ಹುಬ್ಬಳ್ಳಿ: ಆಸ್ತಿ ವಿಚಾರಕ್ಕೆ ಯುವಕನಿಗೆ ಚಾಕು ಹಾಕಿರುವ ಘಟನೆಯೊಂದು, ಹಳೇ ಹುಬ್ಬಳ್ಳಿ ಕೃಷ್ಣಾಪೂರದಲ್ಲಿ ತಡರಾತ್ರಿ ಘಟನೆ ನಡೆದಿದೆ. ನಿತಿನ್ ಅರುಣ ಚಂದಡಕರ್ ಚಾಕು ಇರಿಕ್ಕೊಳಗಾದ ಯುವಕ. ಗಣೇಶ್ ವಿನೋದ ಚಂದಡಕರ್ ಎಂಬತ ಚಾಕು ಇರಿದವ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಚಾಕು ಹಾಕಿರುವುದಾಗಿ ನಿತಿನ್ ಕುಟುಂಬಸ್ಥರ ಆರೋಪ ಮಾಡುತ್ತಿದ್ದಾರೆ. ಚಾಕು ಇರಿದ ಪರಿಣಾಮ ಯುವಕನಿಗೆ ಗಂಭೀರ ಗಾಯವಾಗಿದೆ. ಕುಟುಂಬಸ್ಥರು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಕುರಿತಿ ಹಳೇ ಹುಬ್ಬಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



















