ಒಳಮೀಸಲು ಜಾರಿಗೆ ಕ್ರಮ ಸಂಖ್ಯೆ 61 ಜಾತಿ ಮಾದಿಗ ಬರೆಯಿಸಿ : ನೆಲ್ಲಗಿ
ವಿಜಯಪುರ: ಒಳಮೀಸಲು ಜಾರಿ ಸಂಬಂಧ ಸಮೀಕ್ಷೆ ನಡೆಸಲು ರಾಜ್ಯ ಸರಕಾರ ತೀರ್ಮಾನಿಸಿದ್ದು, ಮೇ 5 ರಿಂದ ಮೇ 21 ವರೆಗೆ ಮನೆ ಮನೆಗೆ ಬಂದು ಜಾತಿ ಸಮೀಕ್ಷೆ ಮಾಡಲಿದ್ದು, ಮಾದಿಗ ಸಮುದಾಯದವರು ಜಾತಿ ಕಾಲಂ 61ರಲ್ಲಿ ಮಾದಿಗ ಎಂದು ಬರೆಸಬೇಕು ಎಂದು ಕರ್ನಾಟಕ ಮಾದಿಗರ ಸಂಘದ ತಾಲೂಕ ಅಧ್ಯಕ್ಷ ಯಲ್ಲಪ್ಪ ನೆಲ್ಲಗಿ ಹೇಳಿದ್ದಾರೆ. ನಮ್ಮ ಮಾದಿಗ ಸಮುದಾಯ ಅತ್ಯಂತ ಹಿಂದುಳಿದ ಸಮಾಜವಾಗಿದು ಸರಕಾರಿ ಸೌಲಭ್ಯ ಪಡೆಯುವಲ್ಲಿ ವಿಫಲರಾಗಿದ್ದಾರೆ. ಒಳ ಮೀಸಲು ಜಾರಿಗೆ ಸಮೀಕ್ಷೆ ನಡೆಸಲಾಗುತ್ತದೆ. ಈ ಸಮೀಕ್ಷೆ ನಂತರ ಸಿಗುವ ಅಂಕಿ ಅಂಶ ಆಧರಿಸಿ ಮೀಲಸು ಪ್ರಮಾಣ ಸಿಗುತ್ತದೆ ಎಂದು ತಿಳಿಸಿದ್ದಾರೆ. ಹೀಗಾಗಿ ಮಾದಿಗ ಸಮುದಾಯದವರು ಜಾತಿ ಕಾಲಂನಲ್ಲಿ ಮಾದಿಗ ಎಂದು ಮಾತ್ರ ಬರೆಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.