ಅನುಮಾಸ್ಪದ ರೀತಿಯಲ್ಲಿ ವ್ಯಕ್ತಿ ಶವವೊಂದು ಭೀಮಾನದಿಯಲ್ಲಿ ಪತ್ತೆ..!
ಇಂಡಿ : ಅನುಮಾಸ್ಪದ ರೀತಿಯಲ್ಲಿ ವ್ಯಕ್ತಿ ಶವವೊಂದು ಭೀಮಾನದಿಯಲ್ಲಿ ಪತ್ತೆಯಾಗಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿರುವ ಭೀಮಾನದಿಯಲ್ಲಿ 42 ವರ್ಷದ ಮಿಟ್ಟು ಧೋತ್ರೆ ಶವ ಪತ್ತೆಯಾಗಿದೆ. ಅಲ್ಲದೇ, ಬೈಕ್ ಭೀಮಾನದಿಯ ಮೇಲ್ಗಡೆ ಅಪಘಾತ ಆಗಿದ್ದು, ಶವ ಮಾತ್ರ ನದಿಯಲ್ಲಿ ಸಿಕ್ಕಿದೆ. ಇದು ಕೊಲೆಯೋ ಅಥವಾ ಅಪಘಾತವೋ ಎಂಬುದು ಪೊಲೀಸರ ತನಿಖೆ ಬಳಿಕ ತಿಳಿದು ಬರಬೇಕಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಂಡಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.