ಹುನಗುಂದ: ಕಾಲುವೆಗೆ ನೀರು ಹರಿಸದೆ ಜಿಂದಾಲಗೆ ನೀರು ಹರಿಸುವದನ್ನು ಖಂಡಿಸಿ ನೂರಾರು ರೈತರು ಪ್ರತಿಭಟನೆ ಮಾಡುವ ಮೂಲಕ ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಕಿದ್ದಾರೆ.
ಹೌದು. ಈ ವರ್ಷ ಬರಗಾಲ ಆವರಿಸಿ ಅನ್ನದಾತರು ಕಂಗಾಲಾಗಿದ್ದಾರೆ. ಇನ್ನು ಕಾಲುವೆಯ ಅಕ್ಕ ಪಕ್ಕದಲ್ಲಿರುವ ರೈತರು ಜೋಳ, ಕಡಲೆ, ಮೆಣಸಿನಕಾಯಿ, ಗೋಧಿ ಬೆಳೆಗಳನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಹೌದು ಇದು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಮಾರೋಳ ಏತ ನೀರಾವರಿ ಭಾಗದ ರೈತರು ಗೋಳು.
ಇನ್ನು ರೈತರು ಬಿತ್ತನೆ ಮಾಡಿದ ಬೆಳೆಗಳನ್ನು ಉಳಿಸಿಕೊಳ್ಳಲು ವಾರಬಂದಿ ಮೂಲಕ ಫೆ- 20 ನೇ ತಾರೀಖಿನ ವರೆಗೂ ಕಾಲುವೆಗೆ ನೀರು ಹರಿಸುವಂತೆ ನೂರಾರು ರೈತರು ತಹಸೀಲ್ದಾರ ನಿಂಗಪ್ಪ ಬಿರಾದಾರಗೆ ಮನವಿ ಸಲ್ಲಿಸಿದ್ದಾರೆ.
ಈಗಾಗಲೇ ಮರೋಳ ಗ್ರಾಮದ ಮೇಘಾ ಜಾಕ್ವೆಲ್ ಮುಂದೆ ನೂರಾರು ರೈತರು ರಾತ್ರಿ ಅಡುಗೆ ಮಾಡುವ ಮೂಲಕ ಪ್ರತಿಭಟನೆ ಮುಂದುವರಿಸಿದ್ದಾರೆ.
ಒಂದು ವೇಳೆ ಕೆಬಿಜೆನೆಲ್ ಅಧಿಕಾರಿಗಳು ವಾರಬಂದಿ ಮೂಲಕ ಎರಡು ದಿನಗಳಲ್ಲಿ ನೀರು ಹರಿಸದಿದ್ದರೆ ಸಾವಿರಾರು ರೈತರು ಜಿಂದಾಲ್ಗೆ ಮುತ್ತಿಗೆ ಹಾಕಿ ಸರ್ಕಾರದ ವಿರುದ್ಧ ಪ್ರತಿಭಟನೆ ನೆಡೆಸಲಾಗುವದು ಎಂದು ಎಚ್ಚರಿಕೆ ನೀಡಿದ್ದಾರೆ.