ದೇಶವೆಲ್ಲಾ ರಾಮಮಯ – ಮುತಾಲಿಕ್
Voice Of Janata : Editor : ದೇಶವೆಲ್ಲ ರಾಮಮಯವಾಗುತ್ತಿದ್ದು ಇದನ್ನು ಕಾಂಗ್ರೆಸ್ ಪಕ್ಷಕ್ಕೆ ಸಹಿಸಿಕೊಳ್ಳಲಾಗುತ್ತಿಲ್ಲ. ಹೀಗಾಗಿ ರಾಮಭಕ್ತರಲ್ಲಿ ಉದ್ದೇಶದಿಂದ ಭಯ ಮೂಡಿಸುವ ಕರಸೇವಕರನ್ನು ಬಂಧಿಸಲಾಗುತ್ತಿದೆ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಗುರುವಾರ ಪೂಜಾರಿ ಅವರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಮಭಕ್ತರ ಬಂಧನಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಗೃಹಸಚಿವ ಜಿ. ಪರಮೇಶ್ವರ್ ನಿರ್ದೇಶನ ನೀಡಿದ್ದಾರೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಇನ್ನೂ ಇದೇ ರೀತಿಯ ಬೆಳವಣಿಗೆ ಮುಂದುವರೆಯಲಿದೆ ಆದರೆ ಶ್ರೀಕಾಂತ ನಾವು ಇದಕ್ಕೆಲ್ಲಾ ಜಗ್ಗುವುದಿಲ್ಲ ಎಂದು ಹೇಳಿದ ಪ್ರಮೋದ್ ಮುತಾಲಿಕ್, ಬಿ.ಕೆ. ಹರಿಪ್ರಸಾದ್ ಹೇಳಿಕೆಯೂ ಕೂಡ ರಾಮಮಂದಿರಕ್ಕೆ ತೆರಳುವವರಲ್ಲಿ ಭಯ ಮೂಡಿಸುವುದೇ ಆಗಿದೆ ಎಂದರು.
ಗೋದ್ರಾ ಘಟನೆಯಲ್ಲಿ ಪಾಲ್ಗೊಂಡವರೇ ಈಗಲೂ ಸಹ ಗಲಭೆ ಎಬ್ಬಿಸಲು ಪ್ರಯತ್ನಿಸುತ್ತಿದ್ದು ಮೊದಲು ಹರಿಪ್ರಸಾದ್ ಮೇಲೆ ಕ್ರಮ ಜರುಗಿಸಬೇಕು ಎಂದು ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.