ನಿಧಾನಗತಿ ಕಲಿಕಾ ಮಕ್ಕಳಿಗೆ ಒತ್ತು ನೀಡಿ
ಇಂಡಿ: ವಿದ್ಯಾರ್ಥಿಗಳು ಕಲಿಕೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಲು ಇಲಾಖೆ ನಿಗದಿಪಡಿಸಿದ ೨೯ ಅಂಶಗಳನ್ನು ಆಧಾರವನ್ನಾಗಿಟ್ಟುಕೊಂಡು ನಿಧನಗತಿ ಕಲಿಕಾ ಮಕ್ಕಳ ಜ್ಞಾನ ವೃದ್ದಿಗೆ ವಿಶೇಷ ಆಸಕ್ತಿ ನೀಡಿ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವಿರಯ್ಯ ಸಾಲಿಮಠ ಹೇಳಿದರು.
ನಗರದ ಗುರುಭವನದಲ್ಲಿ ನಡೆದ ಎಸ್ಸೆಸ್ಸೆಲ್ಸಿಪರೀಕ್ಷಾ ಫಲಿತಾಂಶ ವೃದ್ದಿಗಾಗಿ ಹಮ್ಮಿಕೊಂಡ ತಾಲೂಕಿನ ಮುಖ್ಯೋಪಾಧ್ಯಾಯರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಇಂಡಿ ತಾಲೂಕಿನ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕ ಸಂಪನ್ಮೂಲ ತಂಡದವರು ರಚಿಸಿದ ಸಾಹಿತ್ಯ ಸಂಪದ ಕಿರುಹೊತ್ತಿಗೆ ಬಿಡುಗಡೆಗಿಳಿಸಿ ಮಾತನಾಡಿದರು.
ಕ್ಷೇತ್ರಶಿಕ್ಷಣಾಧಿಕಾರಿ ಸಯೀದಾ ಮುಜಾವರ ಮಾತನಾಡಿ
ಇಂಡಿ ತಾಲೂಕಿಗೆ ೧೦ ನೇ ವರ್ಗದ ಈ ಬಾರಿಯ ಫಲಿತಾಂಶ ನೂರಕ್ಕೆ ನೂರರಷ್ಟು ಸಾಧಿಸುವಲ್ಲಿ ವಿಶೇಷ ಕ್ರಿಯಾ ಯೋಜನೆಯನ್ನು ಜಾರಿಗೊಳಿಸಿದ್ದೇವೆ ಎಂದರು.
ಕ್ಷೇತ್ರ ಸಮನ್ವಯಧಿಕಾರಿ ಎಸ್.ಆರ್.ನಡಗಡ್ಡಿ, ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಎ.ಓ ಹೂಗಾರಮತ್ತು ತಾಲೂಕಿನ ಎಲ್ಲ ಶಾಲೆಯ ಪ್ರೌಢಶಾಲೆ ಮುಖ್ಯಗುರುಗಳು ಉಪಸ್ಥಿತರಿದ್ದರು.
ಇಂಡಿ ನಗರದ ಗುರುಭವನದಲ್ಲಿ ನಡೆದ ಎಸ್ಸೆಸ್ಸೆಲ್ಸಿಪರೀಕ್ಷಾ ಫಲಿತಾಂಶ ವೃದ್ದಿಗಾಗಿ ಹಮ್ಮಿಕೊಂಡ ತಾಲೂಕಿನ ಮುಖ್ಯೋಪಾಧ್ಯಾಯರ ಸಭೆಯನ್ನು ಉದ್ದೇಶಿಸಿ ಸಾಲಿಮಠ ಮಾತನಾಡಿದರು.



















