ಕತ್ತಲು ಆವರಿಸಿದ ಇಂಡಿ ವಿಧಾನ ಸೌಧದ ರಸ್ತೆ..? ಹಿಂಗೂ ಆಗುತ್ತಾ..?
ಚುನಾವಣೆಯ ಸರಳ ಸುಸೂತ್ರಕ್ಕೆ ಸಹಕಾರವಾಗಲು ಮೂರು ಸೂತ್ರ ಅವಶ್ಯಕ..
ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಅಪರಾದ ತಡೆಗಟ್ಟಲು ಸಿ ಸಿ ಕ್ಯಾಮರಾ ಸಿಗ್ನಲ್ ದೀಪ ಪ್ರಾರಂಭಿಸಿ..!
ತಾಲ್ಲೂಕು ಕಛೇರಿಗಳ ಮೇಲೆ ವಿದ್ಯುತ್ ದೀಪ ಉರಿಸಿ..!
ರಸ್ತೆ ಅಪಘಾತ ತಪ್ಪಿಸಲು ಬೀದಿ ದೀಪ ಬದಲಾಯಿಸಿ..!
ಇಂಡಿ: ಕತ್ತಲೆ.. ಕತ್ತಲೆ.. ಬರೀ ಕತ್ತಲೆ.. ಇದು ಇಂಡಿ ಮಿನಿ ವಿಧಾನಸೌಧದ ರಸ್ತೆಯ ಹಣೆಬರಹ. ಹೌದು..! ಕತ್ತಲಿನ ದಾರಿಯಲ್ಲಿ ಹಲವು ತಾಲ್ಲೂಕು ಕಛೇರಿ ಹಾಗೂ ತಾಲ್ಲೂಕು ಆಡಳಿತದ ಚಂದದ ಮಿನಿ ವಿಧಾನ ಸೌಧದ ರಸ್ತೆ ಮತ್ತು ಕಛೇರಿಗಳು ಕಡು ಕತ್ತಲಲ್ಲಿ ನಿಂತಿವೆ. ಭವಿಷ್ಯದ ಜಿಲ್ಲಾ ಕೇಂದ್ರದ ಕನಸು ಕಾಣುತ್ತಿರುವ ಇಂಡಿ ತಾಲ್ಲೂಕು ಜಿಲ್ಲೆಯ ಜನಸಂಖ್ಯೆಯಲ್ಲಿ ಅತಿ ಹೆಚ್ಚು ಇದೆ. ಇಂಡಿ ಪಟ್ಟಣದ ಕತ್ತಲೆಯ ರಸ್ತೆಯ ಸಂಚಾರದ ನೈಜ ಕಥೆ ಇದಾಗಿದೆ.
ಇಂಡಿ ಪಟ್ಟಣದ ಮೂಲಭೂತ ಸೌಕರ್ಯಗಳಲ್ಲಿ ಅತೀ ಅಗತ್ಯ ಸೌಕರ್ಯಗಳಲ್ಲಿ ಬೀದಿ ದೀಪದ ಸೌಕರ್ಯವೂ ಮುಖ್ಯ..! ಆದರೆ ಇಂಡಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅಲ್ಲಲ್ಲಿ ವಿದ್ಯುತ್ ದೀಪದ ಸಮರ್ಪಕ ನಿರ್ವಹಣೆ ಕೊರತೆಯಿಂದ ಬೀದಿ ದೀಪ ಉರಿಯುವುದಿಲ್ಲ. ಜನದಟ್ಟಣೆ ರಸ್ತೆಯಲ್ಲಿ ಸುಮಾರು ದಿನಗಳಿಂದ ಜನರು ಕತ್ತಲಲ್ಲಿಯೇ ತಿರುಗಾಡುವಂತಹ ಕೆಟ್ಟ ಪರಿಸ್ಥಿತಿ ಎದುರಾಗಿದ್ದು, ಕತ್ತಲಲ್ಲಿಯೇ ಓಡಾಡುವ ಆತಂಕದ ಪರಿಸ್ಥಿತಿಯಲ್ಲಿ ನಗರವಾಸಿಗಳದಾಗಿದೆ.
- ಕತ್ತಲೆ ವಿವಿರ…
ತಾಲ್ಲೂಕು ಆಡಳಿತ ಸೌಧದ ರಸ್ತೆ, ಪಟ್ಟಣದ ಹೃದಯಭಾಗದ, ಬಸವೇಶ್ವರ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಜಗಜೀವನರಾಮ ವೃತ್ತ, ಟಿಪ್ಪು ಸುಲ್ತಾನ ವೃತ್ತ, ಮಹಾವೀರ ಸರ್ಕಲ್, ಎಸ್ ಬಿ ಐ ಬ್ಯಾಂಕ್ , ಅಗರಖೇಡ ರಸ್ತೆಯ ಸಿದ್ದಲಿಂಗ ಮಹಾರಾಜರ ದ್ವಾರ ಬಾಗಿಲು, ಅಪ್ಸರಾ ಹೊಟೆಲ್, ಗಜಾಕೋಶ ಆಸ್ಪತ್ರೆ ಎದುರು ಸಂಪೂರ್ಣ ಕತ್ತಲು ಆವರಿಸಿಕೊಂಡಿದೆ.
ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ವೃತ್ತ ದ ಹೈಮಾಸ್ಕನಲ್ಲಿ ಕೆಲವು ಬಲ್ಪ್ ಮಾತ್ರ ಉರಿಯುವುದರಿಂದ ಇನ್ನೂಳಿದ ಭಾಗ ಕತ್ತಲಲ್ಲಿ ಮುಳುಗಿ ಹೋಗಿರುತ್ತದೆ. ಹಾಗಾಗಿ ಪಟ್ಟಣದ ಪ್ರಮುಖ ರಸ್ತೆಯ ಮಾರ್ಗವಾಗಿರುವ ವಿಜಯಪುರ, ಸಿಂದಗಿ, ಸ್ಟೇಷನ್ ರೋಡ, ಅಗರಖೇಡ ರಸ್ತೆಯ ಮಾರ್ಗದಲ್ಲಿರುವ ಉರಿಯದ ವಿದ್ಯುತ್ ದೀಪಗಳ ಬದಲಾವಣೆ ಅತೀ ಅವಶ್ಯಕವಾಗಿರುತ್ತೆದೆ.
👉 ಕಗ್ಗತ್ತಲಲ್ಲಿ ತಾಲ್ಲೂಕು ಕಛೇರಿ & ಸರಕಾರಿ ಆಸ್ಪತ್ರೆ..!
ತಾಲ್ಲೂಕು ಆಡಳಿತ ಸೌಧ, ಕ್ಷೇತ್ರ ಶಿಕ್ಷಣ ಇಲಾಖೆ ಕಛೇರಿ, ಜಿಲ್ಲಾ ಪಂಚಾಯತ ಕಾರ್ಯಾಲಯ, ಕೃಷಿ ಇಲಾಖೆಯ ಕಛೇರಿ, ಆರೋಗ್ಯ ಇಲಾಖೆಯ ಹಾಗೂ ತಾಲ್ಲೂಕು ಸರಕಾರಿ ಆಸ್ಪತ್ರೆ ವಿದ್ಯುತ್ ದೀಪ ಉರಿಯದೇ ಸಂಪೂರ್ಣ ಕತ್ತಲಲ್ಲಿ ಮುಳುಗಿವೆ. ಇನ್ನೂ ಗ್ರಾಮೀಣ ಭಾಗದ ಜನರು ಆರೋಗ್ಯ ತುರ್ತು ಸೇವೆಗಾಗಿ ರಾತ್ರಿ ಆಗಮಿಸುವ ರೋಗಿಗಳು ತುಂಬಾ ಕಷ್ಟ ಪಡುವಂತಾಗಿದೆ. ದಿನದ ೨೪ ಘಂಟೆ ಸೇವೆ ಕೊಡುವ ತಾಲ್ಲೂಕು ಸರ್ಕಾರಿ ಆಸ್ಪತ್ರೆ ಎದುರು ವಿದ್ಯುತ್ ದೀಪ ಉರಿಯದೇಯಿರುವುದು ತುಂಬಾ ನೋವಿನ ಸಂಗತಿಯಾಗಿದೆ.
ಒಟ್ಟಾರೆಯಾಗಿ ಸಮರ್ಪಕವಾಗಿ ಬೀದಿ ದೀಪಗಳಿಲ್ಲದೆ ಪಟ್ಟಣದ ಪ್ರಮುಖ ರಸ್ತೆಗಳು, ಹಾಗೂ ಮಹಾನ್ ನಾಯಕರ ಪುತ್ಥಳಿಗಳು ಬೀದಿ ದೀಪಗಳಿಲ್ಲದೇ ಕಗ್ಗತ್ತಲಲ್ಲಿವೆ. ಸಾರ್ವಜನಿಕರು ಆಕ್ರೋಶ ಹೋರ ಹಾಕುವ ಮುನ್ನವೇ ಅಧಿಕಾರಿಗಳು ಎಚ್ಚತ್ತುಕೊಂಡು ಸರಪಡಿಸುತ್ತಾರೋ..! ಇಲ್ಲೋ ಎಂದು ಕಾದು ನೋಡಬೇಕಾಗಿದೆ.
- ಚುನಾವಣೆ ಅಕ್ರಮ ಚಟುವಟಿಕೆಗಳ ಮೇಲೆ ನಿಗಾಯಿಡಲು, ರಸ್ತೆ ಸಂಚಾರದ ಕಿರಿಕಿರಿ ತಪ್ಪಿಸಲು ಟ್ರಾಫಿಕ್ ಸಿಗ್ನಲ್ ದೀಪಗಳು ಹಾಗೂ ಸಿಸಿಟಿವಿ ಕ್ಯಾಮರಾ ಪ್ರಾರಂಭಿಸಬೇಕು.
– ಮಲ್ಲಿಕಾರ್ಜುನ ಹಾವಿನಾಳಮಠ
ಇಂಡಿ ನಗರ ನಿವಾಸಿ..
- ಸರಕಾರಿ ಆಸ್ಪತ್ರೆ ಸೇರಿದಂತೆ ವಿವಿಧ ತಾಲ್ಲೂಕು ಕಛೇರಿಗಳ ಮೇಲೆ ರಾತ್ರಿ ವಿದ್ಯುತ್ ದೀಪ ಉರಿಯಿದೇ ಇರುವುದು ಗಮನಕ್ಕೆ ಬಂದಿದ್ದು. ಕೂಡಲೇ ಎಲ್ಲಾ ತಾಲ್ಲೂಕು ಕಛೇರಿಗಳ ಮೇಲೆ ವಿದ್ಯುತ್ ದೀಪ ಪ್ರಾರಂಭಿಸಲು ಸೂಚಿಸುತ್ತೆನೆ.
– ನಾಗಯ್ಯ ಹಿರೇಮಠ
ತಹಶಿಲ್ದಾರ ಇಂಡಿ
- ವಿದ್ಯುತ್ ದ್ವೀಪ ಅಳವಡಿಕೆ ಟೆಂಡರ್ ಮುಗಿದಿದ್ದು, ಈ ಸದ್ಯ ಟೆಂಡರ್ ಕರೆಯಲು ನೀತಿಸಂಹಿತೆ ಇರೊದರಿಂದ ಸಮಸ್ಯೆವಾಗಿದೆ. ರಸ್ತೆಯ ಡಿವಾಡ್ಡರ್ ನಲ್ಲಿ ಅಲ್ಲಲ್ಲಿ ಕೆಟ್ಟಿರುವ ವಿದ್ಯುತ್ ದೀಪ ಬದಲಾಯಿಸಿ ಸರಿಪಡಿಸಲು ತಿಳಿಸುತ್ತೆನೆ.
– ಬನ್ನೆಮ್ಮ ಯಲ್ಲಪ್ಪ ಹದರಿ
ಪುರಸಭೆ ಅಧ್ಯಕ್ಷ