ಇಂಡಿ : ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಜೀವನ ಚರಿತ್ರೆ ಕುರಿತು ಹಮ್ಮಿಕೊಂಡ ಸ್ಪರ್ಧಾತ್ಮಕ ಪರೀಕ್ಷೆಗೆ ಸುಮಾರು 500 ಅಭ್ಯರ್ಥಿಗಳು ಪರೀಕ್ಷೆ ಎದುರಿಸಿದರು.
ಪಟ್ಟಣದ ರಮಬಾಯಿ ಪ್ರೌಢ ಶಾಲೆಯಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ 132 ನೇ ಜಯಂತ್ಯೋತ್ಸವದ ಅಂಗವಾಗಿ ಎಸ್ಸಿ ಎಸ್ಟಿ ಹಾಸ್ಟೇಲ್ ವಿದ್ಯಾರ್ಥಿಗಳಿಂದ ಸ್ಪರ್ಧಾತ್ಮಕ ಪರೀಕ್ಷೆ ಹಮ್ಮಿಕ್ಕೊಳ್ಳಲಾಗಿತ್ತು.
ಈ ಸಂಧರ್ಭದಲ್ಲಿ ಮಾತನಾಡಿದ ಬಹುಜನ ಸಮಾಜದ ಮುಖಂಡ ನಾಗೇಶ್ ಶಿವಶರಣ ಅವರು, ಬಾಬಾಸಾಹೇಬ್ ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿದ್ದರು. ಮಹಿಳೆಯರ ಶಿಕ್ಷಣಕ್ಕೆ ಸಾವಿತ್ರಿಬಾಯಿ ಫುಲೆಯವರು ಹಲವು ಕಷ್ಟ ಕಾರ್ಪಣ್ಯಗಳು ಪಟ್ಟರೂ ಛಲ ಬಿಡದೆ ಅವರಿಗಾಗಿ ಮೊಟ್ಟ ಮೊದಲು ಶಾಲೆಯನ್ನು ತೆರೆದಿದ್ದರು. ವಿದ್ಯಾರ್ಥಿಗಳಿಂದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿರುವ ಸ್ಪರ್ಧಾತ್ಮಕ ಪರೀಕ್ಷೆ ಯಶಸ್ವಿಯಾಗಲಿ ಹಾಗೂ ಎಲ್ಲ ಜಾತಿ ಜನಾಂಗ ಈ ಮಹನೀಯರ ಜೀವನ ಚರಿತ್ರೆ ಓದಿ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲಿ ಎಂದು ಸಲಹೆ ನೀಡಿದರು .
ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಥಮ ದ್ವಿತೀಯ ತೃತಿಯ ಬಹುಮಾನವನ್ನು ಬರುವ ಎಪ್ರಿಲ್ ತಿಂಗಳಲ್ಲಿ ಅಂಬೇಡ್ಕರ್ ಜಯಂತಿಯಂದು ವಿತರಿಸಲಾಗುವುದು ಎಂದು ತಿಳಿಸಿದರು .
ಈ ಸಂಧರ್ಭದಲ್ಲಿ ಹಿರಿಯ ಮುಖಂಡರು ಭೀಮಾಶಂಕರ ಮೂರಮನ, ಸಿದ್ಧಾರ್ಥ ಹಳ್ಳದಮನಿ, ಧರ್ಮರಾಜ ಕಾಲೇಬಾಗ , ಆಯೋಜಕ ವಿದ್ಯಾರ್ಥಿಗಳಾದ ಹಣಮಂತ ಮೇಲಿನಮನಿ, ರಮೇಶ್, ಮಲ್ಲಿಕಾರ್ಜುನ ಕಟ್ಟಿಮನಿ ನಿಲಯ ಪಾಲಕರಾದ ಮಲ್ಲಪ್ಪ ಹಳ್ಳದಮನಿ, ಶಿಕ್ಷಕರಾದ ನಿಜಣ್ಣ ಕಾಳೆ , ಆನಂದ ಕಳಸಗೊಂಡ ಮತ್ತು ಎಸ್ಸಿ ಎಸ್ಟಿ ವಸತಿ ನಿಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.