ಮಿಸೈಲ್ ಮ್ಯಾನ್ , ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಪುಣ್ಯ ಸ್ಮರಣೆ..
ಡಾ.ಎ ಪಿ ಜೆ ಅಬ್ದುಲ್ ಕಲಾಂ ಫೌಂಡೇಶನ್..
ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಣೆ..!
ಇಂಡಿ: ವಿವಿಧ ಕ್ಷೇತ್ರಗಳಲ್ಲಿ ದೇಶದ ಬೆಳವಣಿಗೆಗೆ ಕೊಡುಗೆ ನೀಡಿದ ಮಾಜಿ ರಾಷ್ಟ್ರಪತಿ ಡಾ ಎ ಪಿ ಜೆ ಅಬ್ದುಲ್ ಕಲಾಂ ಅವರ ಎಂಟನೇ ವರ್ಷದ ಪುಣ್ಯಸ್ಮರಣೆ ನಿಮಿತ್ಯೆ ಸಾರ್ವಜನಿಕ ತಾಲ್ಲೂಕು ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಣೆ ಮಾಡಲಾಯಿತು. ಪಟ್ಟಣದ ಡಾ.ಎ ಪಿ ಜೆ ಅಬ್ದುಲ್ ಕಲಾಂ ಫೌಂಡೇಶನ್ ಆಶ್ರಯದಲ್ಲಿ ಫೌಂಡೇಶನ್ ಅಧ್ಯಕ್ಷ ಮೊಹಮ್ಮದ್ ಅಸ್ಪಾಕ್ ಕೋಕಣಿ ಅವರ ನೇತೃತ್ವದಲ್ಲಿ ಹಣ್ಣುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಡಾ.ಅಮಿತ್ ಕೋಳಕರ, ಉಪಾಧ್ಯಕ್ಷ ಮೊಹಮ್ಮದ್ ಹುಸೈನ್ ಹುಮನಾಬಾದ, ಕಾರ್ಯದರ್ಶಿ ಭಾಷಾ ಬೋರಾಮಣಿ, ಸದಸ್ಯ ರಮಜಾನ ವಾಲಿಕಾರ,
ಮೈನುದ್ದೀನ್ ಶೇಖ, ಜಹಾಂಗೀರ್ ಅಗರಖೇಡ, ಕಲಿಮ ಪಟೇಲ, ಇರ್ಫಾನ್ ದುದನಿ, ಶಬ್ಬೀರ್ ಮುಲ್ಲಾ, ಮುಜೀಬ್ ಅಫಜಲಪುರ, ಸಲಾವುದ್ದೀನ್ ಪಠಾಣ, ಸಮಾಜಸೇವಕ ಹಸನ ಮುಜಾವರ, ಹುಸೇನ್ ಮಕಾನದಾರ,ನಾಸಿರ್ ಇನಾಮದಾರ, ಮುನ್ನಾ ಇಂಡೀಕರ್ ಉಪಸ್ಥಿತರಿದ್ದರು.



















