ಇಂಡಿ : ವಿಶ್ವವಿದ್ಯಾಲಯಗಳು ವಿಧ್ಯಾರ್ಥಿಗಳ ಜೀವನವನ್ನು ರೂಪಿಸುವ ಶಿಕ್ಷಣದ ಕೇಂದ್ರವಾಗಬೇಕು. ಆದರೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ವಿಧ್ಯಾರ್ಥಿಗಳ ಸಮಸ್ಯೆಯಿಂದ ಚೆರ್ಚೆಗೆ ಗ್ರಾಸ ವಾಗುತ್ತಿದೆ. ಕೂಡಲೇ ವಿಧ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ತಾಲ್ಲೂಕು ಆಡಳಿತ ಸೌಧದ ಎದುರು ಪ್ರತಿಭಟನೆ ಮಾಡಿದರು.
ಪಟ್ಟಣದ ಜಿ .ಆರ್ .ಜಿ ಕಲಾ ಮಹಾವಿದ್ಯಾಲಯದಿಂದ ಪ್ರತಿಭಟನೆ ಪ್ರಾರಂಭಸಿದ ಎಬಿವಿಪಿ ಕಾರ್ಯಕರ್ತರು, ಹೃದಯ ಭಾಗದ ವೃತ್ ಕ್ಕೆ ಮಾನವ ಸರಪಳಿ ನಿರ್ಮಿಸಿ ಕೂಗಿದ ವಿಧ್ಯಾರ್ಥಿಗಳು, ವಿಧ್ಯಾರ್ಥಿಗಳು ಗುಡಿಗದರೆ ವಿಧಾನಸೌಧವೇ ನಡುಗುತ್ತೆ ಎಂದು ಎಚ್ಚರಿಕೆ ಮೂಡಿಸಿದರು. ಮುಂದುವರೆದು ಡಾ.ಬಿ.ಆರ್ ಅಂಬೇಡ್ಕರ್ ವೃತಕ್ಕೆ ತೆರಳಿ ಹಾಗೇ ತಾಲೂಕು ಆಡಳಿತ ಸೌಧಕ್ಕೆ ತಲುಪಿದ ಪ್ರತಿಭಟನಾಕಾರರು ಶಿರಸ್ತೆದಾರ ಎಸ್.ಆರ್ ಮುಜಗೊಂಡ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಬಿವಿಪಿ ಕಾರ್ಯಕರ್ತರು ಈರಣ್ಣ ಸಿಂದಗಿ, ಸಚಿನ ದನಗೊಂಡ ಮಾತಾನಾಡಿದ ಅವರು, ವಿಧ್ಯಾರ್ಥಿಗಳಿಗೆ ಪೂರಕವಾದ ಶೈಕ್ಷಣಿಕ ನಿರ್ಮಾಣ ಮಾಡುವುದು ವಿಶ್ವವಿದ್ಯಾಲಯಗಳ ಕರ್ತವ್ಯ ಯಾಗಿದೆ. ಆದರೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಶೈಕ್ಷಣಿಕ ಸಮಸ್ಯೆ ಬಗೆಹರಿಸಬೇಕು. ಪದವಿ ಪರಿಕ್ಷೆ ಫಲಿತಾಂಶ ನಿಗದಿತ ಸಮಯದಲ್ಲಿ ಪ್ರಕಟಿಸಬೇಕು. ಪದೇ ಪದೇ ವಿದ್ಯಾರ್ಥಿಗಳ ಪಠ್ಯಕ್ರಮ ಬದಲಾವಣೆ ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳ ಶುಲ್ಕ ಕಡಿಮೆ ಮಾಡಬೇಕು. ಪ್ರಶ್ನೆ ಪತ್ರಿಕೆ ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಪ್ರಿಂಟ್ ಮಾಡಬೇಕು ಜೊತೆಗೆ ವಿಧ್ಯಾರ್ಥಿಗಳ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರಪುಲ ಕಟ್ಟಿಮನಿ, ಆಕಾಶ ಹಡಪದ, ದರ್ಶನ ತೋಳನೂರ, ಗಣೇಶ ಹಂಜಗಿ, ವಿಶ್ವನಾಥ ಬಿರಾದಾರ, ಅಂಬಿಕಾ, ಭಾಗ್ಯಶ್ರೀ, ರವಿಶಂಕರ್ ಹಾಗೂ ಅನೇಕ ವಿಧ್ಯಾರ್ಥಿಗಳು ಮತ್ತು ಎಬಿವಿಪಿ ಕಾರ್ಯಕರ್ತರು ಉಪಸ್ಥಿತರಿದ್ದರು.