ಯುವಕನೋರ್ವ ಮನೆಯಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ..!
ಇಂಡಿ: ತಾಲೂಕಿನ ಶಿರಶ್ಯಾಡ ಗ್ರಾಮದಲ್ಲಿ ಯುವಕನೋರ್ವ ಮನೆಯಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಆತನ ತಾಯಿ ಸಾವಿನಲ್ಲಿ ಸಂಶಯ ವ್ಯಕ್ತಪಡಿಸಿದ್ದಾರೆ.
ಮೃತನನ್ನು ನಾಗೇಶ ತಂದೆ ಸಿದ್ದಪ್ಪ ಭಜಂತ್ರಿ ವಯಾ-೨೪ ಎಂದು ಗುರುತಿಸಿದೆ.
ಸಾರಾಂಶ:
ನಾಗೇಶ ತಂದೆ ಸಿದ್ದಪ್ಪ ಭಜಂತ್ರಿ ವಯಾ-೨೪ ವರ್ಷ, ಉದ್ಯೋಗ-ಕೂಲಿ ಜಾತಿ-ಹಿಂದೂ ಕೊರವ ಸಾ||ಶಿರಶ್ಯಾಡ ಇತನು ಕಳೆದ ೬ ತಿಂಗಳ ಹಿಂದೆ ತನ್ನ ಹೆಂಡತಿ ಗಜರಾಬಾಯಿ ಬಿಟ್ಟು ಹೋಗಿದ್ದರಿಂದ ಒಂದು ನಮೂನೆ ಮಾನಸಿಕ ಮಾಡಿಕೊಂಡಿದ್ದು, ದಿನಾಂಕ-೨೦-೧೧-೨೦೨೪ ರಂದು ಮುಂಜಾನೆ ೦೯:೦೦ ಗಂಟೆಯಿAದ ದಿನಾಂಕ-೨೨-೧೧-೨೦೨೪ ರಂದು ಮಧ್ಯಾಹ್ನ ೦೨:೪೫ ಗಂಟೆಯ ನಡುವಿನ ವೇಳೆಯಲ್ಲಿ ಶಿರಶ್ಯಾಡ ಗ್ರಾಮದ ತನ್ನ ಮನೆಯಲ್ಲಿರುವ ಬೆಡ್ ರೂಮಿನಲ್ಲಿ ಸೀರೆಯಿಂದ ಉರುಲು ಹಾಕಿಕೊಂಡ ಸ್ಥಿತಿಯಲ್ಲಿ ಮೈತನ ಶವವು ಸಿಕ್ಕಿದ್ದು ಸದರಿಯವನ ಮರಣದಲ್ಲಿ ಸಂಶಯ ಇರುತ್ತದೆ ಅಂತಾ ಮೃತನ ತಾಯಿ ನೀಲಮ್ಮ ಭಜಂತ್ರಿ ಇಂಡಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಘಟನಾ ಸ್ಥಳಕ್ಕೆ ಇಂಡಿ ಗ್ರಾಮಾಂತರ ಠಾಣಾ ಪಿಎಸ್‌ಐ ಸೋಮೇಶ ಗೆಜ್ಜಿ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.