ರಸಗೊಬ್ಬರ ಗೋದಾಮಿನ ಮೇಲೆ ದಾಳಿ..! ₹ 1ಲಕ್ಷ 89 ಸಾವಿರ ಮೌಲ್ಯದ ರಸಗೊಬ್ಬರ ಜಪ್ತಿ
ವಿಜಯಪುರ : ಅನಧಿಕೃತವಾಗಿ ರಸಗೊಬ್ಬರ ಸಂಗ್ರಹಿಸಿದ ಗೋದಾಮಿನ ಮೇಲೆ ಕೃಷಿ ಅಧಿಕಾರಿಗಳ ಜಾಗೃತ ತಂಡ ದಾಳಿಗೈದಿರುವ ಘಟನೆ ವಿಜಯಪುರ ನಗರದ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಧರಿದೇವರ ಪೆಟ್ ಇಂಡ್ ಸ್ಟ್ರೀಜ್ ಗೆ ಸೇರಿದ ಗೋದಾಮಿನ ಮೇಲೆ ದಾಳಿ ಅಧಿಕಾರಿಗಳು ದಾಳಿಗೈದು 900 ಕೆಜಿಯುಳ್ಳ ಅನಧಿಕೃತ ಗೊಬ್ಬರದ ಪ್ಯಾಕೇಟ್ ಸೀಜ್ ಮಾಡಿದ್ದಾರೆ. ಅಂದಾಜು 1 ಲಕ್ಷ 89 ಸಾವಿರ ಮೌಲ್ಯದ ರಸಗೊಬ್ಬರ ಜಪ್ತಿಗೈದಿದ್ದಾರೆ. ರೈತರಿಗೆ ಮಾರಾಟ ಮಾಡಲು ಅನಧಿಕೃತವಾಗಿ ರಸಗೊಬ್ಬರ ಸಂಗ್ರಹಿಸಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕೃಷಿ ಜಾಗೃತ ದಳದ ಎಪಿ ಬಿರಾದಾರ, ರೇಷ್ಮಾ ಸುತಾರ ನೇತೃತ್ವದಲ್ಲಿ ದಾಳಿ ಮಾಡಿದ್ದಾರೆ.