ಮುದ್ದೇಬಿಹಾಳ : ತೆರೆದ ಬಾವಿಯಲ್ಲಿ ಈಜಲು ಸ್ನೇಹಿತರೊಂದಿಗೆ ಬಾವಿಗೆ ಜಿಗಿದ ಬಾಲಕ ನೀರಲ್ಲಿ ಮುಳುಗಿ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಕೆಸಾಪುರ ಗ್ರಾಮದಲ್ಲಿ ನಡೆದಿದೆ.
ಮಹಾರಾಷ್ಟ್ರದ ಪುಣೆ ನಿವಾಸಿ ರಘು ಲಕ್ಷ್ಮಣ ಧೋತ್ರೆ (16) ಮೃತಪಟ್ಟಿರುವ ದುರ್ದೈವಿ. ಬೇಸಿಗೆ ರಜೆಯ ಹಿನ್ನೆಲೆ ತಾಯಿಯ ತವರೂರು ಕೆಸಾಪುರಕ್ಕೆ ಬಂದಿದ್ದ ಬಾಲಕ.
ಬಾವಿಯಲ್ಲಿ ಈಜು ಬರದಿದ್ದರೂ ಈಜು ಬರುತ್ತದೆ ಎಂದು ಆಳವಾದ ಬಾವಿಯಲ್ಲಿ ಜಿಗಿದಿದ್ದಾನೆ. ಆದ್ರೇ, ನೀರಿನಲ್ಲಿ ಮುಳುಗಿ ಅಸುನೀಗಿದ್ದಾನೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.