ಇಂಡಿ : ರಾಜ್ಯದಲ್ಲಿ ಮುಸ್ಲಿಂ ಸಮುದಾಯಕ್ಕೆ ಅಭದ್ರತೆ ಕಾಡುತ್ತಿದೆ. ಶಾದಿ ಮಹಲ್ ಕಟ್ಟಿ ಕೊಡುವುದರಿಂದ ಅಭಿವೃದ್ಧಿ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಮುಸ್ಲಿಂ ಸಮುದಾಯದ ಮೀಸಲಾತಿ ಕಿತ್ತು ಹಾಕಿದ್ದಾರೆ. ಇನ್ನೂ ಬಲಗೈ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷ ಸತತ ಮೋಸ ಮಾಡಿದೆ. ಕಾಂಗ್ರೆಸ್ ಜೆಡಿಎಸ್ ಪಕ್ಷ ಒಂದೇ ನಾಣ್ಯದ ಎರಡು ಮುಖಗಳು ಎಂದು ಬಿಎಸ್ಪಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ದಸ್ತಗೀರ ಮುಲ್ಲಾ ವಾಗ್ದಾಳಿ ಮಾಡಿದರು.
ಪಟ್ಟಣದಲ್ಲಿ ಜ್ಯೋತಿ ಬಾ ಪುಲೆ 196 ರ ಜಯಂತಿ ಹಾಗೂ ಬಿಸ್ಪಿ ಕಾರ್ಯಾಲಯ ಉದ್ಘಾಟಿಸಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು, ಬಿಸ್ಪಿ ಪಕ್ಷದ ಘೋಷಿತ ಅಭ್ಯರ್ಥಿ ನಾಗೇಶ ಶಿವಶರಣ ಪರ ಮತಯಾಚನೆ ಮಾಡಿದರು. ಅಸಂವಿಧಾನಾತ್ಮಕ ಮೀಸಲಾತಿ ಹೆಚ್ಚಳ ಮಾಡಿದರು. ಒಳ ಮೀಸಲಾತಿಯಲ್ಲಿ ಕಂದಕ ಸೃಷ್ಟಿ ಮಾಡಿ ಜಗಳ ಹಚ್ಚುವ ಕೆಲಸ ಮಾಡಿದರು. ಒಟ್ಟಾರೆಯಾಗಿ ಜಾತಿಗಳ ಮದ್ಯ ಸಂಘರ್ಷ ಕೊಮುವಾದ ಪಕ್ಷಗಳಿಂದ ಜನರು ಏನು ನೀರಿಕ್ಷೆ ಮಾಡಲು ಸಾಧ್ಯೆ. ಸಂವಿಧಾನದ ತಳಹದಿ ಮೇಲೆ ಬಹುಜನ ಸಮಾಜ ಪಕ್ಷ ನಿಂತಿದ್ದು, ಮೂರನೇ ರಾಷ್ಟ್ರೀಯ ಪಕ್ಷವಾಗಿದೆ. ಎಸಿ, ಎಸ್ಟಿ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳಿಗೆ ಧ್ವನಿಯಾಗಿ ನಿಲ್ಲುವ ಬಿಎಸ್ಪಿ ಪಕ್ಷ. ಈಗಾಗಲೇ ಕೆಳ ವರ್ಗದ ಜೊತೆಗೆ ಇತರೆ ಸಮುದಾಯಗಳು ಜಾಗೃತಿಯಾಗಿವೆ. ಹಾಗಾಗಿ ಈ ಬಾರಿ ಜನರು ಇಂಡಿಯ ಮತಕ್ಷೇತ್ರದ ಜೊತೆಗೆ ಇನ್ನೂಳಿದ ಕ್ಷೇತ್ರಗಳು ಗೆದ್ದೆ ಗೆಲ್ಲುತ್ತೆವೆ ಖಂಡಿತವಾಗಿಯೂ ಆಶೀರ್ವಾದ ಮಾಡುತ್ತಾರೆ. ಈ ಬಾರಿ ಸರಕಾರ ರಚಿಸುವಲ್ಲಿ ಬಹುಜನ ಸಮಾಜ ಪಕ್ಷ ಮಹತ್ತವಾರದ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬಿಎಸ್ಪಿ ಅಭ್ಯರ್ಥಿ ನಾಗೇಶ ಶಿವಶರಣ ಮಾತಾನಾಡಿದ ಅವರು, ಈ ದೇಶದ ಎಸಿ ಎಸ್ಟಿ ಅಲ್ಪಸಂಖ್ಯಾತ ಹಿಂದುಳಿದ ವರ್ಗಗಳ ಏಳಿಗೆಗಾಗಿ, ಉನ್ನತಿಗಾಗಿ ಬಹುಜನ ಸಮಾಜ ಪಕ್ಷ ಕಟ್ಟಿದ್ದು. ಆದರೆ ಇಲ್ಲಿಯವರೆಗೆ ಆಳಿದ್ದ ಅನುಕೂಲ ಸಿಂಧು ಪಕ್ಷಗಳು, ಕೆಳ ವರ್ಗದ ಸಮುದಾಯದ ಜನರ ಬದುಕು ಸರ್ವನಾಶ ಮಾಡಿವೆ. ಆದರೆ ಈ ಮತಕ್ಷೇತ್ರದಲ್ಲಿ ಎಸಿ ಎಸ್ಟಿ ಒಲಿಸಿ ಸೇರಿ ಸುಮಾರು 1:50 ಲಕ್ಷ ಮತದಾರರು ಇದ್ದೆವೆ. ಒಬ್ಬ ಅಲ್ಪಸಂಖ್ಯಾತ ಅಥವಾ ಮುಸ್ಲಿಂ ಸಮುದಾಯದಿಂದ ಒಂದು ಜಿಲ್ಲಾ ಪಂಚಾಯತ ಗೆ ಅವಕಾಶ ಸಿಕ್ಕಿಲ್ಲ. ಇನ್ನೂ ಬಲಗೈ ಸಮುದಾಯದ ಅಸಹಾಯಕ ವ್ಯಕ್ತಿಗೆ ನಿಲ್ಲಿಸಿ ಸೋಲಿಸುವ ಕೆಲಸ ಮಾಡಿದ್ದಾರೆ. ಇಲ್ಲಿರುವ ಕೆಳವರ್ಗದ ಜನರಿಗೆ ಯಾವ ರಂಗದಲ್ಲೂ ಅವಕಾಶ ಸಿಕ್ಕಿಲ್ಲ. ಹಾಗಾಗಿ ಬಾರಿ ತಕ್ಕ ಪಾಠ ಕಲಿಸಿ ಬಹುಜನ ಸಮಾಜ ಪಕ್ಷ ಜನರು ಆಶೀರ್ವಾದ ಮಾಡುತ್ತಾರೆ ಎಂದರು.
ರಾಜ್ಯ ಕಾರ್ಯದರ್ಶಿ ರಾಜು ಮಾದರ, ಜಿಲ್ಲಾ ಕಾರ್ಯದರ್ಶಿ ಏಕನಾಥ ದ್ವಾಶ್ಯಾಳ, ಮಹಮ್ಮದ ಅಸ್ಪಾಕ, ಸಿಂದಗಿ ತಾಲೂಕು ಅಧ್ಯಕ್ಷ ರಮೇಶ ಐಹೊಳೆ, ಚಂದ್ರಶೇಖರ ದೇವೂರ ಇನ್ನೂ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.