ಸಿಂಧನೂರು: ಅಕ್ರಮ ಮರಳು ದಂಧೆಯಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಭಾಗಿಯಾದ ಎಲ್ಲಾ ಪೋಲಿಸ್ ಅಧಿಕಾರಿಗಳ ಹಾಗೂ ಕೆಳಹಂತದ ಪೊಲೀಸ್ ಸಿಬ್ಬಂದಿ ವಿರುದ್ಧ ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ದಲಿತ ಅಲ್ಪಸಂಖ್ಯಾತ ಶೋಷಿತ ಸಮುದಾಯಗಳ ಒಕ್ಕೂಟದಿಂದ ಜಿಲ್ಲಾ ಪೋಲಿಸ್ ವರಿಷ್ಠ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು..
ವಿವಿಧ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಿಂಧನೂರು ನಗರ ಪೋಲಿಸ್ ಠಾಣೆಗೆ ಬೇಟಿ ನೀಡಿದ ಎಸ್ ಪಿ ಯವರಿಗೆ ದಲಿತ, ಅಲ್ಪ ಸಂಖ್ಯಾತ, ಶೋಷಿತ ಸಮುದಾಯಗಳ ಒಕ್ಕೂಟದಿಂದ ತಾಲೂಕಿನಲ್ಲಿ
ಹಳ್ಳ, ನದಿ ದಂಡೆ ಪ್ರದೇಶಗಳಾದ ಕೆಂಗಲ್,ಅಲಬನೂರು,ಗಿಣಿವಾರ, ವಳಬಳ್ಳಾರಿ,ಗೋನವಾರ, ಮಾಡಿಸಿರವಾರ,ಸಿಂಗಾಪುರ್, ಮುಕ್ಕುಂದಾ,ಆಯನೂರು ಸೇರಿದಂತೆ ಅಕ್ಕ ಪಕ್ಕದ ತಾಲ್ಲೂಕುಗಳಿಂದ ಮರಳನ್ನು ಟಿಪ್ಪರ್,ಲಾರಿ, ಟ್ರ್ಯಾಕ್ಟರ್ ಗಳಲ್ಲಿ ಹಗಲು ರಾತ್ರಿ ಎನ್ನದೆ ಮರಳನ್ನು ತುಂಬಿಕೊಂಡು ಪೋಲಿಸರ ಕೃಪಾ ಕಟಾಕ್ಷದಿಂದ ತಿಂಗಳು ವಂತಿಗೆ ನೀಡಿ ರಾಜಾರೋಷವಾಗಿ ಅಕ್ರಮ ಮರಳು ದಂಧೆ ನಡೆಸುತ್ತಿದ್ದಾರೆ.
ಈ ಮರಳು ದಂಧೆಗೆ ತಾಲ್ಲೂಕಿನಲ್ಲಿ ಅನೇಕ ಜನ ಬಲಿಯಾದ ಉದಾಹರಣೆಗಳು ಕಣ್ಮುಂದಿವೆ. ಕೂಡಲೇ ಜಿಲ್ಲಾಡಳಿತ ಹಾಗೂ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಅಕ್ರಮವಾಗಿ ಹಗಲು ರಾತ್ರಿ ಮರಳು ಸಾಗಾಣಿಕೆ ಮಾಡುವ ದಂಧೆಕೋರರನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು.ಅಕ್ರಮ ಮರಳು ತಡೆಗಟ್ಟುತ್ತೇವೆ ಎಂಬ ಸೋಗಿನಲ್ಲಿ ಕೆಲವು ಯುವಕರು ಅಕ್ರಮ ಮರಳು ದಂಧೆಕೋರರ ಜೊತೆಗೆ ಶಾಮೀಲಾಗಿರುವುದನ್ನು ತನಿಖೆ ನಡೆಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಸಿಂಧನೂರು ವಲಯದ ಕ ಎಲ್ಲ ಪೊಲೀಸ್ ಅಧಿಕಾರಿಗಳು ಸೇರಿದಂತೆ ಕೆಳಹಂತದ ಪೊಲೀಸರ ದೂರವಾಣಿ ಕರೆ ತನಿಖೆ ನಡೆಸಿ ಕಚೇರಿಗೆ ದಂಧೆಕೋರರು ಬಂದು ಹೋಗಿರುವ ವಿಡಿಯೋ ದೃಶ್ಯಗಳನ್ನು ಸಂಗ್ರಹಿಸಿ, ಗುರುತಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ನ್ಯಾಯಾಂಗ ತನಿಖಾ ತಂಡವನ್ನು ರಚಿಸಬೇಕು ಎಂದು ಒಕ್ಕೂಟದ ಸಂಚಾಲಕ ಎಂ.ಗಂಗಾಧರ ಜಿಲ್ಲಾ ಪೋಲಿಸ್ ವರಿಷ್ಠ ಅಧಿಕಾರಿಗಳಿಗೆ ಒತ್ತಾಯ ಮಾಡಿದರು.
ಮನವಿಯನ್ನು ಸ್ವೀಕರಿಸಿ ತಂಡವನ್ನು ರಚನೆ ಮಾಡುವ ಭರವಸೆಯನ್ನು ಜಿಲ್ಲಾ ಪೋಲಿಸ್ ವರಿಷ್ಠಾದಿಕಾರಿಗಳು ನೀಡಿದರು.