ಮಸ್ಕಿ: ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಜಕ್ಕೇರುಮಡು ತಾಂಡಾದ ಜಮೀನುವೊಂದರಲ್ಲಿ ಆಕಸ್ಮಿಕ ಬೆಂಕಿ ತಗುಲಿ ಮೇವಿನ ಬಣವೆ ಸುಟ್ಟು ಕರಕಲಾದ ಘಟನೆ ನಡೆದಿದೆ. ರಾತ್ರಿ 9:30 ರ ವೇಳೆಗೆ ಈ ಘಟನೆ ನಡೆದಿದ್ದು, ರಾಶಿ ಮಾಡಿದ ಜೋಳದ ಮೇವಿನ ಜೊತೆಗೆ ಟ್ರಾಕ್ಟರ್ ಬಿಡಿ ಭಾಗಗಳು ಸುಟ್ಟು ಹೋಗಿವೆ. ಜಾನುವಾರುಗಳಿಗೆ ಶೇಖರಿಸಿದ್ದ ಮೇವು ಸುಟ್ಟಿದ್ದಕ್ಕೆ ರೈತ ಶೇಖರಪ್ಪ ಕಂಗಾಲಾಗಿದ್ದಾನೆ. ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಆಕಸ್ಮಿಕ ಬೆಂಕಿಗೆ ಇನ್ನೆರಡು ಮೇವಿನ ಬಣವೆಗಳು ಸುಟ್ಟು ಹೋಗುವದನ್ನು ಅಗ್ನಿಶಾಮಕದಳವರು ತಡೆದಿದ್ದಾರೆ ಎನ್ನಲಾಗುತ್ತಿದೆ.