ವಿಜಯಪುರದಲ್ಲಿ ಏಡ್ಸ್ ಜನಜಾಗೃತಿ ಬೀದಿ ನಾಟಕ
ವಿಜಯಪುರ, ಸೆ. 25: ನಗರದ ಬಿ.ಎಲ್.ಡಿ.ಈ ಸಂಸ್ಥೆಯ ಶ್ರೀ ಸಂಗನ ಬಸವ ಫಾರ್ಮಸಿ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಎನ್ ಎಸ್ ಎಸ್ ಘಟಕ ಮತ್ತು ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿ ವತಿಯಿಂದ ನಗರದದಲ್ಲಿ ಮೂರು ಕಡೆಗಳಲ್ಲಿ ಜನಜಾಗೃತಿ ಅಭಿಯಾನದ ಅಂಗವಾಗಿ ಬೀದಿ ನಾಟಕ ಪ್ರದರ್ಶನ ನಡೆಯಿತು.
ಮಂಗಳವಾರ ಶ್ರೀ ಸಿದ್ಧೇಶ್ವರ ದೇವಸ್ಥಾನ, ಗಾಂಧಿ ಚೌಕ ಮತ್ತು ಕೇಂದ್ರ ಬಸ್ ನಿಲ್ದಾಣದ ಎದುರು ಫಾರ್ಮಸಿ ಕಾಲೇಜಿನ ಡಿ. ಫಾರ್ಮ್ ವಿದ್ಯಾರ್ಥಿಗಳು ಏಡ್ಸ್ ರೋಗ ತಡೆಗಟ್ಟುವ ವಿಧಾನಗಳು ಮತ್ತು ಮುಂಜಾಗೃತೆ ಕ್ರಮಗಳ ಕುರಿತು ಬೀದಿ ನಾಟಕ ಪ್ರದರ್ಶನದ ಮೂಲಕ ಜನಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ವಿಜಯಪುರದ ಜಿಲ್ಲಾ ಏಡ್ಸ್ ಪ್ರೆವೆನ್ಶನ್ ಅಂಡ್ ಕಂಟ್ರೋಲ್ ಯುನಿಟ್ ಸಿಬ್ಬಂದಿ ಬಾಬುರಾವ ತಳವಾರ, ರವಿ ಕಿತ್ತೂರ ಮತ್ತು ಅರ್ಚನಾ ವಲಕೋಟಿ, ಬಿ.ಎಲ್.ಡಿ.ಈ ಫಾರ್ಮಸಿ ಕಾಲೇಜಿನ ಸಿಬ್ಬಂದಿ ಪ್ರಶಾಂತ್ ಜೋರಾಪೂರ, ಸಂದೀಪ್ ಉಮರಾಣಿ, ಅಜಯ ಶಹಾಪುರ, ಶಿವರಾಜ್ ಕಾಪಸೆ, ಡಾ. ಮಲ್ಲಿನಾಥ, ಡಾ. ಚೇತನಕುಮಾರ ಮುಂತಾದವರು ಉಪಸ್ಥಿತರಿದ್ದರು.
1. ಏಡ್ಸ್ ಜನಜಾಗೃತಿ ಬೀದಿ ನಾಟಕ: ವಿಜಯಪುರ ನಗರದ ಬಿ.ಎಲ್.ಡಿ.ಈ ಸಂಸ್ಥೆಯ ಶ್ರೀ ಸಂಗನ ಬಸವ ಫಾರ್ಮಸಿ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಎನ್ ಎಸ್ ಎಸ್ ಘಟಕ ಮತ್ತು ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿ ವತಿಯಿಂದ ನಗರದ ಸಿದ್ದೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಏಡ್ಸ್ ತಡೆಗಟ್ಟುವ ಮುಂಜಾಗೃತೆ ಕುರಿತು ಜನಜಾಗೃತಿ ಅಭಿಯಾನದ ಅಂಗವಾಗಿ ಬೀದಿ ನಾಟಕ ಪ್ರದರ್ಶನ ನಡೆಯಿತು. ಡಿ. ಫಾರ್ಮ್ ವಿದ್ಯಾರ್ಥಿಗಳು ಬೀದಿ ನಾಟಕ ಪ್ರದರ್ಶಿಸಿದರು.
2. ಏಡ್ಸ್ ಜನಜಾಗೃತಿ ಬೀದಿ ನಾಟಕ: ವಿಜಯಪುರ ನಗರದ ಬಿ.ಎಲ್.ಡಿ.ಈ ಸಂಸ್ಥೆಯ ಶ್ರೀ ಸಂಗನ ಬಸವ ಫಾರ್ಮಸಿ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಎನ್ ಎಸ್ ಎಸ್ ಘಟಕ ಮತ್ತು ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿ ವತಿಯಿಂದ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಏಡ್ಸ್ ತಡೆಗಟ್ಟುವ ಮುಂಜಾಗೃತೆ ಕುರಿತು ಜನಜಾಗೃತಿ ಅಭಿಯಾನದ ಅಂಗವಾಗಿ ಬೀದಿ ನಾಟಕ ಪ್ರದರ್ಶನ ನಡೆಯಿತು. ಡಿ. ಫಾರ್ಮ್ ವಿದ್ಯಾರ್ಥಿಗಳು ಬೀದಿ ನಾಟಕ ಪ್ರದರ್ಶಿಸಿದರು.