ಇಂಡಿ ಹಳೆಯ ಬಸ್ ಡಿಪೋಗೆ ಬೇಟಿ ನೀಡಿದ ಎಸಿ ಅಬೀದ್ ಗದ್ಯಾಳ
ಇಂಡಿ : ಪಟ್ಟಣದ ಹಳೆಯ ಬಸ್ ಡಿಪೋ ಗೆ ಬೇಟಿ ನೀಡಿ, ಅಲ್ಲಿ ಕೈಗೊಳ್ಳ ಬೇಕಾದ ವಿವಿಧ ಕಾಮಗಾರಿಗಳ ಹಿನ್ನೆಲೆ ಸ್ಥಳ ಪರಿಶೀಲನೆ ಕಂದಾಯ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಸೋಮವಾರ ನಡೆಸಿದರು.
ಪಟ್ಟಣದಲ್ಲಿರುವ ತಾಲ್ಲೂಕು ಹಳೆ ಬಸ ಡಿಪೋದಲ್ಲಿ ಶೌಚಾಲಯ ನಿರ್ಮಿಸುವ ಹಾಗೂ ಗ್ರಾಮೀಣ ಮತ್ತು ನಗರ ಬಸ್ ನಿಲ್ದಾಣ ಬೇರೆ ಬೇರೆ ಮಾಡುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ಸದ್ಯ ಇಂಡಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಯತ್ತಚ್ಚೆವಾಗಿದೆ. ಆ ಕಾರಣಕ್ಕಾಗಿ ಪ್ರಯಾಣಿಕರ ಹಿತದೃಷ್ಟಿಯಿಂದ ಬಸ್ ನಿಲ್ದಾಣವನ್ನು ನಗರ ಮತ್ತು ಗ್ರಾಮೀಣ ಭಾಗವಾಗಿ ಬಸ್ ನಿಲ್ದಾಣ ಮಾಡುವ ದೃಷ್ಟಿಯಿಂದ ಇಂದು ಸ್ಥಳ ಪರಿಶೀಲನೆ ನಡೆಸಿದ್ದೆವೆ. ಅದಲ್ಲದೇ ಇಂದು ಮಧ್ಯಾಹ್ನ ಎನ್ ಕೆ ಆರ್ ಟಿ ಸಿ ಜಿಲ್ಲಾ ಅಧಿಕಾರಿಯೂ ಈ ಸ್ಥಳ ಪರಿಶೀಲನೆ ಮಾಡುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯ ಅಧಿಕಾರಿ ಮಹಾಂತೇಶ ಹಂಗರಗಿ, ಕೆ ಎಸ್ ಆರ್ ಟಿ ಸಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.



















