ಅಕ್ಕಮಹಾದೇವಿ ಮಾನವ ಕುಲಕ್ಕೆ ಮಾದರಿ : ವಿ ಎಚ್ ಬಿರಾದಾರ
ಇಂಡಿ: ಶಿವಶರಣೆ ಅಕ್ಕಮಹಾದೇವಿ ಮಹಿಳೆಯರಿಗೆ
ಮಾತ್ರವಲ್ಲದೆ ಮಾನವ ಕುಲಕ್ಕೆ ಮಾದರಿಯಾಗಿದ್ದಾರೆ.
ಅಕ್ಕಮಹಾದೀವಿಯವರ ವಚನಗಳನ್ನು ಪಾಲಿಸಿದರೆ
ಜೀವನ ಪಾವನವಾಗುತ್ತದೆ ಎಂದು ಲಿಂಗಾಯತ
ಪಂಚಮಸಾಲಿ ಸಮಾಜದ ಅಧ್ಯಕ್ಷ ವಿ.ಹೆಚ್. ಬಿರಾದಾರ
ಹೇಳಿದರು.
ಅವರು ಪಟ್ಟಣದ ಅಕ್ಕಮಹಾದೇವಿ ಸೌಹಾರ್ದ ಸಹಕಾರಿ ಸಂಘದಲ್ಲಿ ಹಮ್ಮಿಕೊಂಡಿದ್ದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾನವರಾದ ನಾವೆಲ್ಲರೂ ಸುಖ ಸಂಪತ್ತು ಅರಸುತ್ತ ಹೋಗುತ್ತೇವೆ ಆದರೆ ಅಕ್ಕಮಹಾದೇವಿ ಅವರು ಅದನ್ನೆಲ್ಲ ಧಿಕ್ಕರಿಸಿ ಆಧ್ಯಾತ್ಮದ ಕಡೆಗೆ ಬಂದರು. ವಿಶ್ವಗುರು ಅಣ್ಣ ಬಸವಣ್ಣ , ಅಲ್ಲಮಪ್ರಭುಗಳಂತೆ ಅಕ್ಕಮಹಾದೇವಿ ಅವರ ವಿಚಾರಧಾರೆ ಚಿಂತನೆಗಳು ಜಾಗತಿಕ ಮಟ್ಟದಲ್ಲಿ ಚಿಂತಕರ ಗಮನ ಸೆಳೆದಿವೆ ಎಂದರು.
ಶಿಕ್ಷಕ, ಸಾಹಿತಿ ದಶರಥ ಕೋರೆ ಮಾತನಾಡಿ,
ಅಕ್ಕಮಹಾದೇವಿಯವರು ಅನ್ನಡದ ಮೆರು ಕವಯಿತ್ರಿ
ಹಾಗೂ ಅಗ್ರಗಣ್ಯ ವಚನಗಾರ್ತಿಯಾಗಿದ್ದರು. ಅವರ
ಧರ್ಮನಿಷ್ಠೆ, ಅಚಲ ವಿಶ್ವಾಸ ಆದರ್ಶ ವ್ಯಕ್ತಿತ್ವ
ಪ್ರಪಂಚದ ಯಾವ ಮಹಿಳೆಯರಲ್ಲಿಯೂ ಸಿಗುವುದಿಲ್ಲ.
ಅಕ್ಕಮಹಾದೇವಿಯವರು ಬದುಕಿನ ಮೌಲ್ಯಗಳನ್ನು
ವಚನಗಳ ಮೂಲಕ ಪ್ರತಿಪಾದಿಸಿದವರಾಗಿದ್ದಾರೆ
ಎಂದರು.
ಸೌಹಾರ್ದದ ಅಧ್ಯಕ್ಷ ಉಮೇಶ ಬಳಬಟ್ಟಿ, ಉಪಾಧ್ಯಕ್ಷ
ಯಲಗೊಂಡ ಬೇವನೂರ, ನಿರ್ದೇಶಕರಾದ ರಮೇಶ
ಹತ್ತಿ, ಬಸವರಾಜ ದಶವಂತ, ಶಿವಾನಂದ ಮಠಪತಿ,
ಮಹಾಂತೇಶ ಮುಡಕೆ, ವೀರಬಸು ಅರಳಿ, ವ್ಯವಸ್ಥಾಪಕ
ಅಶೋಕ ಬಳಬಟ್ಟಿ, ಶಿವಾನಂದ ಮಲಕಗೊಂಡ, ಶ್ರೀಕಾಂತ ಗಡಗಲಿ, ಸಚಿನ್ ಮೇಡೇದಾರ, ಶಂಕರ ಜಮಾದಾರ, ಮಲ್ಲಿಕಾರ್ಜುನ ಹಾವಿನಾಳಮಠ, ಬಸವರಾಜ ಕಿತ್ತಲಿ ಸೇರಿದಂತೆ ಇನ್ನಿತರ ಉಪಸ್ಥಿತರಿದ್ದರು.
ಇಂಡಿ: ಪಟ್ಟಣದ ಅಕ್ಕಮಹಾದೇವಿ ಸೌಹಾರ್ದ ಸಹಕಾರಿಯಲ್ಲಿ ಅಕ್ಕಮಹಾದೇವಿ ಜಯಂತಿ ಆಚರಿಸಲಾಯಿತು.