ಇಂಡಿ : ಅಕ್ರಮ ಮರಳು ಅಡ್ಡೆಯ ಮೇಲೆ ಪೊಲೀಸರು ದಾಳಿಗೈದು ಲಕ್ಷಾಂತರ ಮೌಲ್ಯದ ಮರಳು ಜಪ್ತಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಂಗೋಗಿ ಗ್ರಾಮದಲ್ಲಿ ನಡೆದಿದೆ. ಹಿರಗಪ್ಪ ಸಿದ್ದಪ್ಪ ಭೈರೋಡಗಿ ಬಂಧಿತ ಆರೋಪಿ. ಇನ್ನೂ ಆರೋಪಿ ಸಂಗೋಗಿ ಗ್ರಾಮದ ಹತ್ತಿರದ ಹಳ್ಳದಲ್ಲಿ ಮರಳು ಸಂಗ್ರಹಿಸಿ ಮಾರಾಟಕ್ಕೆ ಯತ್ನಿಸಿದ್ದ ವೇಳೆಯಲ್ಲಿ 1.5 ಲಕ್ಷ ಮೌಲ್ಯದ 50 ಬ್ರಾಸ್ ಮರಳು ಜಪ್ತಿಗೈದಿದ್ದಾರೆ. ಈ ಕುರಿತು ಇಂಡಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.