ವಿಜಯಪುರ: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಸಾಧನೆಗಳಿಗೆ ಸಾಕಷ್ಟು ಅವಕಾಶಗಳಿದ್ದು ಮಹಿಳೆಯರು ಇದರಲ್ಲಿ ತೊಡಗಿಸಿಕೊಳ್ಳಬೇಕು ಎಂದು ಬೆಂಗಳೂರಿನ ಇಸ್ರೊದ ಯು. ಆರ್. ರಾವ್ ಸ್ಯಾಟಲೈಟ್ ಕೇಂದ್ರದ ವಿಜ್ಞಾನಿ ವಿಜಯಶ್ರೀ ಎಂ.ಕೆ ಹೇಳಿದ್ದಾರೆ.
ಶನಿವಾರ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಅಪ್ಲೈಡ್ ಸಾಯಿನ್ಸ್ ಮತ್ತು ಟೆಕ್ನಾಲಜಿ ಶಾಲೆ, ಅಲೈಡ್ ಹೆಲ್ತ್ ಸಾಯಿನ್ಸ್ ಶಾಲೆ,ಸಂಶೋಧನ ಮತ್ತು ಅಭಿವೃದ್ಧಿ ಘಟಕದ ಸಹಯೋಗದಲ್ಲಿ ಆಯೋಜಿಸಲಾದ ವಿಕಸಿತ ಭಾರತದ ವಿಜ್ಞಾನದಲ್ಲಿ ಮಹಿಳೆಯರ ಪಾತ್ರ ಕುರಿತು ಒಂದು ದಿನದ ವಿಶೇಷ ಕಾರ್ಯಕ್ರಮದಲ್ಲಿ ಅವರು ಆನಲೈನ್ ಮೂಲಕ ಪಾಲ್ಗೋಂಡು ಮಾತನಾಡಿದರು.
ಬೆಳಗಾವಿಯ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯಯದ ಬೆಳಗಾವಿಯ ವೈಜ್ಞಾನಿಕ ಅಧಿಕಾರಿ ಡಾ. ಜಿ. ಸಿ. ಕಡಕೋಳ ಮಾತನಾಡಿ, ನ್ಯಾಯ ವಿಜ್ಞಾನ ಕ್ಷೇತ್ರದಲ್ಲಿ ಅಪರಾಧ ತನಿಖೆಯ ಸಂದರ್ಭದಲ್ಲಿ ಎದುರಾಗುವ ಸವಾಲುಗಳು ಹಾಗೂ ವೈಜ್ಞಾನಿಕ ಮನೋಭಾವದ ಮಹತ್ವವನ್ನು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಭಾರತೀಯ ಮಹಿಳಾ ವಿಜ್ಞಾನಿಗಳ ಸಾಧನೆಗಳನ್ನು ಒಳಗೊಂಡ ವಿಡಿಯೋ ಪ್ರದರ್ಶನ ನಡೆಯಿತು. ನಂತರ ಸಂಶೋಧನ, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ಇ-ಪೋಸ್ಟರ್‌ಗಳ ಪ್ರದರ್ಶಿಸಲಾಯಿತು. ಇ-ಪೋಸ್ಟರ್ ಹಾಗೂ ಕ್ವಿಜ್ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಅಲೈಡ್ ಹೆಲ್ತ್ ಸಾಯಿನ್ನ್ ಮತ್ತು ಅಪ್ಲೈಡ್ ಹೆಲ್ತ್ ಸಾಯಿನ್ಸ್ ಮತ್ತು ಟೆಕ್ನಾಲಜಿ ಶಾಲೆಯ ಡೀನ್ ಡಾ. ಎಸ್. ವಿ. ಪಾಟೀಲ, ಸಂಶೋಧನ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಡಾ. ಎಂ. ಎಂ. ಪಾಟೀಲ, ಸ್ನಾತಕೋತ್ತರ ವಿಭಾಗದ ಸಂಯೋಜಕಿ ಡಾ. ಸ್ಮಿತಾ ಬಗಲಿ, ಪದವಿ ವಿಭಾಗದ ಸಂಯೋಜಕಿ ಡಾ. ಜ್ಯೋತಿ ಪಾಟೀಲ, ಸಂಯೋಜಕ ಡಾ. ಜಿ.ಎಸ್. ಕಡಕೋಳ, ಸಂಶೋಧನ ವಿದ್ಯಾರ್ಥಿಗಳು, ಸ್ನಾತಕೋತ್ತರ ಹಾಗೂ ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಡಿಯಾಕ್ ಕೇರ್ ಟೆಕ್ನಾಲಜಿಯ ಉಪನ್ಯಾಸಕಿ ಕವಿತಾ ಸ್ವಾಗತಿಸಿದರು. ಈ ಕಾರ್ಯಕ್ರಮವನ್ನು ಸಿಎಎಂಆರ್ ಸಂಸ್ಥೆಯ ಸಂಸ್ಥೆಯ ಸಂಶೋಧನ ಸಹಾಯಕಿ ತೃಪ್ತಿ ಕಬಾಡಿ ನಿರೂಪಿಸಿದರು. ಫೊರೆನ್ಸಿಕ್ ಸೈನ್ಸ್ ವಿಭಾಗದ ಉಪನ್ಯಾಸಕಿ ಗುಣಶ್ರೀ ವಂದಿಸಿದರು.
BLDE DU World Science Day ವಿಜಯಪುರ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಅಪ್ಲೈಡ್ ಸಾಯಿನ್ಸ್ ಮತ್ತು ಟೆಕ್ನಾಲಜಿ ಶಾಲೆ, ಅಲೈಡ್ ಹೆಲ್ತ್ ಸಾಯಿನ್ಸ್ ಶಾಲೆ,ಸಂಶೋಧನ ಮತ್ತು ಅಭಿವೃದ್ಧಿ ಘಟಕದ ಸಹಯೋಗದಲ್ಲಿ ವಿಕಸಿತ ಭಾರತದ ವಿಜ್ಞಾನದಲ್ಲಿ ಮಹಿಳೆಯರ ಪಾತ್ರ ಕುರಿತು ಒಂದು ದಿನದ ವಿಶೇಷ ಕಾರ್ಯಕ್ರಮದ ಉದ್ಘಾಟನೆ ನಡೆಯಿತು. ಈ ಸಂದರ್ಭದಲ್ಲಿ ಬೆಳಗಾವಿಯ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯಯದ ಬೆಳಗಾವಿಯ ವೈಜ್ಞಾನಿಕ ಅಧಿಕಾರಿ ಡಾ. ಜಿ. ಸಿ. ಕಡಕೋಳ, ಅಲೈಡ್ ಹೆಲ್ತ್ ಸಾಯಿನ್ಸ್ ಮತ್ತು ಅಪ್ಲೈಡ್ ಹೆಲ್ತ್ ಸಾಯಿನ್ಸ್ ಮತ್ತು ಟೆಕ್ನಾಲಜಿ ಶಾಲೆಯ ಡೀನ್ ಡಾ. ಎಸ್. ವಿ. ಪಾಟೀಲ, ಡಾ. ಎಂ. ಎಂ. ಪಾಟೀಲ, ಡಾ. ಸ್ಮಿತಾ ಬಗಲಿ ಮುಂತಾದವರು ಉಪಸ್ಥಿತರಿದ್ದರು.



















