ಡಿ ಎಮ್ ಮೂಲಿಮನಿ ವರ್ಗಾವಣೆ ಹಿನ್ನೆಲೆ ಬಿಳ್ಕೊಡೆ ಸಮಾರಂಭ..
ಇಂಡಿ ಹೆಸ್ಕಾಂ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಡಿ ಎಮ್ ಮೂಲಿಮನಿ..
ಇಂಡಿ : ಪ್ರಸ್ತುತ ದಿನಗಳಲ್ಲಿ ಅಪರಿಮಿತವಾಗಿ
ಹೆಚ್ಚುತ್ತಿರುವ ಬೇಡಿಕೆಗೆ ತಕ್ಕಂತೆ ವಿದ್ಯುತ್ ವಿತರಣೆ
ಅಧಿಕಾರಿಗಳಿಗೆ ಒಂದು ಸವಾಲಿನ ಕೆಲಸವಾಗಿದೆ ಎಂದು ಇಂಡಿ ಹೆಸ್ಕಾಂ ಇಲಾಖೆಯಲ್ಲಿ ಸಹಾಯಕ ಇಂಜನಿಯರಾಗಿ ಸೇವೆ ಸಲ್ಲಿಸಿ ಇದೀಗ ಸಿಂದಗಿ ಕಚೇರಿಗೆ ವರ್ಗಾವಣೆಗೊಂಡಿರುವ ಡಿ.ಎಂ. ಮೂಲಿಮನಿ ಹೇಳಿದರು.
ಬುಧವಾರ ಪಟ್ಟಣದ ಹೆಸ್ಕಾಂ ಆವರಣದಲ್ಲಿ ನಡೆದ
ಸಮಾರಂಭದಲ್ಲಿ ಹೆಸ್ಕಾಂ ಅಧಿಕಾರಿಗಳಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಬೇಸಿಗೆ ಸಂದರ್ಭಗಳಲ್ಲಿ ಕೂಡ ರೈತರ ಅಗತ್ಯಗಳಿಗೆ ತಕ್ಕಂತೆ ವಿದ್ಯುತ್ ಸರಬರಾಜು ಮಾಡುವ
ವಿಚಾರದಲ್ಲಿ ನಾನು ಶಕ್ತಿ ಮೀರಿ ಇಲಾಖೆಯ ಸಹೋದ್ಯೋಗಿಗಳ ಸಹಕಾರ ಪಡೆದು ಆದಷ್ಟು
ತಾಲೂಕಿನಲ್ಲಿ ಉತ್ತಮ ಸೇವೆ ಸಲ್ಲಿಸುವ ಪ್ರಯತ್ನ
ನಡೆಸಿದ್ದಾಗಿ ತಿಳಿಸಿದರು. ಇಲ್ಲಿಂದ ವರ್ಗಾವಣೆಗೊಂಡು ಸಿಂದಗಿಗೆ ತೆರಳುತ್ತಿದ್ದು, ನನ್ನ ಜಾಗಕ್ಕೆ ಆರ್.ಆರ್. ಲಾಳಸಂಗಿ ಅವರಿಗೂ ಇಲಾಖೆಯ ಸಿಬ್ಬಂದಿ, ಗುತ್ತಿಗೆದಾರರು, ರೈತರು, ಸಾರ್ವಜನಿಕರು ಉತ್ತಮ ರೀತಿಯ ಸಹಕಾರ ನೀಡುವಂತೆ ಮನವಿ ಮಾಡಿದರು.
ಸಹಾಯಕ ಕಾರ್ಯನಿರ್ವಾಹಕ ಇಂಜನಿಯರ ಎಸ್.ಆರ್. ಮೇಡೆಗಾರ ಮಾತನಾಡಿ, ಡಿ.ಎಂ. ಮೂಲಿಮನಿ ಅವರು ಇಂಡಿಯಲ್ಲಿ ಸುಮಾರು ೨೦ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ಸಿಂದಗಿ
ಕಚೇರಿಗೆ ವರ್ಗಾವಣೆಯಾಗಿರುವುದು ಬೇಸರ ತಂದಿದೆ.
ಸಿಂದಗಿ ಯಲ್ಲಿಯೂ ಜನಸ್ನೇಹಿಯಾಗಿ ಜನರಿಗೆ ಅವರಿಂದ ಉತ್ತಮ ಸೇವೆ ದೊರೆಯುವಂತಾಗಲಿ ಎಂದರು.
ಎಇಇ ಪಿ.ಎಂ. ಸಾಗನೂರ, ಜೆಇ ಆರ್.ವ್ಹಿ. ಕುಂಬಾರ ಹಾಗೂ ಇತರರು ಅಧಿಕಾರಿಗಳು ನಿರ್ಗಮಿತ ಡಿ.ಎಂ. ಮೂಲಿಮನಿ ಅವರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಆರ್.ಕೆ. ಚವ್ಹಾಣ, ಸಂತೋಷ ಬನಗೊಂಡೆ, ವಾಯ್.ಟಿ. ಪಾಟೀಲ, ಭೀಮಣ್ಣ ಗುಡ್ಲ, ಎ.ಎಲ್. ಬೇವನೂರ, ಪುಂಡಲಿಕ ಕಲ್ಮನಿ, ಎಸ್.ಡಿ. ತಾವರಖೇಡ, ವಾಯ್.ಜೆ. ಹೊನ್ನಗೊಂಡ, ನಿಂಗು ಹಿರೇಕುರಬರ, ಸಿ.ಎಸ್. ಪೂಜಾರಿ, ಅರ್ಜುನ ಪೂಜಾರಿ, ಯಲಗೊಂಡ ಬೇವನೂರ, ನಿಯಾಜ್ ಅಗರಖೇಡ, ಶ್ರೀಶೈಲಗೌಡ ಪಾಟೀಲ, ಮಲ್ಲು ಪೂಜಾರಿ, ಲಕ್ಕಪ್ಪ ಯಳಮೇಲಿ, ದುಂಡಪ್ಪ ಮಡ್ನಹಳ್ಳಿ, ಭೀರಪ್ಪ ಬಸನಾಳ ಸೇರಿದಂತೆ ಇಲಾಖೆಗಳ ಅಧಿಕಾರಿಗಳು, ಹೆಸ್ಕಾಂ ಗುತ್ತಿಗೆದಾರರು ಅನೇಕ ರೈತರು ಇದ್ದರು.
ಇದೇ ಸಂದರ್ಭದಲ್ಲಿ ಡಿ.ಎಂ. ಮೂಲಿಮನಿ ಅವರಿಗೆ ಕನಕದಾಸ ಸರಕಾರಿ ನೌಕರರ ಸೌರ್ಹಾದ ಸಹಕಾರಿ ಸಂಘದಿಂದ ಸ್ಮರಣಿಕೆ ನೀಡಿ ಸನ್ಮಾನಿಸಿದರು.