ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ಇರುತ್ತದೆ: ಸಂಗಮೇಶ ನವಲಿ
ಮೊಟ್ಟೆ ಶೇಂಗಾ ಚುಕ್ಕಿ ಬಾಳೆಹಣ್ಣುಗಳನ್ನು
ವಿತರಣೆ
ಮುದ್ದೇಬಿಹಾಳ: ತಾಲ್ಲೂಕಿನ ಗುಡಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸರಕಾರದಿಂದ ಕೊಡಲಾಗುತ್ತಿದ್ದ ಎರಡು ದಿನ ಹಾಗೂ ಅಜೀಮ್ ಪ್ರೇಮ್ ಜಿ ಫೌಂಡೇಶನ್ ರವರ ಸಹಯೋಗದಲ್ಲಿ ಬುಧವಾರ ನಾಲ್ಕು ದಿನಗಳ ಒಟ್ಟು 6 ದಿನಗಳ ಮೊಟ್ಟೆ ಶೇಂಗಾ ಚುಕ್ಕಿ ಬಾಳೆಹಣ್ಣುಗಳನ್ನು
ವಿತರಣೆ ಕಾರ್ಯಕ್ರಮ ನಡೆಯಿತು.
ಗುಡಿಹಾಳ ಗ್ರಾಮದ ಗುರುಹಿರಿಯರಾದ ವೇದಮೂರ್ತಿ ಶ್ರೀ ಶರಣಯ್ಯ ಮಠ, ಶರಣಗೌಡ ಬಿರಾದಾರ, ಮೌಲಾಸಾಬ್ ಶೇಖ ಜಂಟಿಯಾಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪ್ರಭಾರಿ ಮುಖ್ಯ ಗುರುಗಳಾದ ಶ ಸಂಗಮೇಶ ಶಾಂತಪ್ಪ ನವಲಿ, ಶಿಕ್ಷಕಿಯರಾದ ಕುಮಾರಿ ಲಕ್ಷ್ಮೀ ದೇವೇಂದ್ರಪ್ಪ ಮನಿಕಟ್ಟಿ, ಅತಿಥಿ ಶಿಕ್ಷಕಿಯರಾದ ಕಾಶಿಬಾಯಿ ಹಾದಿಮನಿ, ಎಲ್ಲಮ್ಮ ಉತಾಳೆ, ಅಕ್ಷರ ದಾಸೋಹದ ಸಿಬ್ಬಂದಿರವರಾದ ರುದ್ರಮ್ಮ ಜಲಪೂರ,ಹಣಮವ್ವ ಹಡಲಗೇರಿ,ಸೇರಿದಂತೆ ಉಪಸ್ಥಿತರಿದ್ದರು.