ಚಡಚಣ : ತೆಂಗಿನಕಾಯಿ ಹರಿಯಲು ಹೋದಾಗ ಮೂವರ ಮೇಲೆ ಐವರು ಕಟ್ಟಿಗೆ, ರಾಡ್‌ನಿಂದ ಹಲ್ಲೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಅರ್ಜನಾಳ ಗ್ರಾಮದಲ್ಲಿ ನಡೆದಿದೆ. ಪ್ರಜ್ವಲ್ ಪೂಜಾರಿ, ದಯಾನಂದ ಪೂಜಾರಿ, ಸ್ವರೂಪ ಅ ಪೂಜಾರಿ ಹಲ್ಲೆಗೊಳಗಾದವರು.
ಶ್ರೀಧರ್ ಪೂಜಾರಿ.. ಭೀಮಾಶಂಕರ ಪೂಜಾರಿ, ತನ್ಮಯ ಪೂಜಾರಿ, ಅನಿತಾ ಪೂಜಾರಿ, ವಿದ್ಯಾ ಪೂಜಾರಿ ಹಲ್ಲೆಗೈದವರು. ಇನ್ನೂ 45 ಎಕರೆ ಜಮೀನು ಮೂರು ಪಾಲು ಮಾಡದೇ ಶ್ರೀಧರ್ ಪೂಜಾರಿ, ಮತ್ತೋರ್ವ ಜಮೀನು ಹಂಚಿಕೆ ಮಾಡಿಕೊಂಡಿದ್ದಾರೆ. ಅದಕ್ಕಾಗಿ ಜಮೀನಿನಲ್ಲಿ ಪಾಲು ನೀಡುವಂತೆ ದಯಾನಂದ ಪೂಜಾರಿ ಕೇಳಿದಕ್ಕೆ ಕ್ಷುಲ್ಲಕ ಕಾರಣಕ್ಕೆ ರಾಡ್, ಕಲ್ಲು ಒಡೆಯಲು ಬಳಸುವ ಗನ್‌ನಿಂದ ಹಲ್ಲೆಗೈದಿದ್ದಾರೆ. ಝಳಕಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.


















