ರೈತ ದೇಶದ ಬೆನ್ನೆಲುಬು ಆದರೆ ಎತ್ತುಗಳು ರೈತನ ಬೆನ್ನೆಲುಬು.
ಅಫಜಲಪುರ : ತಾಲೂಕಿನ ಕರಜಗಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಎತ್ತಿನ ಬಂಡಿ ಸ್ಪರ್ಧ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮಕ್ಕೆ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಮಹಾಂತೇಶ ಜಮಾದಾರ ಚಾಲನೆ ನೀಡಿ ಮಾತನಾಡಿದ ಅವರು ಈ ಎತ್ತಿನ ಬಂಡಿ ಸ್ಪರ್ಧೆ ಉದ್ದೇಶ ರೈತರು ಉತ್ಸಾಹದಿಂದರಲಿ ಹಾಗೂ ಇತ್ತೀಚಿನ ತಾಂತ್ರಿಕ ದಿನಗಳಲ್ಲಿ ಎತ್ತುಗಳು ಕಡೆಮೆಯಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ ಅವರು ಎತ್ತುಗಳ ಹಾಗೂ ದನ ಕರಗಳು ಮುಂದಿನ ಪೀಳಿಗೆಗೆ ಉಳಿಸಿ ಬೆಳಿಸಿಕೊಂಡು ಹೊಗಬೇಕಾಗಿದೆ ದೇಶದ ಬೆನ್ನೆಲು ರೈತ ರೈತ ಗೌರವಿಸಬೇಕಾದ ಕೆಲಸ ಪ್ರತಿಯೊಬ್ಬರು ಮಾಡಬೇಕು ಸರಕಾರ ರೈತರಿಗೆ ವಿವಿಧ ಯೋಜನೆಗಳನ್ನು ಜಾರಿಗೆ ತರುವದರ ಜೋತೆಗೆ ಧನ ಕರಗಳು ಖರದಿಸಿ ಅನುದಾನ ನೀಡಬೇಕು ಎಂದರು.
ಈ ಸ್ಪರ್ಧೆಯಲ್ಲಿ ತಾಲೂಕಿನ ಸುತ್ತಮುತ್ತಲಿನ ಗ್ರಾಮದ ಜೋಡಿ ಎತ್ತುಗಳು ಭಾಗವಹಿಸಿದ್ದವು ಜೊತೆಗೆ ಮಹಾರಾಷ್ಟ್ರ ರಾಜ್ಯದ ಅಕ್ಕಲಕೋಟ ತಾಲೂಕಿನ ನಾಗಣಸುರ ಸೇರಿದಂತೆ ಕೆಲವು ಗ್ರಾಮಗಳಿಂದ ಜೋಡೆತ್ತುಗಳು ಬಂದಿದ್ದವು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಜಾನುವಾರುಗಳ ಸ್ಪರ್ಧೆಯನ್ನ ಅದ್ದೂರಿಯಾಗಿ ಮಾಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕಾಧ್ಯಕ್ಷರಾದ ಮಂಜುನಾಥ ನಾಯ್ಕೊಡಿ, ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಗೂಳೆ, ಕರಜಗಿ ಗ್ರಾಮ ಘಟಕ ಅಧ್ಯಕ್ಷ ಅಬ್ದುಲ್ ಗುತ್ತೇದಾರ, ಮುಖಂಡರಾದ ಪೀರಪ್ಪ, ನಾಯ್ಕೊಡಿ , ನಾಗೇಶ ಹಡಲಗಿ,ಕಾಂತು ಉಪ್ಪಿನ ,ಈರಣ್ಣ ಹೊನ್ನುರ ಮೈಬುಬ್ ಮುಜಾವರ ಸುಧಾಕರ ಗಳವೆ,ಶಶಿಕಾಂತ ನೈಕೋಡಿ,ಗಜಾನಂದ ನರಗೋದಿ ,ರಾಹುಲ್ ಬಸರಿಗಿಡ ಸೇರಿದಂತೆ ಅನೇಕರಿದ್ದರು.
ವರದಿ : ಉಮೇಶ್ ಅಚಲೇರಿ, ಅಫಜಲಪುರ ತಾಲ್ಲೂಕು, ಕಲ್ಬುರ್ಗಿ ಜಿಲ್ಲೆ.