ಗೂಡ್ಸ್ ಆಟೋ ಹಾಗೂ ಬೈಕ್ ನಡುವೆ ಅಪಘಾತ : ಬೈಕ್ ಸವಾರ ಸಾವು..!
ಹನೂರು :ಗೂಡ್ಸ್ ಆಟೋ ಹಾಗೂ ಬೈಕ್ ನಡುವೆ ಅಪಘಾತವಾಗಿ ದ್ವಿಚಕ್ರ ವಾಹನದ ಸವಾರ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಸೋಮವಾರ ಮಧ್ಯಾಹ್ನ ಸುಳ್ವಾಡಿ ಗ್ರಾಮದ ಸಮೀಪ ಈ ಘಟನೆ ನಡಿದಿದೆ.
ಮಾರ್ಟಳ್ಳಿನಿಂದ ನಾಲ್ ರೋಡ್ ಕಡೆಗೆ ತೆರಳುತಿದ್ದ ಮಹೇಂದ್ರ ಪಿಕಪ್ ಆಟೋ ಸುಳ್ವಾಡಿ ಹಾಗೂ ಸಂದನ್ ಪಾಳ್ಯ ಗ್ರಾಮದ ಸಮೀಪ ಬೈಕ್ ಮತ್ತು ಮಹೇಂದ್ರ ಪಿಕಪ್ ಗೂಡ್ಸ್ ಆಟೋ ಮುಖಾಮುಖಿ ಗುದ್ದಿದ ಪರಿಣಾಮ ಸ್ಥಳದಲ್ಲೇ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿ ತಾಲೂಕಿನ ನೆಲ್ಲೂರು ಗ್ರಾಮದ ರಾಮಚಂದ್ರ (33) ಎಂದು ತಿಳಿದುಬಂದಿದೆ. ಸ್ಥಳದಲ್ಲಿ ಸಂಬಂದಿಕರ ಆಕ್ರಂದನ ಮುಗಿಲು ಮುಟ್ಟಿದೆ ಘಟನೆ ತಿಳಿಯುತ್ತಿದ್ದಂತೆ ರಾಮಾಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ವರದಿ: ಚೇತನ್ ಕುಮಾರ್ ಎಲ್,ಚಾಮರಾಜನಗರ ಜಿಲ್ಲೆ


















