ದೇವದುರ್ಗ: ಅಕ್ರಮ ಮರಳು ಮಾಫಿಯಾ ವಿರುದ್ಧ ಶಾಸಕಿ ಕರೆಮ್ಮ ನಾಯಕ್ ರಾತ್ರೋ ರಾತ್ರಿ ಫೇಸ್ಬುಕ್ ಲೈವ್ ಬಂದು ಏಕಾಂಗಿ ಹೋರಾಟ ನಡೆಸಿದ್ದಾರೆ.
ದೇವದುರ್ಗದಲ್ಲಿ ಅವ್ಯಹತವಾಗಿ ಮರಳು ದಂಧೆ ನಡೆಯುತ್ತಿದೆ. ಮರಳು ದಂಧೆಯನ್ನು ತಡಗಟ್ಟುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಶಾಸಕಿ ಕರೆಮ್ಮ ನಾಯಕ್ ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಮರಳು ತುಂಬಿದ ಬಡವರ ಟ್ರಾಕ್ಟರ್ಗಳ ಮೇಲೆ ಕೇಸ್ ಹಾಕ್ತೀರಾ..? ಇದೀಗ ನೂರಾರು ವಾಹನಗಳು ಅಕ್ರಮ ಮರಳು ತುಂಬಿಕೊಂಡು ನಿಂತಿವೆ. ಇವುಗಳ ವಿರುದ್ಧ ಕೇಸ್ ಹಾಕಿ ಬನ್ನಿ ಎಂದು ಪೊಲೀಸ್ ಇಲಾಖೆಯ ವಿರುದ್ಧ ಕರೆಮ್ಮ ನಾಯಕ್ ಅಸಮಾಧಾನ ಹೊರ ಹಾಕಿದ ವಿಡಿಯೋ ಇದೀಗ ವೈರಲ್ ಆಗುತ್ತಿದೆ.