ರೈತರ ಜಮೀನುಗಳಿಗೆ ತೆರಳುವ ಸರ್ಕಾರಿ ದಾರಿ ಮುಚ್ಚಿರುವುದನ್ನು ತೆರವುಗೊಳಿಸುವಂತೆ ತಹಸೀಲ್ದಾರ್ ರವರಿಗೆ ಮನವಿ
ಹನೂರು: ರೈತರ ಜಮೀನುಗಳಿಗೆ ತೆರಳುವ ಸರ್ಕಾರಿ ದಾರಿಯನ್ನು ತೆರವುಗೊಳಿಸಿ ಅನುಕೂಲ ಕಲ್ಪಿಸುವಂತೆ ಛಲವಾದಿ ಮಹಾಸಭಾ ಅಧ್ಯಕ್ಷ ಬಸವರಾಜ್ ದಂಡಾಧಿಕಾರಿ ಗುರುಪ್ರಸಾದ್ ಅವರನ್ನು ಒತ್ತಾಯಿಸಿದ್ದಾರೆ.
ಹನೂರು ಪಟ್ಟಣದ ತಾಲೂಕು ದಂಡಾಧಿಕಾರಿ ಗುರುಪ್ರಸಾದ್ ಅವರಿಗೆ ಹುಲ್ಲೆ ಪುರ ಸರ್ವೇ ನಂಬರ್ ಗಳಲ್ಲಿ ಖಾಸಗಿ ವ್ಯಕ್ತಿಗಳು ಸರ್ಕಾರಿ ದಾರಿಯನ್ನೇ ಮುಚ್ಚಿ ರೈತರ ಜಮೀನುಗಳಿಗೆ ತೆರಳಲು ಹಾಗೂ ಮಳೆ ಬೀಳುತ್ತಿರುವುದರಿಂದ ಕೃಷಿ ಚಟುವಟಿಕೆ ತೊಡಗಿಕೊಳ್ಳಲು ತೊಂದರೆಯಾಗಿರುವ ಬಗ್ಗೆ ಆರ್ ಎಸ್ ದೊಡ್ಡಿ ರೈತ ಶಿವರುದ್ರಪ್ಪ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಸರ್ಕಾರಿ ದಾರಿಯನ್ನು ಮುಚ್ಚಿರುವ ಬಗ್ಗೆ ದಂಡಾಧಿಕಾರಿಗಳಿಗೆ ಮನವಿ : ಹುಲ್ಲೇಪುರ ಗ್ರಾಮದ ಸರ್ವೆ ನಂಬರ್ 465 ಜಮಿನಿಗೆ ತೆರಳುವ ಸರ್ಕಾರಿ ರಸ್ತೆಯನ್ನೇ ಖಾಸಗಿ ವ್ಯಕ್ತಿಗಳು ತಮ್ಮ ಪ್ರಭಾವವನ್ನು ಬಳಸಿ ಸರ್ವೆ ನಂಬರ್ 466 467 688/1 ಬಿ , 689 /1 ಎ , ಸರ್ವೇ ನಂಬರ್ 98 , 95/1, 95/2, 96, ರಲ್ಲಿ ಗ್ರಾಮ ನಕಾಶೆ ಯಂತೆ ಸರ್ಕಾರಿ ಪರುಸೇ (ಹಾದಿ.) ದಾರಿಯನ್ನು ವ್ಯಕ್ತಿಗಳು ಮುಚ್ಚಿ ಇರುವುದರಿಂದ ತಲತಲಾಂತರದಿಂದ ಓಡಾಡುತ್ತಿದ್ದ ಸರ್ಕಾರಿ ದಾರಿಯೇ ಇಲ್ಲದೆ ಜಮೀನು ಉಳುಮೆ ಮಾಡಲು ಆಗದೆ ಮಳೆ ಬೀಳುತ್ತಿರುವುದರಿಂದ ಕೃಷಿ ಚಟುವಟಿಕೆ ತೊಡಗಿಕೊಳ್ಳಲು ತೊಡಕಾಗಿದೆ ಉಳಿಮೆ ಮಾಡಲು ಟ್ಯಾಕ್ಟರ್ ಹಾಗೂ ಎತ್ತಿನ ಬಡ್ಡಿ ಓಡಾಡಲು ಸ್ಥಳವಕಾಶವಿಲ್ಲದೆ ಮುಚ್ಚಿರುವ ಸರ್ಕಾರಿ ದಾರಿಯನ್ನು ತಾಲೂಕು ದಂಡಾಧಿಕಾರಿಗಳು ಸಾರ್ವಜನಿಕರಿಗೆ ಬಿಡಿಸುವ ಮೂಲಕ ಅನುಕೂಲ ಕಲ್ಪಿಸುವಂತೆ ಮನವಿಯಲ್ಲಿ ತಿಳಿಸಿದ್ದಾರೆ.
ಭರವಸೆ : ಸರ್ಕಾರದ ಆದೇಶದಂತೆ ಸರ್ಕಾರಿ ದಾರಿಯನ್ನು ಯಾರು ಸಹ ಮುಚ್ಚುವಂತಿಲ್ಲ ಹೀಗಾಗಿ ನೀವು ನೀಡಿರುವ ಅರ್ಜಿಯನ್ನು ಪರಿಶೀಲಿಸಿ ಭೂಮಾಪನ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಇದನ್ನು ದೃಢೀಕರಿಸಿ ಸರ್ಕಾರಿ ದಾರಿ ಗ್ರಾಮ ನಕಾಶೆಯಲ್ಲಿ ಇದ್ದರೆ ಯಾವುದೇ ಕಾರಣಕ್ಕೂ ಅಂತಹವರು ದಾರಿಯನ್ನು ಮುಚ್ಚುವಂತಿಲ್ಲ ಹೀಗಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕ್ರಮವಹಿಸಲಾಗುತ್ತದೆ ಎಂದು ತಿಳಿಸಿದರು.
ಇದೇ ವೇಳೆಯಲ್ಲಿ ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಬಸವರಾಜ್ ಬಿಜೆಪಿ ಮುಖಂಡ ಹಾಗೂ ಚಂಗವಾಡಿ ರಾಜು ಮತ್ತು ರೈತ ಮುಖಂಡ ಶಿವರುದ್ರಪ್ಪ ಹಾಗೂ ಇನ್ನಿತರ ರೈತರು ಹಾಜರಿದ್ದರು.
ವರದಿ:ಚೇತನ್ ಕುಮಾರ್ ಎಲ್, ಚಾಮರಾಜನಗರ ಜಿಲ್ಲೆ