ವಿಜಯಪುರ : ಪೊಲೀಸರು ಧೈರ್ಯದಿಂದ ಕೆಲಸಗಳನ್ನು ಮಾಡಬೇಕು ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ವಿಜಯಪುರ ನಗರದ ಪೊಲೀಸ ಪರೇಡ್ ಮೈದಾನದಲ್ಲಿ ಪೊಲೀಸ ಕಲ್ಯಾಣ ಹಾಗೂ ಧ್ವಜ ದಿನಾಚರಣೆ ನೆರವೇರಿಸಿ ರವಿವಾರ ಮಾತನಾಡಿದರು.
ಪೊಲೀಸರು 24*7 ಕೆಲಸ ಮಾಡುತ್ತಾರೆ. ಅಲ್ಲದೇ, ಕೋವಿಡ್ ವೇಳೆ ಪೊಲೀಸರು ತಮ್ಮ ಪ್ರಾಣದ ಹಂಗ ತೊರೆದು ಕೆಲಸ ನಿರ್ವಹಿಸಿದ್ದಾರೆ. ವಿಜಯಪುರ ಮಹಾರಾಷ್ಟ್ರ ಗಡಿಭಾಗದಲ್ಲೂ ನಮ್ಮ ಪೊಲೀಸರು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದರು. ಈ ವೇಳೆ ಎಸ್ಪಿ ಎಚ್‌ಡಿ ಆನಂದಕುಮಾರ, ಜಿಲ್ಲಾ ಪಂಚಾಯತ ಸಿಇಒ ರಾಹುಲ್ ಶಿಂಧೆ ಸೇರಿದಂತೆ ಪೊಲೀಸ ಸಿಬ್ಬಂದಿಗಳು ಉಪಸ್ಥಿತರಿದ್ದರು.