ದೇವದುರ್ಗ : ತಾಲೂಕಿನ ಮರಳು ಅಕ್ರಮ ದಂಧೆಯಲ್ಲಿ ಸ್ಥಳೀಯ ಪೊಲೀಸರೇ ಕುಮ್ಮಕ್ಕು ನೀಡುವ ಜೊತೆಗೆ ಅವರೇ ಪಾಲುದಾರರಾಗಿದ್ದಾರೆ. ಪ್ರತಿ ಲಾರಿ ತಿಂಗಳಿಗೆ ೩೦ ಸಾವಿರ ಮತ್ತು ಟ್ರ್ಯಾಕ್ಟರ್ ತಿಂಗಳಿಗೆ ೧೩ ಸಾವಿರ ಮಾಮೂಲಿ ಪಡೆಯುತ್ತಿದ್ದಾರೆಂದು ಸಾರ್ವಜನಿಕವಾಗಿ ಚರ್ಚೆಯಾಗುತ್ತಿವೆ ಎಂದು ಎಮ್ ಆರ್ ಎಚ್ ಎಸ್ ತಾಲೂಕು ಅಧ್ಯಕ್ಷ ಶಾಂತಕುಮಾರ ಹೊನ್ನಟಿಗಿ ಗಂಭೀರವಾಗಿ ಆರೋಪಿಸಿದ್ದಾರೆ.
ಇನ್ನೂ ಅಕ್ರಮ ಮರಳು ದಂಧೆಯಲ್ಲಿ ದೇವದುರ್ಗ ತಾಲೂಕಿನ ವಿವಿಧ ಪೊಲೀಸ್ ಠಾಣೆಗಳ ಪೋಲಿಸರು ಭಾಗಿಯಾಗಿದ್ದಾರೆ. ವಾರದ ಮಾಮೂಲಿಗೆ ನಿಂತಿದ್ದಾರೆ. ಜತೆಗೆ ಅಕ್ರಮ ಮರಳು ಸಾಗಾಣಿಕೆ ಮಾಡುವ ಪ್ರತಿ ಲಾರಿಗೆ ೩೦ ಸಾವಿರ ಹಾಗೂ ಪ್ರತಿ ಟ್ರ್ಯಾಕ್ಟರ್ಗೆ ೧೩ ಸಾವಿರ ಪಡೆಯುತ್ತಿರುವುದು ಬಹಿರಂಗವಾಗಿ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.
ಈ ಕುರಿತು ಈಗಾಗಲೇ ಬಳ್ಳಾರಿ ಐಜಿಪಿಯವರಿಗೆ ಪತ್ರ ಬರೆಯಲಾಗಿದೆ. ತಾಲ್ಲೂಕಿನ
ಗೂಗಲ್,ಚಿಕ್ಕರಾಯಕುಂಪಿ, ಹೀರೆರಾಯಕುಂಪಿ, ಅಪ್ರಾಲ್, ಬಸವಂತಪುರು ನದಿ ತೀರದ ಮರಳಿನ ಸ್ಟಾಕ್ ಯ್ಯಾರ್ಡ್ಗಳಿಂದ ೧ ಪಾಸು ಪಡೆದು, ಅದನ್ನು ತೋರಿಸಿಯೇ ೫ ರಿಂದ ೬ ಲಾರಿ ಮರಳು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದಾರೆ.
ಇದರಿಂದ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿಗಳ ರಾಜಸ್ವ ಧನ ನಷ್ಟ ಉಂಟಾಗುತ್ತಿದೆ. ಆದ್ದರಿಂದ ಈ ಕೂಡಲೇ ಇಂತಹ ಅಕ್ರಮ ದಂಧೆಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು. ನಿತ್ಯ ಅಕ್ರಮವಾಗಿ ಮರಳು ಸಾಗಾಣಿಕೆಯಲ್ಲಿ ಗಬ್ಬೂರು ಠಾಣೆ ಮತ್ತು ಯಾವ ಯಾವ ಠಾಣೆಗಳಲ್ಲಿ ಯಾವ ಯಾವ ಪೋಲಿಸರು ಭಾಗಿಯಾಗಿದ್ದಾರೆ. ಎಂಬುವುದು ತನಿಖೆ ಮಾಡಿ ಅಂಥವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು, ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕದಿದ್ದರೆ ಎಮ್ಆರ್ಎಚ್ಎಸ್ ಸಂಘಟನೆ ಹಾಗೂ ಪ್ರಗತಿಪರ ಸಂಘಟನೆಗಳೊಂದಿಗೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗೂಗಲ್ ನದಿಯಲ್ಲಿನ ಮರಳು ಸಂಗ್ರಹಿಸಿ ಮಾರಾಟ ಮಾಡುತ್ತೀರುವ ಸ್ಟಾಕ್ ವಾರ್ಡ್ಗಳಲ್ಲಿ ಅಕ್ರಮ ದಂಧೆಕೊರರಿಗೆ ಸುಲಭ ರೀತಿಯಲ್ಲಿ ಮರಳು ಲಭ್ಯವಾಗುತ್ತದೆ. ಆದರೆ ಸಾಮಾನ್ಯ ಜನರಿಗೆ ಸಿಕ್ಕಾಪಟ್ಟೆ ದುಬಾರಿ ದರದಲ್ಲಿ ಮಾರಾಟ ಮಾಡುತ್ತಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಯಾದ ಭ್ರಷ್ಟ ವಿಶ್ವನಾಥ ನಿಯಮಗಳ ಪ್ರಕಾರ ಸಿಸಿ ಕ್ಯಾಮೆರಾ ಅಳವಡಿಸಿಲ್ಲ, ದರಪಟ್ಟಿ ಕೂಡಾ ಹಾಕಿಲ್ಲ, ಬೇಕಾಬಿಟ್ಟಿಯಾಗಿ ಮರಳು ಮಾರಾಟ ದಂಧೆ ನಡೆಯುತ್ತಿದೆ.
ಮನೆ ಶೌಚಾಲಯ ನಿರ್ಮಾಣಕ್ಕೆ ಬೇಕಾಗುವ ಮರಳನ್ನು ಜನ ಸಾಮಾನ್ಯರು ಎತ್ತಿನ ಗಾಡಿಯಲ್ಲಿ ತರಲು ಈ ಹಿಂದಿನ ಸಿದ್ಧರಾಮಯ್ಯ ನೇತೃತ್ವದಲ್ಲಿ ಸರ್ಕಾರ ಅವಕಾಶ ಕಲ್ಪಿಸಿತ್ತು.ಆದರೆ ಈ ಪೋಲಿಸರು ಎತ್ತಿನ ಬಂಡಿಯವರಿಗೆ ಕಿರುಕುಳ ನೀಡಿ ಹಣ ವಸೂಲಿ ಮಾಡುವ ದಂಧೆ ಮಾಡುತ್ತಿದ್ದಾರೆಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹೆಚ್ಚಿನ ನಿಗಾವಹಿಸಿ ಕ್ರಮ ಕೈಗೊಳ್ಳಬೇಕೆಂದು ಹೇಳಿದರು. ಈ ವೇಳೆ ಎಮ್ ಆರ್ ಎಚ್ ಎಸ್ ಸಂಘಟನೆಯ ಮುಖಂಡರಾದ ರಾಜಪ್ಪ ಸಿರವಾರಕರ್, ನರಸಪ್ಪ ಎನ್.ಗಣೇಕಲ್, ತುಕರಾಮ ಎನ್.ಗಣೇಕಲ್, ಬಸವಲಿಂಗಪ್ಪ ಗಣೇಕಲ್, ಮಾರ್ತಾಂಡ ಗಬ್ಬೂರು, ಬಸವಲಿಂಗ ಖಾನಾಪೂರ, ಮರೆಪ್ಪ ಮಲದಕಲ್, ಜಾಕೋಬ್ ಟೇಲರ್ ಬೊಮ್ಮನಾಳ, ಸೇರಿದಂತೆ ಆಗ್ರಹಿಸಿದರು.