ಕಲಿಕೆಯಲ್ಲಿ ಆಸಕ್ತಿ ಮೂಡಿಸಲು ಕಲಿಕಾ ಹಬ್ಬ ಅಗತ್ಯ-ಬಿ ಇ ಓ ಮುಜಾವರ
ಇಂಡಿ: ‘ಕಲಿಕಾ ಹಬ್ಬ’ವು ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ಮೂಡಿಸಿ, ಅವರ ಪ್ರತಿಭೆಯನ್ನು ಹೊರತಂದು, ಶಿಕ್ಷಣದ ಗುಣಮಟ್ಟ ಸುಧಾರಿಸುವ ವಿನೂತನ ಕಾರ್ಯಕ್ರಮವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೈಯಿದಾ ಅನ್ನಿಸ್ ಮುಜಾವರ ಹೇಳಿದರು.
ಮಂಗಳವಾರದಂದು ತಾಲೂಕಿನ ತೆನ್ನಿಹಳ್ಳಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಹಿರೇರೂಗಿ ಉರ್ದು ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಲಿಕಾ ಹಬ್ಬವು ವಿಶೇಷವಾಗಿ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರದಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರಿಗೆ ಚಟುವಟಿಕೆಗಳ ಮೂಲಕ ಮೋಜಿನ ಮತ್ತು ಆಸಕ್ತಿಪೂರ್ಣ ಕಲಿಕೆಗೆ ಸಹಕಾರಿಯಾಗಿದೆ ಎಂದು ಹೇಳಿದರು.
ಕ್ಷೇತ್ರ ಸಮನ್ವಯಾಧಿಕಾರಿ ಎಸ್ ಆರ್ ನಡುಗಡ್ಡಿ
ಮಾತನಾಡಿ, ಈ ಕಲಿಕಾ ಹಬ್ಬವು ಮಕ್ಕಳಲ್ಲಿ ಓದು, ಬರವಣಿಗೆ, ಗಣಿತ ಕೌಶಲಗಳನ್ನು ವೃದ್ಧಿಸಲು ಅನೇಕ ಚಟುವಟಿಕೆಗಳನ್ನು ಆಯೋಜಿಸಿ, ಮಕ್ಕಳ ಕಲಿಕೆಗೆ ಒತ್ತು ನೀಡುತ್ತದೆ ಎಂದು ಹೇಳಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ವೈ ಟಿ ಪಾಟೀಲ ಮಾತನಾಡಿ, ಈ ಕಲಿಕಾ ಹಬ್ಬದಿಂದ ಮಕ್ಕಳಲ್ಲಿ ವಿಮರ್ಶಾತ್ಮಕ ಚಿಂತನೆ, ಆತ್ಮವಿಶ್ವಾಸ ಮತ್ತು ಸಾಮಾಜಿಕ ಕೌಶಲ್ಯ ಬೆಳೆಯುತ್ತದೆ ಎಂದು ಹೇಳಿದರು.
ಎಸ್ ಡಿ ಎಂ ಸಿ ಅಧ್ಯಕ್ಷ ಚಾಂದಪಾಷಾ ಜಮಾದಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಬೋರಾಮಣಿ, ಶಿಕ್ಷಕರ ಸಂಘದ ಖಜಾಂಚಿ ಆನಂದ ಕೆಂಭಾವಿ, ಶಿಕ್ಷಕ ಸಂತೋಷ ಬಂಡೆ ಮಾತನಾಡಿದರು.
ಜಿಓಸಿಸಿ ಬ್ಯಾಂಕ್ ನಿರ್ದೇಶಕ ಅಲ್ಲಾಭಕ್ಷ ವಾಲಿಕಾರ, ಉರ್ದು ಪ್ರಾಥಮಿಕ ಶಾಲಾ ಶಿಕ್ಷಕರ ಸೊಸೈಟಿಯ ಅಧ್ಯಕ್ಷ ಬಸೀರ್ ಅಹಮದ್ ಇನಾಮದಾರ, ಸಿ ಆರ್ ಪಿ ಬಾದಶಾ ಚಪ್ಪರಬಂದ, ಪಿ ಎಂ ಪಟೇಲ್, ಆಯ್ ಎ ಸಿಕಲಗಾರ, ಭಾಷಾಸಾಬ ಕುಮಸಗಿ, ನಿರ್ದೇಶಕ ಪಿ ಎಸ್ ಚಾಂದಕವಠೇ, ಎ ಎಂ ಹೊಸೂರ, ಶಿಕ್ಷಕ ಶಹಾಹುಸೇನ್ ಮಕಾನದಾರ, ಗ್ರಾಮಸ್ತರಾದ ಜೈನುದ್ದೀನ್ ಜಹಾಗೀರದಾರ, ಅಶ್ರಫ್ ಪಟೇಲ್, ಅನ್ವರ ಗೌoಡಿ, ಖಾಲಿದ ಖುರೇಷಿ, ರಫೀಕ್ ಭಾಸಗಿ, ಮಹ್ಮದ್ ಹನೀಫ್ ಜಹಾಗೀರದಾರ ಸೇರಿದಂತೆ ಅನೇಕ ಶಿಕ್ಷಕರು, ಪಾಲಕರು ಪಾಲ್ಗೊಂಡಿದ್ದರು.
















