ಇಂಡಿಯಲ್ಲಿ ಎಬಿವಿಪಿ ಕಾರ್ಯಕರ್ತರಿಂದ ರಾಷ್ಟ್ರೀಯ ಹೆದ್ದಾರಿ ತಡೆ..! ಕಾರಣ ಗೊತ್ತಾ..?
ಇಂಡಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಿಂದ ಬುಧವಾರ ವಿಜಯಪುರ ರಸ್ತೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತಾರೋಕ್ ಮಾಡಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ಎಸ್.ಜಿ. ಬಿರಾದಾರ ಅವರಿಗೆ ಮನವಿ ನೀಡಿದರು. ಸುಮಾರು ಒಂದು ಗಂಟೆಗಳ ಕಾಲ ರಸ್ತೆಗಳ ಮೇಲೆ ಬಸ್ಸುಗಳು ಹಾಗೂ ಸಾರ್ವಜನಿಕರ ವಾಹನಗಳು ಅಲ್ಲೇ ನಿಂತಿದ್ದರಿAದ. ಸಾರ್ವಜನಿಕರಿಗೆ ತೊಂದರೆ ಉಂಟಾಯಿತು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ನಗರ ಘಟಕದ ಕಾರ್ಯದರ್ಶಿ ಸಚಿನ್ ಧಾನಗೊಂಡ ಮಾತನಾಡಿ, ಇಂಡಿ ತಾಲೂಕಿನಾದ್ಯಂತ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಪಡೆಯಲು ಪಟ್ಟಣಕೆ ನಿತ್ಯ ಬರುತ್ತಾರೆ. ವಿದ್ಯಾರ್ಥಿಗಳ ತರಗತಿಗಳು ಪ್ರಾರಂಭವಾದ ನಂತರ ವಿದ್ಯಾರ್ಥಿಗಳ ಬರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದ್ದು, ಸರಿಯಾದ ಸಮಯಕ್ಕೆ ಬಸ್ ಪಾಸ್ ಹಾಗೂ ಇಂಡಿಯಾದ ವಿಜಯಪೂರ ವಿಜಯಪುರದಿಂದ ಇಂಡಿಗೆ ಬರುವ ಬಸ್ಸುಗಳು ಆದರ್ಶ ವಿದ್ಯಾಲಯದಲ್ಲಿ ನಿಲ್ಲುವುದಿಲ್ಲ. ಆದರಿಂದ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜಿಗೆ ಹೋಗು ಬರಲು ನಿತ್ಯ ತೊಂದರೆ ಉಂಟಾಗುತ್ತಿದ್ದು. ಆದ್ದರಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಲು ತುಂಬಾ ತೊಂದರೆ ಉಂಟಾಗುತ್ತಿದ್ದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕರು ಅತಿ ಶೀಘ್ರದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ನಿಲ್ಲುಸುವಂತೆ ಒತ್ತಾಯಿಸಿದರು. ಒಂದು ವೇಳೆ ಮುಂದಿನ ದಿನಮಾನಗಳಲ್ಲಿ ಬಸ್ಸು ನಿಲ್ಲಿಸದಿದ್ದರೆ ರಾಷ್ಟ್ರೀಯ ಹೆದ್ದಾರಿಯನ್ನು ಸಂಪೂರ್ಣ ಬಂದ್ ಮಾಡಿ ಪ್ರತಿಭಟಿಸಬೇಕಾಗುತ್ತದೆ ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.
ವಿದ್ಯಾರ್ಥಿನಿ ಜ್ಯೋತಿ ಹಳಗುಣಕಿ ಮಾತನಾಡಿ, ಇಂಡಿ ಪಟ್ಟಣದಿಂದ ಸುಮಾರು ೩ ಕಿ.ಲೋ. ದೊರದಲ್ಲಿರುವ ಸರಕಾರಿ ಡಿಗ್ರಿ ಕಾಲೇಜ, ಪಿಯು ಕಾಲೇಜ, ಆದರ್ಶ ವಿದ್ಯಾಲಯ, ಸರಕಾರಿ ಕೈಗಾರಿಕ ತರಬೇತಿ ಕೇಂದ್ರ, ಅಲ್ಪಸಂಖ್ಯೆತರ ವಸತಿ ನಿಲಯ, ಕರ್ನಾಟಕ ಟೀಚರ ಬಿಈಡ್ ಶಾಲೇಜ ಸೇರಿದಂತೆ ಅನೇಕ ಶಾಲಾ, ಕಾಲೇಜುಗಳು ಇರುದರಿಂದ ಸುಮಾರು ೩ ಸಾವಿರ ವಿದ್ಯಾರ್ಥಿಗಳು ರಸ್ತೆಯಲ್ಲಿ ನಿತ್ಯ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಉಂಟಾಗಿದ್ದು, ತೀವ್ರ ತೊಂದರೆ ಅನುಭವಿಸುವಂತಾಗಿದೆ. ಸರಿಯಾದ ಸಮಯಕ್ಕೆ ಬಸ್ ನಿಲ್ಲುವಂತೆ ವ್ಯವಸ್ಥಾಪಕರಿಗೆ ವಿದ್ಯಾರ್ಥಿನಿ ಒತ್ತಾಯಿಸಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿ ತಾಲೂಕಾ ಘಟಕದ ಸಂಚಾಲಕ ಸಮರ್ಥ ಗಾಯಕವಾಡ ಮಾತನಾಡಿ, ಆದರ್ಶ ಶಾಲೆಯಲ್ಲಿ ಸುಮಾರು ೪೮೦ ವಿದ್ಯಾರ್ಥಿಗಳು, ಸರಕಾರಿ ಡಿಗ್ರಿ ಕಾಲೇಜಿನಲ್ಲಿ ೧೧೪೨ ವಿದ್ಯಾರ್ಥಿಗಳು, ಸರಕಾರಿ ಪಿಯು ಕಾಲೇಜಿನಲ್ಲಿ ೭೦೦ ವಿದ್ಯಾರ್ಥಿಗಳು, ಬಿಈಡ್ ಕಾಲೇಜು ೨೦೦ ವಿದ್ಯಾರ್ಥಿಗಳು, ಐಟಿಐ ಕಾಲೇಜು ೧೫೦, ಏಂಜಲ್ಸ್ ೫೦೦, ಅಲ್ಪಸಂಖ್ಯೆತರ ವಸತಿ ನಿಲಯದಲ್ಲಿ ೧೦೦ ವಿದ್ಯಾರ್ಥಿಗಳು ತಾಲೂಕಿನಾದ್ಯಂತ ವಿವಿಧ ಗ್ರಾಮಗಳಿಂದ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಪಟ್ಟಣಕ್ಕೆ ಆಗಮಿಸಿ ವಿರ್ದ್ಯಾಜನೆ ಮಾಡುತ್ತಾರೆ ಅವರಿಗೆ ಅನುಕುಲವಾಗುವಂತೆ ಬಸುಗಳನ್ನು ಒಡಿಸಿ ಎಂದು ಆಗ್ರಹಿಸಿದ ಅವರು, ಎಲ್ಲ ಬಸ್‌ಗಳು ಎರಡು ಮೂರು ದಿನಗಳ ಒಳಗೆ ನಿಲ್ಲುವಂತೆ ಮಾಡದಿದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸುವುದಾಗಿ ಎಚ್ಚರಿಸಿದ್ದಾರೆ.
ಪ್ರತಿಭಟನಾಕಾರರು ವಿದ್ಯಾರ್ಥಿಗಳ ಬೇಡಿಕೆ ಪರಿಗಣ ಸದೆ ಇರುವ ಕೆಎಸ್‌ಆರ್‌ಟಿಸಿ, ರಾಜ್ಯ ಸರ್ಕಾರ ನಡೆ ಖಂಡಿಸಿ ಘೋಷಣೆ ಕೂಗಿದರು.
ಇಂಡಿಯಿAದ ವಿಜಯಪುರ, ವಿಜಯಪುರದಿಂದ ಇಂಡಿ ಮಾರ್ಗವಾಗಿ ಪಟ್ಟಣಕ್ಕೆ ಬರುವ ಹೋಗುವ ಬಸ್ಸುಗಳು ಪ್ರಯಾಣ ಕರಿಂದ ತುಂಬಿರುತ್ತವೆ. ಈ ಕಾರಣದಿಂದ ಆದರ್ಶ ವಿದ್ಯಾಲಯದ ಬಳಿ ಬಸ್‌ಗಳ ನಿಲುಗಡೆ ಆಗುತ್ತಿಲ್ಲ. ಇದರಿಂದ ಕಾಲ್ನಡಿಗೆ ಅಥವಾ ಪ್ರಯಾಣ ಕರ ಆಟೊಗಳಲ್ಲಿ ತೆರಳುವ ಪ್ರಸಂಗ ಬಂದಿದ್ದು, ವಿದ್ಯಾರ್ಥಿಗಳು ಸಮಯಕ್ಕೆ ಶಾಲಾ ಕಾಲೇಜಿಗೆ ತಲುಪಲು ಆಗುತ್ತಿಲ್ಲ. ಆದ್ದರಿಂದ ಶಾಲಾ, ಕಾಲೇಜು ವಿದ್ಯಾರ್ಥಿಗಳ ಪ್ರಯಾಣಕ್ಕೆ ಅನುಕೂಲವಾಗುವಂತೆ ಬೆಳಗ್ಗೆ ಮತ್ತು ಸಂಜೆ ಹೆಚ್ಚುವರಿ ಬಸ್ ಸೇವೆ ಒದಗಿಸಬೇಕು ಎಂದು ಒತ್ತಾಯಿಸಿದರು.
ತಮ್ಮ ಸಮಸ್ಯೆ ಬಗೆಹರಿಸಲು ಕಂದಾಯ ಉಪವಿಭಾಗ ಅಧಿಕಾರಿಗಳು ಸ್ಥಳಕ್ಕಾಗಮಿಸಬೇಕು ಎಂದು ಪಟ್ಟು ಹಿಡಿದರು. ನಂತರ ಸ್ಥಳಕ್ಕಾಗಮಿಸಿದ ಸಾರಿಗೆ ಸಂಸ್ಥೆ ಅಧಿಕಾರಿಗಳು ನಾಳೆಯಿಂದಲೇ ಹೆಚ್ಚುವರಿ ಬಸ್ ಸೇವೆ ಒದಗಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.
ಪ್ರತಿಭಟನೆಯಲ್ಲಿ ವಿಶಾಲ ಸಿಂಧೆ, ಚಿದಾನಂದ ತೋಳನೂರ, ಚಂದ್ರಕಾAತ ಕಾಂಬಳೆ, ಅರುಣ ಪೂಜಾರಿ, ಅಂಬ್ಬಣ ಪೂಜಾರಿ, ಪರಮೇಶ ಮುದೋಳ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಶೈಕ್ಷಣಕ ಬೆಳವಣಗೆಯಿಂದ ಕ್ಷೇತ್ರ ಪ್ರಗತಿ ಮತ್ತು ಬದಲಾವಣೆ ಕಾಣಲು ಸಾಧ್ಯ ಎಂಬ ಚಿಂತನೆಯಿAದ ಶಾಸಕ ಯಶವಂತರಾಯಗೌಡ ಪಾಟೀಲರವರು ಶೈಕ್ಷಣ ಕ ಹಬ್, ಆದರ್ಶ ಶಾಲೆ, ಸರಕಾರಿ ಪಿಯು ಕಾಲೇಜು, ಡಿಗ್ರಿ ಕಾಲೇಜು, ಐಟಿಐ ತರಬೇತಿ ಶಾಲೆ ಹಾಗೂ ವಿಧ್ಯಾರ್ಥಿ ವಸತಿ ನಿಲಯಗಳು ಈ ಭಾಗದಲ್ಲಿ ಮಾಡಿದ್ದಾರೆ. ಅದಲ್ಲದೇ ಇದೆ ಬಾಗದಲ್ಲಿ ಎಂಜಲ್ಸ್ ಪ್ರಾಥಮಿಕ, ಪ್ರೌಢ ಹಾಗೂ ಕರ್ನಾಟಕ ಪ್ರಾಥಮಿಕ, ಪ್ರೌಢ ಮತ್ತು ಬಿಇಡಿ ತರಬೇತಿ ಕಾಲೇಜು ಇರುವುದರಿಂದ ಸುಮಾರು ೪ ಸಾವಿರ ವಿದ್ಯಾರ್ಥಿಗಳು ಜ್ಞಾನಾರ್ಜನೆ ಪಡೆಯುತ್ತಿದ್ದಾರೆ. ಹಾಗಾಗಿ ಈ ಕೂಡಲೇ ಅಧಿಕಾರಿಗಳು ವಿಧ್ಯಾರ್ಥಿಗಳಿಗೆ ಶೈಕ್ಷಣ ಕ ವೇಳಾಪಟ್ಟಿಗೆ ಅನುಗುಣವಾಗಿ ಬಸ್ ಸೌಕರ್ಯ ಒದಗಿಸಬೇಕೆಂದು ಮನವಿ ಮಾಡಿಕೊಳ್ಳುತ್ತೆನೆ. ಹಾಗೂ ಈ ಬಗ್ಗೆ ಶಾಸಕರ ಗಮನಕ್ಕೆ ತರುತ್ತೆನೆ.
ಹುಚ್ಚಪ್ಪ ತಳವಾರ ಕಾಂಗ್ರೆಸ್ ಮುಖಂಡ.
ದಿನಾಲು ಬೆಳಗ್ಗೆ ೨೯ ಬಸುಗಳು ಸಂಜೆ ೩ರಿಂದ ೫ರವರೆಗೆ ೨೪ ಬಸುಗಳು ನಿಲ್ಲುವಂತೆ ಬಸ್ ಕಂಟ್ರೋಲ್ ದಾರ, ಡ್ರೆöÊವರ ಹಾಗೂ ಕಂಡಕ್ಟರ್‌ಗಳಿಗೆ ತಿಳಿಸಿದ್ದು, ಒಂದು ವೇಳೆ ಬಸುಗಳನ್ನು ನಿಲ್ಲುವುದಿಲ್ಲ ಎಂದು ದೂರು ಬಂದರೆ ಅವರ ಮೆಲೆ ಕ್ರಮ ತೆಗೆದುಕೊಳ್ಳುತೇನೆ.
ಎಸ್.ಜಿ. ಬಿರಾದಾರ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ಇಂಡಿ.
ಇಂಡಿ: ಪಟ್ಟಣದ ವಿಜಯಪುರ ರಸ್ತೆಯ ಆದರ್ಶ ವಿದ್ಯಾಲಯದ ಹತ್ತಿರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಿಂದ ರಾಷ್ಟ್ರೀಯ ಹೆದ್ದಾರೆ ರಸ್ತಾರೋಕ್ ಮಾಡಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ಎಸ್.ಜಿ. ಬಿರಾದಾರ ಅವರಿಗೆ ಮನವಿ ನೀಡಿದರು.
ಇಂಡಿ: ಪಟ್ಟಣದ ವಿಜಯಪುರ ರಸ್ತೆಯ ಆದರ್ಶ ವಿದ್ಯಾಲಯದ ಹತ್ತಿರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಿಂದ ರಾಷ್ಟ್ರೀಯ ಹೆದ್ದಾರೆ ರಸ್ತಾರೋಕ್ ಮಾಡಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.