ಚುನಾವಣೆ ಕರ್ತವ್ಯದಲ್ಲಿ ಲೋಪವೆಸಗಿದ ಪ್ರೌಢಶಾಲೆ ಮುಖ್ಯಗುರುಗಳು ಹಾಗೂ ಸಹ ಶಿಕ್ಷಕನನ್ನು ಅಮಾನತ್ತುಗೊಳಿಸಿ ಆದೇಶ…
ವಿಜಯಪುರ, ಮಾ.31
ಚುನಾವಣಾ ಕರ್ತವ್ಯಕ್ಕೆ ಗೈರು ಹಾಜರಾಗಿ ನಿಷ್ಕಾಳಜಿತನ ತೋರಿ ಕರ್ತವ್ಯಲೋಪವೆಸಗಿದ ಬರಟಗಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರುಗಳಾದ ಅಪ್ಪಣ್ಣ ಸವದಿ ಹಾಗೂ ಕಳ್ಳಕವಟಗಿ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಅಲ್ಲಾಬಕ್ಷ ಇವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಆದೇಶ ಹೊರಡಿಸಿದ್ದಾರೆ.
ಬಬಲೇಶ್ವರ ಮತಕ್ಷೇತ್ರದ ತಹಶೀಲ್ದಾರರೂ ಆದ ಸಹಾಯಕ ಚುನಾವಣಾಧಿಕಾರಿ ಇವರು, ತಮ್ಮ ವರದಿಯಲ್ಲಿ ಬಬಲೇಶ್ವರ ವಿಧಾನಸಭಾ ಮತಕ್ಷೇತ್ರದ 7 ಚೆಕ್ ಪೋಸ್ಟ ಗಳಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನ ಮೇರೆಗೆ ಅರ್ಜುಣಗಿ ಚೆಕ್ ಪೋಸ್ಟನ ಎಸ್.ಎಸ್.ಟಿ. ತಂಡ ಸಂಖ್ಯೆ-2 ಮಧ್ಯಾಹ್ನ 2 ರಿಂದ ರಾತ್ರಿ 8 ಗಂಟೆವರೆಗೆ ಕರ್ತವ್ಯ ನಿರ್ವಹಿಸಲು ಮುಖ್ಯಗುರುಗಳಾದ ಅಪ್ಪಣ್ಣ ಸವದಿ ಹಾಗೂ ಎಸ್.ಎಸ್.ಟಿ. ತಂಡ-1 ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆವರೆಗೆ ಕರ್ತವ್ಯ ನಿರ್ವಹಿಸಲು ಸಹ ಶಿಕ್ಷಕ ಅಲ್ಲಾಬಕ್ಷ ಇವರನ್ನು ನಿಯೋಜಿಸಲಾಗಿತ್ತು. ಆದರೆ ದಿನಾಂಕ : 23-3-2023ರಿಂದ ಇಲ್ಲಿಯವರೆಗೆ ಅರ್ಜುಣಗಿ ಮತ್ತು ಚಿಕ್ಕಗಲಗಲಿ ಚೆಕ್‍ಪೋಸ್ಟ ಗಳಲ್ಲಿ ಕರ್ತವ್ಯ ನಿರ್ವಹಿಸದೇ ಅನಧಿಕೃತ ಗೈರಹಾಜರಾಗಿ, ಕರ್ತವ್ಯ ಲೋಪವೆಸಗಿರುವುದರಿಂದ ಇವರ ವಿರುದ್ದ ವಿಲಾಖಾ ವಿಚಾರಣೆ ಬಾಕಿ ಇರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶ ಹೊರಡಿಸಲಾಗಿದೆ.