ಒಕ್ಕಣೆ ಕಣದಲ್ಲಿ ಹಾಕಲಾಗಿದ್ದ ರಾಗಿ ಫಸಲಿಗೆ ಬೆಂಕಿ
ವರದಿ: ಚೇತನ್ ಕುಮಾರ್ ಎಲ್
ಹನೂರು:ತಾಲೂಕಿನ ಶೆಟ್ಟಳ್ಳಿ ಗ್ರಾಮದಲ್ಲಿ ಒಕ್ಕಣೆ ಕಣದಲ್ಲಿ ಹಾಕಲಾಗಿದ್ದ ರಾಗಿ ಫಸಲಿಗೆ ಬೆಂಕಿ ಬಿದ್ದು ಸುಮಾರು 30ಕ್ವಿಂಟಾಲ್ ರಾಗಿ ಫಸಲು ಬೆಂಕಿಗೆ ಆಹುತಿಯಾಗಿರುವ ಘಟನೆ ಜರುಗಿದೆ
ಹನೂರು ತಾಲೂಕಿನ ಶೆಟ್ಟಳ್ಳಿ ಮಂಜುನಾಥ್ ಮತ್ತು ಗುರುಸಿದ್ದ ಎಂಬಾತತಗೆ ಸೇರಿದ್ದ ಸುಮಾರು 5ಏಕರೆಯಲ್ಲಿ ರಾಗಿ ಫಸಲನ್ನು ಬೆಳಯಲಾಗಿತ್ತು ಅಂತಯೆ ಕಳೆದ ಹಲವು ದಿನಗಳಿಂದ ಕಟಾವು ಮಾಡಿ ಒಕ್ಕಣೆ ಮಾಡಿ ಸಂಗ್ರಣೆ ಮಾಡಲಾಗಿತ್ತು ಆದರೆ ಬುಧವಾರ ಸಂಜೆ ದೀಡಿರ್ ಬೆಂಕಿ ತಗುಲಿ ಸಂಪೂರ್ಣ ನಾಶವಾಗಿದೆ
ಈ ವೇಳೆ ಇಲ್ಲಿಯ ರೈತರು ಮಾತನಾಡಿ ಸುಮಾರು ಐದು ಏಕರೆಯಲ್ಲಿ ಸುಮಾರು 30 ಕ್ವೀಂಟಾಲ್ ರಾಗಿಯನ್ನು ಸಾಲ ಮಾಡಿ ಕಷ್ಟ ಪಟ್ಟು ಬೆಳೆಯಲಾಗಿತ್ತು ಆದರೆ ಬುಧವಾರ ಸಂಜೆ ದಿಡೀರ್ ಬೆಂಕಿ ತಗುಲಿ ಭಸ್ಮವಾಗಿದ್ದು
ಯಾರೋ ಕಿಡಿ ಗೇಡಿಗಳು ಉದ್ದೇಶಪೂರ್ವಕವಾಗಿ ಬೆಂಕಿಯನ್ನು ಹಾಕಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರಿದ್ದಾರೆ.


















