ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಆತ್ಮೀಯ ಬೀಳ್ಕೊಡುಗೆ
ವಿಜಯಪುರ : ಶ್ರೀ ಬಿ ಎಸ್ ಪಾಟೀಲ್ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಹೃದಯ ಸ್ಪರ್ಶಿ ಬೀಳ್ಕೊಡುಗೆ ಮನಗೂಳಿ ಪಟ್ಟಣದ ಶ್ರೀ ಬಿ.ಎಸ್. ಪಾಟೀಲ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ, 2025-26 ನೇ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಆತ್ಮೀಯ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಷ.ಬ್ರ. ಬೃಂಗೀಶ್ವರಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ಡಾ. ಸುಭಾಸಗೌಡ ಬಿ. ಪಾಟೀಲ ವಹಿಸಿದ್ದು, ಉದ್ಘಾಟಕರಾಗಿ ಜೆ.ಡಿ.ಎಸ್ ಪಕ್ಷದ ರಾಜ್ಯ ಹಿರಿಯ ಉಪಾಧ್ಯಕ್ಷರಾದ ಶ್ರೀ ಸೋಮನಗೌಡ ಬಿ. ಪಾಟೀಲ ಆಗಮಿಸಿದ್ದರು.
ತಮ್ಮ ಉದ್ಘಾಟನಾಭಾಷಣದಲ್ಲಿ ಸನ್ಮಾನ್ಯ ಶ್ರೀ ಸೋಮನಗೌಡ ಬಿ. ಪಾಟೀಲ ಅವರು ವಿದ್ಯಾರ್ಥಿಗಳಿಗೆ ಮುಂದಿನ ಜೀವನದ ಹಾದಿಯಲ್ಲಿ ಆತ್ಮವಿಶ್ವಾಸ, ಶಿಸ್ತು ಮತ್ತು ಪರಿಶ್ರಮ ಅತ್ಯಂತ ಮುಖ್ಯವೆಂದು ತಿಳಿಸಿದರು. ವಿದ್ಯಾಭ್ಯಾಸವೇ ವ್ಯಕ್ತಿತ್ವವನ್ನು ರೂಪಿಸುವ ಶಕ್ತಿ ಎಂದು ಹೇಳಿ, ವಿದ್ಯಾರ್ಥಿಗಳು ಸ್ಪಷ್ಟ ಗುರಿ ಹೊಂದಿ ನಿರಂತರ ಪ್ರಯತ್ನದಿಂದ ಯಶಸ್ಸು ಸಾಧಿಸಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಡಾ. ಸಿ.ಎಸ್. ಆನಂದ ಉಪಸ್ಥಿತರಿದ್ದರು. ಆಡಳಿತ ಮಂಡಳಿಯ ಸದಸ್ಯರಾದ ಪಾಂಡುರಂಗ ಕುಲಕರ್ಣಿ, ಸಾವಳಗೆಪ್ಪ ಬಿ. ಯಾದವಾಡ, ಶ್ರೀ ಬಿ.ಎಸ್. ಪಾಟೀಲ, ಶ್ರೀ ಸಿ.ಎಂ. ಬನ್ನಟ್ಟಿ ಹಾಗೂ ಶ್ರೀ ಎಸ್.ಬಿ. ಪಾಟೀಲ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಶುಭ ಹಾರೈಕೆಗಳನ್ನು ತಿಳಿಸಿದರು.
ಕಾರ್ಯಕ್ರಮವನ್ನು ಪ್ರಾಚಾರ್ಯರಾದ ಶ್ರೀ ಪಿ.ಟಿ. ರಾಠೋಡ ಸ್ವಾಗತ ಕೋರಿದರು. ಮುಖ್ಯೋಪಾಧ್ಯಾಯರಾದ ಶ್ರೀ ಆರ್.ಕೆ. ಹನಗಂಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಭಾವುಕ ವಾತಾವರಣದಲ್ಲಿ ನಡೆದ ಈ ಬೀಳ್ಕೊಡುಗೆ ಸಮಾರಂಭವು ವಿದ್ಯಾರ್ಥಿಗಳ ಮನದಲ್ಲಿ ಮರೆಯಲಾಗದ ನೆನಪುಗಳನ್ನು ಮೂಡಿಸಿತು. ಮುಂದಿನ ವಿದ್ಯಾಭ್ಯಾಸ ಹಾಗೂ ಜೀವನ ಪಯಣದಲ್ಲಿ ಎಲ್ಲರೂ ಯಶಸ್ಸು ಸಾಧಿಸಲಿ ಎಂದು ಆಶೀರ್ವಾದಿಸಲಾಯಿತು.
ಶ್ರೀ ಮಹೇಶ ಪಿರಗಾ ಅವರು ಪ್ರಕಟಣೆಗೆ ತಿಳಿಸಿದ್ದರು.


















