಾರವು ಆದೇಶ ಸಂಖ್ಯೆ: ವಇ 11 ಹೆಚ್ಎಎಮ್ 2022, ದಿನಾಂಕ: 18.02.2022 ರಲ್ಲಿ ಅವಕಾಶ ಕಲ್ಪಿಸಿಕೊಡಲಾಗಿದ್ದು, ಅದರಂತೆ ಕ್ರಮ ವಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.