ಲಿಂಗಸೂಗೂರು: ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಓರ್ವ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ.
ತಾಲೂಕಿನ ಮದಗಲ್ ಪಟ್ಟಣದಿಂದ ತಾವರಗೇರಾ ರಸ್ತೆಯ ಕಡೆಗೆ ಅಜ್ಮೀರ ಎನ್ನುವ ಯುವಕ ಬೈಕ್ನಲ್ಲಿ ಪ್ರಯಾಣ ಬೆಳೆಸಿದ್ದ. ಇತ್ತ ತಾವರಗೇರಿಯಿಂದ ಮುದಗಲ್ ಕಡೆ ದೇವಪ್ಪ ಎನ್ನುವ ವ್ಯಕ್ತಿಯ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಪಟ್ಟಣದ ಹಳೇಪೇಟೆ ಬಳಿ ದುರಂತ ಸಂಭವಿಸಿದೆ.
ಪಟ್ಟಣದ ಕಿಲ್ಲಾದ ನಿವಾಸಿಯಾದ ಅಜ್ಮೀರ್ (35) ಮೃತ ಬೈಕ್ ಸವಾರನಾಗಿದ್ದು, ದೇವಪ್ಪ ಎನ್ನುವವರಿಗೆ ತೀವ್ರ ಗಾಯಗಳಾಗಿವೆ.
ಹೆಚ್ಚಿನ ಚಿಕಿತ್ಸೆಗಾಗಿ ದೇವಪ್ಪನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮುದಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.