ಹೊಸ ಶಿಕ್ಷಣ ನೀತಿಯ ಪರವಾಗಿ ಇಂಡಿಯಲ್ಲಿ ಎಬಿವಿಪಿ ಬೃಹತ್ ಪ್ರತಿಭಟನೆ..!
ಎನ್ ಇ ಪಿ ರದ್ದತಿಯಿಂದ ಕರ್ನಾಟಕ ವಿಧ್ಯಾರ್ಥಿಗಳ ಭವಿಷ್ಯವನ್ನು ಕತ್ತಲೆಗೆ..!
ಇಂಡಿ : ಹೊಸ ಶಿಕ್ಷಣ ನೀತಿ (ಎನ್‌ಇಪಿ) ಅನ್ನು ರದ್ದು ಮಾಡಲು ಹೊರಟಿರುವ ರಾಜ್ಯ ಸರಕಾರದ ವಿರುದ್ಧ ಪಟ್ಟಣದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಮಾರು 5 ನೂರಕ್ಕೂ ಹೆಚ್ಚಿನ ವಿಧ್ಯಾರ್ಥಿಗಳು ಸೇರಿ ಬೃಹತ್ ಪ್ರತಿಭಟನೆ ಮಾಡಿದರು.
ಪಟ್ಟಣದ ಎಸ್ ಎಸ್ ಪಿ ಯು ಕಾಲೇಜನಿಂದ ಪ್ರತಿಭಟನೆ ಪ್ರಾರಂಭಸಿದ ಎಬಿವಿಪಿ ವಿಧ್ಯಾರ್ಥಿಗಳು ಅಂಬೇಡ್ಕರ್ ವೃತ್, ಮಹಾವೀರ ವೃತ್ ಹಾಗೂ ಮರಳಿ ಹೃದಯಭಾಗದ ಬಸವೇಶ್ವರ ವೃತ್ತಕ್ಕೆ ತೆರಳಿದವರು, ಪಟ್ಟಣದ ಪ್ರಮುಖ ರಸ್ತೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಆಕ್ರೋ ವ್ಯಕ್ತಪಡಿಸಿದರು. ತದನಂತರ ಆಡಳಿತ ಸೌಧಕ್ಕೆ ಆಗಮಿಸಿ ತಹಶಿಲ್ದಾರ ವಿಜಯ ಕಡಕಭಾವಿ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಗರ ಕಾರ್ಯದರ್ಶಿ ಸಚಿನ ಧಾನಗೊಂಡ ಮಾತಾನಾಡಿದ ಅವರು, ಶಿಕ್ಷಣವನ್ನು ರಾಜಕೀಯ ಸ್ವಾರ್ಥಸಾಧನೆಯ ವಸ್ತುವಾಗಿಸದೆ ಈಗಿನ ಎನ್ ಇ ಪಿ ಯನ್ನು ರದ್ದು ಗೊಳಿಸಬಾರದು. ಸರ್ಕಾರ ಮೊದಲು ಅದರಲ್ಲಿ ಯಾವ ದೋಷವಿದೆ ಅಂತಾ ಹೇಳಬೇಕು. ಎನ್‌ಇಪಿ ಬೇಡ ಎನ್ನುವ ರಾಜಕಾರಣಿಗಳ ಮಕ್ಕಳು ಹಾಗೂ ಮೊಮ್ಮಕ್ಕಳು ಯಾವ ಶಾಲೆಯಲ್ಲಿ ಓದುತ್ತಿದ್ದಾರೆ ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ಉಳ್ಳವರು ಮಕ್ಕಳು ಸಿಬಿಎಸ್‌ಸಿಯಲ್ಲಿ ಓದಬಹುದು, ಆದರೆ ಬಡಮಕ್ಕಳು ಮಾತ್ರ ಸ್ಟೇಟ್ ಸಿಲೆಬಸ್‌ನಲ್ಲಿ ಓದಬೇಕಾ..? ಬಹುತೇಕ ಖಾಸಗಿ ಶಾಲೆಗಳು ರಾಜಕಾರಣಿಗಳ ಒಡೆತನದ್ದಾಗಿದೆ. ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ಇದರ ಹಿಂದಿದೆ ಎಂದು ಗಂಭೀರ ಆರೋಪ ಮಾಡಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಿಂದ ಸುಧಾರಣೆ ಆಗಲಿದ್ದು, ನರ್ಸರಿಯಿಂದ ಉನ್ನತ ಶಿಕ್ಷಣದವರೆಗೆ ಹೊಸ ಶಿಕ್ಷಣ ವ್ಯವಸ್ಥೆ ಮೂಲಕ ಸುಧಾರಣೆ ಆಗಲಿದೆ. ಈ ಸುಧಾರಣೆ ವಿಶ್ವ ವ್ಯಾಪ್ತಿಯಲ್ಲಿ ಸಾಬೀತಾಗಿರುವಂತಹದ್ದು. ಯಾವುದೇ ವಿದ್ಯಾರ್ಥಿಗಳ ವಿರುದ್ಧವಾಗಿಲ್ಲ. ಇನ್ನೂ ಆತುರದಲ್ಲಿ ಶಿಕ್ಷಣ ನೀತಿ ಅನುಷ್ಠಾನಗೊಳಿಸಲಾಗಿಲ್ಲ. ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಕ್ರಮಕೈಗೊಳ್ಳಲಾಗುತ್ತಿದೆ. ಶಿಕ್ಷಣ ಕ್ಷೇತ್ರದ ಮೂಲತತ್ವಗಳಲ್ಲಿ ಸುಧಾರಣೆ ಮಾಡಲಾಗುತ್ತಿದೆ. ಕಲಾ ವಿದ್ಯಾರ್ಥಿಗಳಿಗೆ ಹೆಚ್ಚಿನ ಆಯ್ಕೆಗಳನ್ನು ನೀಡಲಾಗಿದೆ. ಅಂತರ್ ಶಿಸ್ತು ಪಾಲನೆಗೆ ಆದ್ಯತೆ ನೀಡಲಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಇಲ್ಲಾಂದ್ರೆ ನಿಂತ ನೀರಾಗುತ್ತದೆ. ನಮ್ಮ ವಿದ್ಯಾರ್ಥಿಗಳು ವಿಶ್ವಮಟ್ಟದಲ್ಲಿ ಸ್ಪರ್ಧೆ ಮಾಡಬೇಕಿದೆ. ನರ್ಸರಿಯಿಂದ ಉನ್ನತ ಶಿಕ್ಷಣದವರೆಗೂ ಎನ್ಇಪಿಯಿಂದ ಸುಧಾರಣೆಯಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮರ್ಥ ಗಾಯಕವಾಡ, ಈರಣ್ಣ ಸಿಂದಗಿ, ವಿಶಾಲ ಸಿಂದೆ, ಅಭಿಜಿತ್ ಬಿರಾದಾರ, ಸಿದ್ದಾರಾಮ ನಾಯ್ಕೊಡಿ, ಅಂಬಣ್ಣ ಪೂಜಾರಿ, ಚಂದ್ರಕಾಂತ ಕಾಂಬಳೆ , ಪರಮೇಶ್ವರ ರೂಗಿ ಹಾಗೂ ಇನ್ನೂ ಅನೇಕ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.