ಇಂಡಿಯಲ್ಲಿ ಜ.31ಕ್ಕೆ ಎಎಪಿ ಕಾರ್ಯಕರ್ತರಿಂದ ಬೈಕ್ರ‍್ಯಾಲಿ..!
ಇಂಡಿ: ಪಟ್ಟಣದಲ್ಲಿ ಜನವರಿ ೩೧ ರಂದು ಎಎಪಿ ಪಕ್ಷದ ಕಾರ್ಯಕರ್ತರಿಂದ ಸುಮಾರು ೫೦೦ ಬೈಕಗಳ ಮೂಲಕ ಬೈಕ್ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಎಎಪಿ ಸೇವಾಕಾಂಕ್ಷಿ ಡಾ: ಗೋಪಾಲ ಆರ್.ಪಾಟೀಲ ಹೇಳಿದರು.
ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕರ್ತರು ಮೊದಲು ಪ್ರವಾಸಿ ಮಂದಿರಕ್ಕೆ ಬರಬೇಕು. ಅಲ್ಲಿ ಎಎಪಿ ರಾಜ್ಯ ಉಪಾಧ್ಯಕ್ಷ ಸಾಸಿ ಬೆನಕನಳ್ಳಿ ಬೈಕ್ರ‍್ಯಾಲಿಗೆ ಚಾಲನೆ ನೀಡಲಿದ್ದು, ಎಎಪಿ ಜಿಲ್ಲಾಧ್ಯಕ್ಷ ಭೋಗೇಶ ಸೋಲಾಪೂರ ಸೇರಿದಂತೆ ಹಲವು ಮುಖಂಡರು ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಬೈಕ್ ರ‍್ಯಾಲಿ ಪ್ರವಾಸಿ ಮಂದಿರದಿಂದ ಪ್ರಾರಂಭಗೊಂಡು ವಿಜಯಪೂರ ರಸ್ತೆಯ ಸೇವಾಲಾಲ್ ವೃತ್ತ, ಸೊಲ್ಲಾಪುರ ರಸ್ತೆಯ ಶಿವಾಜಿ ವೃತ್ತ, ಅಲ್ಲಿಂದ ಮರಳಿ ಬಸವೇಶ್ವರ ವೃತ್ತ, ಅಗರಖೇಡ ರಸ್ತೆಯ ಶ್ರೀನಿವಾಸ ಚಿತ್ರ ಮಂದಿರ ತದನಂತರ ಸಿಂದಗಿ ರಸ್ತೆಯ ಶಾಂತೇಶ್ವರ ಮಂಗಲ ಕಾರ್ಯಾಲಯದವರೆಗೆ ಹೋಗಿ ಕೊನೆಗೆ ಪ್ರವಾಸಿ ಮಂದಿರಕ್ಕೆ ತಲುಪಿ ಅಲ್ಲಿ ಸಭೆಯಾಗಿ ಮಾಪಡಲಿದೆ ಎಂದರು. ಎಎಪಿ ಪಕ್ಷಕ್ಕೆ ಸೇರಬಯಸುವ ಅಪೇಕ್ಷಿತರು ೭೦೬೫೦೪೫೨೫೨ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದು ಪಾಟೀಲ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮುಖಂಡ ರಾಜಕುಮಾರ ಹೊನ್ನಕಟ್ಟಿ, ಅಶೋಕ ಕರ್ಜಗಿ ಉಪಸ್ಥಿತರಿದ್ದರು.