ಖಾಸಗಿ ಲಾಡ್ಜ್ ರೂಮಿನಲ್ಲಿ ಮಹಿಳೆಯ ಶವ ಪತ್ತೆ..!
ಇಂಡಿ : ಲಾಡ್ಜ್‌ನಲ್ಲಿ ಮಹಿಳೆ ಶವ ಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿರುವ ಖಾಸಗಿ ಲಾಡ್ಜ‌್‌ನಲ್ಲಿ ಸಿಕ್ಕಿದೆ. ನಾಗಮ್ಮ ಮಹಾದೇವಿ ಕರ್ಜಗಿ ಶವವಾಗಿ ಪತ್ತೆಯಾಗಿದ್ದಾಳೆ. ಖಾಸಗಿ ಲಾಡ್ಜ್ ರೂಮಿನಲ್ಲಿ ಮಹಿಳೆಯ ಶವ ಕಂಡು ಸಿಬ್ಬಂದಿಗಳು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ, ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಪೊಲೀಸ ತನಿಖೆ ಬಳಿಕ ತಿಳಿದುಬರಬೇಕಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಂಡಿ ಶಹರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.