ವಿಜಯಪುರ : ಕರ್ತವ್ಯಕ್ಕೆ ಹೋಗುವಾಗ ಅಪರಿಚಿತ ವಾಹನವೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಪೊಲೀಸನೋರ್ವ ಸಾವಿಗೀಡಾದ ಘಟನೆ ವಿಜಯಪುರದ ತೊರವಿ ಬಳಿ ಸಂಭವಿಸಿದೆ. ಸಿಕಂದರ ನಾಟೀಕರ ಎಂಬ ಪೊಲೀಸ್ರೇ ಸಾವಿಗೀಡಾಗಿದ್ದು, ವಿಜಯಪುರದ ವೈರಲೇಸ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಪರಾರಿಯಾದ ವಾಹನದ ಗುರುತು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ. ವಿಜಯಪುರ ಗ್ರಾಮೀಣ ಪದವಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.