ಇಂಡಿ : ತಾಲೂಕಿನ ಹಂಜಗಿ ಗ್ರಾಮದ ಶಕೀಲ ಕಾಸಿಮಸಾಬ ಸಯ್ಯದ್ ರವರಿಗೆ ಸೇರಿದ ಸುಮಾರು 3ಲಕ್ಷರೂಪಾಯಿಗಳ ದವಸ ಧಾನ್ಯ ಹಾಗೂ ಹಣ, ದಿನಬಳಕೆಯ ವಸ್ತುಗಳು ಬೆಲೆ ಬಾಳುವ ವಸ್ತುಗಳು ಬೆಂಕಿಗೆ ಆಹುತಿ ಆಗಿವೆ.ಘಟನಾ ಸ್ಥಳಕ್ಕೆ ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರು ಬೆಟ್ಟಿ ನೀಡಿ ಮನೆಯ ಯಜಮಾನ ಹಾಗೂ ಕುಟುಂಬದ ಸದಸ್ಯರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು.
ನಂತರ ಮಾತನಾಡಿ ಕೂಡೆಲೆ ಸಂಬಂಧಿಸಿದ ಇಲಾಖೆ ಪರೀಶಿಲಿಸಿ ಬೆಂಕಿಗೆ ಆಹುತಿ ಆದ ಮನೆಮವರಿಗೆ ಪಂಚಾಯಿತಿ ಇಂದ ಮನೆ ನೀಡಬೇಕು ಮತ್ತು ಪ್ರಕೃತಿ ಪರಿಹಾರ ನಿಧಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.ಇದೆ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಬಾಬು ಮೇತ್ರಿ,ಬಾಳು ರಾಠೋಡ, ಗ್ರಾಮದ ಪ್ರಮುಖರಾದ ಹುಸೇನಿ, ಸಯ್ಯದ್,ಮಕಬುಲ ಸಯ್ಯದ್,ಮಕ್ಬುಲ ಸಯ್ಯದ್,ಮೌಲಾಲಿ ಸಯ್ಯದ್, ಮುಂತಾದವರು ಉಪಸ್ಥಿತರಿದ್ದರು