ಸಿರುಗುಪ್ಪ: 2023 ನೇ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿ ದರಪ್ಪ ನಾಯಕ ತಾಲೂಕಿನ ಹೆರಕಲ್ ಗ್ರಾಮದಲ್ಲಿ ಮನೆ ಮನೆ ಪ್ರಚಾರ ಕೈಗೊಂಡಿದ್ದಾರೆ.
ಈ ವೇಳೆ ಮಾತನಾಡಿದ ನಾಯಕ ಬಹಳಷ್ಟು ಜನರಿಗೆ ಸರಿಯಾದ ಮನೆಯ ವ್ಯವಸ್ಥೆ ಇಲ್ಲ. ಅದೆಷ್ಟೋ ಜನರಿಗೆ ವಯಸ್ಕರ ಸಂಬಳ ಇಲ್ಲ. ಮತದಾನ ನಿಮ್ಮ ಹಕ್ಕು ಅದನ್ನು ಮಾರಿಕೊಳ್ಳುವುದು ಘೋರ ಅಪರಾಧ. ನೀವು ಮಾಡುವ ಒಂದು ತಪ್ಪಿನಿಂದ ಐದು ವರ್ಷದ ವರೆಗೆ ಅಪಾಯದಲ್ಲಿ ಸಿಲುಕುತ್ತೀರಿ. ನಿಮ್ಮ ಉಜ್ವಲವಾದ ಜೀವನಕ್ಕಾಗಿ ಮತ್ತು ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ನಮ್ಮ ಪಕ್ಷಕ್ಕೆ ಒಮ್ಮೆ ಅಧಿಕಾರ ಕೊಡಿ ಎಂದು ಸ್ಥಳೀಯರಲ್ಲಿ ಮನವಿ ಮಾಡಿಕೊಂಡರು.
ಮುಂದುವರೆದು ಮಾತನಾಡಿದ ಅವರು ನಿಮ್ಮ ಮನೆ ಮಗ ದರಪ್ಪ ನಾಯಕನಿಗೆ ಒಂದೇ ಒಂದು ಸಾರಿ ಅಧಿಕಾರ ಕೊಡಿ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಬಗೆಹರಿಸುವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಮ್ ಆದ್ಮಿ ಪಾರ್ಟಿಯ ಮುಖಂಡ ಸತ್ಯನಾರಾಯಣ, ವಿನೋದ್ ಗೌಡ, ವೀರೇಶ್, ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.